ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ ಎಂದು ಹೇಳಿದೆ.

ಬೆಂಗಳೂರು, ಜನವರಿ 30; ಕರ್ನಾಟಕ ಕಾಂಗ್ರೆಸ್ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. 'ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ!' ಎಂದು ಹೇಳಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಸಮಾರಂಭದಲ್ಲಿ ಖಾಲಿ ಕುರ್ಚಿಗಳು ಇರುವ ವಿಡಿಯೋವನ್ನು ಸಹ ಸೇರಿಸಿದೆ.

ತನ್ನ ಟ್ವೀಟ್‌ನಲ್ಲಿ ಕಾಂಗ್ರೆಸ್, 'ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಮುಖ್ಯಮಂತ್ರಿ!. ಕನಿಷ್ಠ ನಾಲ್ಕು ಜನಪರ ಕೆಲಸ ಮಾಡದ @BJP4Karnataka ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುವುದಕ್ಕೆ ಪ್ರತಿ ಸಮಾರಂಭದಲ್ಲೂ ಕಾಣುವ ಖಾಲಿ ಕುರ್ಚಿಗಳೇ ಸಾಕ್ಷಿ' ಎಂದು ಹೇಳಿದೆ.

Congress Tweet Attack Against CM Basavaraj Bommai

'ಕುರ್ಚಿಗಳಿಗೆ ಜೀವವಿದ್ದಿದ್ದರೆ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಎದ್ದು ಹೊರಡುತ್ತಿದ್ದವು!' ಎಂದು ಟ್ವೀಟ್‌ನಲ್ಲಿ ಹೇಳುವ ಮೂಲಕ ಆಡಳಿತ ಪಕ್ಷದ ಸಮಾರಂಭಗಳಿಗೆ ಜನರು ಬರುತ್ತಿಲ್ಲ ಎಂದು ತಿಳಿಸಿದೆ.

Congress Tweet Attack Against CM Basavaraj Bommai

ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಹಿಸಿದ್ದ ಸಮಾರಂಭವೊಂದರ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. 'ಸಿಎಂ @BSBommai ಅವರ ಬೆಂಗಳೂರು ಅಭಿವೃದ್ಧಿಯನ್ನು ಕಣ್ತುಂಬಿಕೊಳ್ಳಲು ಬಂದಿರುವ ಖಾಲಿ ಕುರ್ಚಿಗಳು!!' ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆದ ಮುಖ್ಯಮಂತ್ರಿಗಳನ್ನು ವ್ಯಂಗ್ಯವಾಡಿದೆ.

ಹಂಪಿ ಉತ್ಸವದ ಬಗ್ಗೆಯೂ ಟ್ವೀಟ್; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಪಿ ಉತ್ಸವ 2023ರನ್ನು ಉದ್ಘಾಟನೆ ಮಾಡಿದ್ದರು. ಅಂದು ಸಹ ಖಾಲಿ ಕುರ್ಚಿಗಳಿದ್ದವು. ಇದನ್ನು ಸಹ ಕಾಂಗ್ರೆಸ್ ಟ್ವೀಟ್‌ ಮಾಡಿ ವ್ಯಂಗ್ಯವಾಡಿತ್ತು.

'ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. @BJP4Karnataka ಸರ್ಕಾರದ ಬಗ್ಗೆ ಜನತೆಗಿರುವ ಅಸಹನೆ, ಆಕ್ರೋಶಕ್ಕೆ ಖಾಲಿ ಕುರ್ಚಿಗಳು ಸಾಕ್ಷಿ ಹೇಳುತ್ತಿವೆ' ಎಂದು ಕಾಂಗ್ರೆಸ್ ಹೇಳಿತ್ತು.

'ಹಂಪಿ ಉತ್ಸವದಲ್ಲಿ ಖಾಲಿ ಕುರ್ಚಿಗಳನ್ನು ರಂಜಿಸಲು 4 ಕೋಟಿ ಖರ್ಚು ಮಾಡುವ ಅಗತ್ಯವಿತ್ತೇ @BSBommai ಅವರೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿತ್ತು.

ಮತ್ತೊಂದು ಟ್ವೀಟ್‌ನಲ್ಲಿ, 'ಬೊಮ್ಮಾಯಿ ಅವರೇ ಖಾಲಿ ಕುರ್ಚಿಗಳನ್ನು ರಂಜಿಸಲು ಹಂಪಿ ಉತ್ಸವಕ್ಕೆ ಸರ್ಕಾರ 4 ಕೋಟಿ ಖರ್ಚು ಮಾಡಿದ್ದು ನಾಚಿಕೆಗೇಡು ಅಲ್ಲವೇ?. ಮಕ್ಕಳ ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಹಣವಿಲ್ಲ. ಅಂಗನವಾಡಿಗಳಿಗೆ ಅನುದಾನವಿಲ್ಲ. ಪರಿಶಿಷ್ಠ ವಿದ್ಯಾರ್ಥಿಗಳ ಹಾಸ್ಟೆಲ್ ಸಮಸ್ಯೆ ಬಗಹರಿದಿಲ್ಲ. ಉತ್ಸವಕ್ಕೆ ಇರುವ ಹಣ ಜನಪರ ಯೋಜನೆಗಳಿಗೆ ಏಕಿಲ್ಲ?' ಎಂದು ಪಕ್ಷ ಟೀಕಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+