ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ಕೇಂದ್ರದ ಮುಂದಿಟ್ಟ ಕಾಂಗ್ರೆಸ್ನ ಪ್ರಮುಖ ಪ್ರಶ್ನೆಗಳೇನು?
ಬೆಂಗಳೂರು: ಭಾರತ ಸರ್ಕಾರ ಅಮೆರಿಕೆದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ರೈತರಿಗೆ ದ್ರೋಹ ಬಗೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಇದರ ಬೆನ್ನಲ್ಲೆ ಕರ್ನಾಟಕ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದೆ.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ ಬಗೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ ಮೂಲಕ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಒಪ್ಪಂದದ ಕುರಿತು ಪ್ರಧಾನಮಂತ್ರಿಯವರಲ್ಲಿ ಕೆಲವು ಸರಳ ಪ್ರಶ್ನೆಗಳನ್ನು ಕೇಳಲಾಗಿದ್ದು ಉತ್ತರಿಸುವಿರಾ? ಎಂದು ಕೇಳಿದೆ.

ವ್ಯಾಪಾರ ಒಪ್ಪಂದ ಬಗ್ಗೆ ಕಾಂಗ್ರೆಸ್ನ ಪ್ರಶ್ನೆಗಳೇನು?
1. DDG ಆಮದು ಎಂದರೆ ಏನು? ಇದರರ್ಥ ಭಾರತೀಯ ಜಾನುವಾರುಗಳಿಗೆ ಆಹಾರವಾಗಿ ಜಿಎಂ (ತಳಿಪರಿವರ್ತಿತ) ಅಮೆರಿಕನ್ ಮೆಕ್ಕೆಜೋಳದಿಂದ ತಯಾರಿಸಿದ 'ಡಿಸ್ಟಿಲರ್ಸ್ ಗ್ರೇನ್' (distillers grain) ನೀಡುವುದೇ? ಇದರಿಂದ ನಮ್ಮ ಹೈನುಗಾರಿಕೆ ಅಮೆರಿಕದ ಕೃಷಿ ಉದ್ಯಮದ ಮೇಲೆ ಅವಲಂಬಿತವಾಗುವುದಿಲ್ಲವೇ?.
2. ನಾವು ಜಿಎಂ ಸೋಯಾಬೀನ್ ಎಣ್ಣೆಯ ಆಮದಿಗೆ ಅನುಮತಿ ನೀಡಿದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ದೇಶಾದ್ಯಂತ ಇರುವ ಸೋಯಾ ಬೆಳೆಗಾರರ ಗತಿಯೇನು? ಈ ರೈತರು ಬೆಲೆ ಕುಸಿತದ ಹೊಡೆತವನ್ನು ತಡೆದುಕೊಳ್ಳುವುದು ಹೇಗೆ?
3. ನೀವು "ಹೆಚ್ಚುವರಿ ಉತ್ಪನ್ನಗಳು" (additional products) ಎಂದು ಹೇಳಿದಾಗ, ಅದರಲ್ಲಿ ಏನೇನು ಸೇರಿವೆ? ಇದು ಕಾಲಾನಂತರದಲ್ಲಿ ಬೇಳೆಕಾಳುಗಳು ಮತ್ತು ಇತರ ಬೆಳೆಗಳನ್ನು ಅಮೆರಿಕದ ಆಮದು ಮಾಡಿಕೊಳ್ಳಲು ಒತ್ತಡ ಹೇರುವ ಮುನ್ಸೂಚನೆಯೇ?
4. "ವ್ಯಾಪಾರೇತರ ಅಡೆತಡೆಗಳನ್ನು" (Non-trade barriers) ತೆಗೆದುಹಾಕುವುದು ಎಂದರೆ ಏನು?. ಭವಿಷ್ಯದಲ್ಲಿ ಭಾರತವು ಜಿಎಂ ಬೆಳೆಗಳ ಮೇಲಿನ ತನ್ನ ನಿಲುವನ್ನು ಸಡಿಲಗೊಳಿಸಿ, ನಮ್ಮ ರೈತರಿಂದ ಖರೀದಿ ಪ್ರಕ್ರಿಯೆಯನ್ನು (procurement) ದುರ್ಬಲಗೊಳಿಸಲು ಅಥವಾ ಎಂಎಸ್ಪಿ ಮತ್ತು ಸಬ್ಸಿಡಿ ಕಡಿಮೆ ಮಾಡಲು ಒತ್ತಡ ಎದುರಿಸಲಿದೆಯೇ?
5. ಒಮ್ಮೆ ಈ ಬಾಗಿಲು ತೆರೆದರೆ, ಪ್ರತಿ ವರ್ಷ ಅದು ಇನ್ನಷ್ಟು ತೆರೆಯದಂತೆ ನಾವು ಹೇಗೆ ತಡೆಯಬಹುದು? ಇದಕ್ಕೆ ತಡೆಗೋಡೆ ಇದೆಯೇ, ಅಥವಾ ಪ್ರತಿ ಬಾರಿಯ ಒಪ್ಪಂದದಲ್ಲಿ ಹಂತಹಂತವಾಗಿ ಹೆಚ್ಚಿನ ಬೆಳೆಗಳನ್ನು ಆಮದು ಮಾಡಲಾಗುತ್ತದೆಯೇ?
ಈ ವಿಚಾರಗಳ ಬಗ್ಗೆ ರೈತರಿಗೆ ಸ್ಪಷ್ಟತೆ ಸಿಗಲೇಬೇಕು. ಇದು ಕೇವಲ ಇಂದಿನ ವಿಷಯವಲ್ಲ. ಇದು ಭವಿಷ್ಯದ ಪ್ರಶ್ನೆ, ನಮ್ಮ ದೇಶದ ಕೃಷಿ ಕ್ಷೇತ್ರದ ಮೇಲೆ ಬೇರೆ ದೇಶವು ದೀರ್ಘಕಾಲದ ಹಿಡಿತ ಸಾಧಿಸಲು ನಾವು ಅವಕಾಶ ಮಾಡಿಕೊಡುತ್ತಿದ್ದೇವೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಯುಎಸ್ ಜತೆಗಿನ ವ್ಯಾಪಾರ ಕುರಿತು ರಾಹುಲ್ ಗಾಂಧಿ ಅವರು, ರೈತರಿಗೆ ಮತ್ತು ಜವಳಿ ರಫ್ತುದಾರರಿಗೆ ಈ ಒಪ್ಪಂದದಿಂದ ಗಂಭೀರ ಪರಿಣಾಮ ಉಂಟಾಗಲಿದೆ. ದೇಶ ಜವಳಿ ರಫ್ತುದಾರರಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದರೆ ಬಾಂಗ್ಲಾದೇಶದ ಜವಳಿ ರಫ್ತಿಗೆ ಶೂನ್ಯ ಸುಂಕ ವಿಧಿಸಲಾಗಿದೆ. ಅಮೆರಿಕಾದಿಂದ ಹತ್ತಿ ಆಮದು ಮಾಡಿಕೊಂಡರೆ ಭಾರತದ ಹತ್ತಿ ಬೆಳೆಗಾರರಿಗೆ ಹಾನಿ ಉಂಟಾಗುತ್ತದೆ ಎಂದು ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ನಡೆ ಖಂಡಿಸಿದರು.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications