BJP vs Congress ಕಾಂಗ್ರೆಸ್ vs ಬಿಜೆಪಿ ಟ್ವೀಟ್ ವಾರ್ ಜೋರು
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಬದಲಿ ನಿವೇಶನ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರ ನಡುವೆ ಬಿಜೆಪಿ ನಡೆಯನ್ನು ಖಂಡಿಸಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಇದರಲ್ಲಿ ತಂದಿಟ್ಟು ತಮಾಷೆ ನೋಡುವ, ಮನೆ ಹಾಳು ಬುದ್ಧಿಯ ಬಿಜೆಪಿಗೆ ಕಾಂಗ್ರೆಸ್‌ನ ಒಗ್ಗಟ್ಟು ಸಹಿಸಲು ಆಗುತ್ತಿಲ್ಲ ಎಂದು ಹೇಳಿದೆ. ಈ ಸಂಬಂಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಟ್ವೀಟ್‌ಗಳ ವಿವರ ಇಲ್ಲಿದೆ.
ತಂದಿಟ್ಟು ತಮಾಷೆ ನೋಡುವ, ಮನೆಹಾಳು ಬುದ್ಧಿ: ಬಿಜೆಪಿಗೆ ತಂದಿಟ್ಟು ತಮಾಷೆ ನೋಡುವ, ಮನೆಹಾಳು ಬುದ್ಧಿ ಇದೆ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಸಹಿಸಲಾಗುತ್ತಿಲ್ಲ. ಈ ವಿಷಯ ಈಗ ಖಾತರಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ದೆಹಲಿಯಿಂದ ಹಳ್ಳಿವರೆಗೂ ಪ್ರತಿಯೊಬ್ಬರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ನಿಮ್ಮ (ಬಿಜೆಪಿ) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬೆನ್ನಿಗೆ ಎಷ್ಟು ಜನ ನಿಂತಿದ್ದಾರೆ. ಅವರ ಬೆನ್ನಿಗೆ ಚೂರಿ ಹಾಕಲು ಎಷ್ಟು ಜನ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಹ ಬಹಿರಂಗಪಡಿಸಿ. ವಿಜಯೇಂದ್ರ ಅವರನ್ನು ಅಧಿಕಾರದಿಂದ ಇಳಿಸಲು ಬಂಡಾಯ ಬಣಕ್ಕೆ ತೆರೆ ಮರೆಯಲ್ಲಿ ಕೀ ಕೊಡುತ್ತಿರುವ ಕಾಣದ ಕೈ ಯಾವುದು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ನಿಮ್ಮ ಮಾತೃ ಪರಿವಾರವೇ ಅಥವಾ ಹಿರಿಯ ನಾಯಕರನ್ನು ಬಳಸಿ ಬಿಸಾಡುವ ಮನಸ್ಥಿತಿ ಹೊಂದಿರುವ ಕೇಂದ್ರದ ನಾಯಕರೇ ಹೇಳಿ ಎಂದು ಕೇಳಿದೆ.
ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಂಡು ಹಾದಿ ಬೀದಿಯಲ್ಲಿ ಬಂಡಾಯ ಬಾವುಟ ಹಾರಿಸುತ್ತಿರುವವರಿಗೆ ರಾಜಾತಿಥ್ಯ ನೀಡುತ್ತಿದ್ದೀರಿ. ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಸುಳ್ಳು ಸುದ್ದಿ ಹರಿಬಿಡುತ್ತಿರುವುದನ್ನು ನೋಡಿ ನಗಬೇಕೋ, ಅಳಬೇಕೋ ಎನ್ನುವುದೇ ತಿಳಿಯುತ್ತಿಲ್ಲ ಎಂದು ಹೇಳಿದೆ.
ಮಾನಗೆಟ್ಟ ಬಿಜೆಪಿ: ಮತ್ತೊಂದು ಟ್ವೀಟ್‌ನಲ್ಲೂ ಬಿಜೆಪಿಯನ್ನು ತೀಕ್ಷ್ಣವಾಗಿ ಟೀಕಿಸಲಾಗಿದೆ. ಮಾನಗೆಟ್ಟ ಬಿಜೆಪಿ ಕರ್ನಾಟಕದ ಪಕ್ಷದ ಮುಕ್ಕಾಲು ಪಾಲು ನಾಯಕರ ಮೇಲೆ ಭ್ರಷ್ಟಾಚಾರ, ಅನಾಚಾರದ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈಗಾಗಲೇ
ಹಲವು ಬಿಜೆಪಿ ನಾಯಕರ ಹಗರಣದ ತನಿಖೆ ಪ್ರಗತಿಯಲ್ಲಿದೆ. ಇನ್ನೊಂದು ಕಡೆ ಸಾಲು ಸಾಲು ಬಿಜೆಪಿ ನಾಯಕರು ಕೋರ್ಟಿನಲ್ಲಿ ಸಿಡಿಗೆ ತಡೆಯಾಜ್ಞೆ ತಂದಿದ್ದಾರೆ. ಈ ಮೂಲಕ ಕಾನೂನಿನ ಮರೆಯಲ್ಲಿ ತಮ್ಮ ಮಾನ ಮುಚ್ಚಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಂದಿಟ್ಟು ತಮಾಷೆ ನೋಡುವ, ಮನೆಹಾಳು ಬುದ್ಧಿಯ @BJP4Karnataka ಗೆ ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಸಹಿಸಲಾಗುತ್ತಿಲ್ಲ ಎಂಬುದು ಮತ್ತೆ ಖಾತರಿಯಾಗಿದೆ. ನಮ್ಮ ಪಕ್ಷದಲ್ಲಿ ದಿಲ್ಲಿಯಿಂದ ಹಳ್ಳಿವರೆಗೂ ಪ್ರತಿಯೊಬ್ಬರೂ ಸಿಎಂ @siddaramaiah ಅವರ ಬೆನ್ನಿಗೆ ನಿಂತಿದ್ದಾರೆ.
— Karnataka Congress (@INCKarnataka) September 28, 2024
ಅಂದಹಾಗೆ, ನಿಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನಿಗೆ ಎಷ್ಟು…
ಸ್ವತಃ ಬಿಜೆಪಿ ನಾಯಕರೇ ತಮ್ಮ ಪಕ್ಷದವರ ಭ್ರಷ್ಟಾಚಾರದ ಕತೆಗಳನ್ನು ಬಿಚ್ಚಿಟ್ಟಿದ್ದಾರೆ. ಈ ರೀತಿ ಜಗತ್ತಿನ ಅತಿ ಭ್ರಷ್ಟ ರಾಜಕೀಯ ಪಕ್ಷವಾಗಿರುವ ಬಿಜೆಪಿಯವರು ಸಿದ್ದರಾಮಯ್ಯನವರ ವಿರುದ್ಧ ಪುರಾವೆಯೇ ಇಲ್ಲದಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ಮಾತಾಡುವುದು ಗೂಬೆಗಳು ತೋಡಿ ರಾಗ ಹಾಡಿದಂತೆಯೇ ಸರಿ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ & ಬಿಜೆಪಿ ಟ್ವೀಟ್ ವಾರ್: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪರಸ್ಪರ ಟ್ವೀಟ್ ವಾರ್ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದ್ದರೆ, ಟ್ವೀಟ್‌ಗಳ ಮೂಲಕವೇ ಕಾಂಗ್ರೆಸ್ ಟಾಂಗ್ ಕೊಡುತ್ತಿದೆ.












Click it and Unblock the Notifications