ಸೆಪ್ಟೆಂಬರ್ ನಲ್ಲಿ 'ದಾರಿದ್ರ್ಯ' ಬಂದಿದ್ದು ಯಾರಿಗೆ ಜೆಡಿಎಸ್‌ಗೋ? ಬಿಜೆಪಿಗೋ?: ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು, ಸೆಪ್ಟಂಬರ್ 14: ಆಗಸ್ಟ್ ನಲ್ಲಿ ಇರದ ದಾರಿದ್ರ್ಯ ಸೆಪ್ಟೆಂಬರ್ ನಲ್ಲಿ ಬಂದಿದ್ದು ಯಾರಿಗೆ, ಜೆಡಿಎಸ್ ಗೋ? ಬಿಜೆಪಿಗೋ? ಎಂದು ಕರ್ನಾಟಕ ಕಾಂಗ್ರೆಸ್ ಜೆಡಿಎಸ್ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕಿಡಿ ಕಾರಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಲೇವಡಿ ಮಾಡಿದೆ.

ಪಕ್ಷದ ಉಳಿವಿನ ದೃಷ್ಟಿಯಿಂದಲೇ, ಚುನಾವಣೆ ದೃಷ್ಟಿಯಿಂದಲೂ ಈಗಾಗಲೇ ಕರ್ನಾಟಕ ಸ್ಥಳೀಯ ಪಕ್ಷ ಜೆಡಿಎಸ್ ರಾಷ್ಟ್ರೀಯ ಪಕ್ಷ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ವೇದಿಕೆ ಮೇಲೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರೇ ತಿಳಿಸಿದ್ದಾರೆ.

congress-slams-against-bjp-jds-alliance

ಇನ್ನೂ ಎಚ್‌ಡಿ ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ಕೇಂದ್ರದ ನಾಯಕರ ಜತೆ ಮಾತುಕತೆ ನಡೆಸಿದ್ದು, ಮೈತ್ರಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಈ ಕುರಿತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗುರುವಾರ ಟ್ವೀಟ್ ಮಾಡಿ ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಮಾಜಿ ಸಿಎಂ ಎಚ್‌ಡಿ ಕುಮಾರ ಸ್ವಾಮಿ ಅವರೊಂದಿಗೆ ಹೋಗುವ ದಾರಿದ್ರ್ಯ ಬಿಜೆಪಿಗೆ ಬಂದಿಲ್ಲ ಎಂದಿದ್ದರು ಬಿಜೆಪಿ ನಾಯಕ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದರು. ಇದಷ್ಟೇ ಅಲ್ಲದೇ ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೆಲ್ಲ ಬಂದಿಲ್ಲ ಎಂದಿದ್ದರು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ಸಹ ಹೇಳಿದ್ದರು.

‌ಉಭಯ ಪಕ್ಷಗಳನ್ನು ಜನರ ನಂಬಿಕೆಗೆ ಅರ್ಹವಲ್ಲ

ಇದೀಗ ಯೂಟರ್ನ್ ಹೊಡೆದು ಬಿಜೆಪಿ- ಜೆಡಿಎಸ್ ಒಂದಾಗುತ್ತಿವೆ. ಮೈತ್ರಿಗೆ ಸಿದ್ಧವಾಗಿದೆ. ಇಂತಹ ಯೂಟರ್ನ್ ಗಳಿಂದ ‌ಉಭಯ ಪಕ್ಷಗಳನ್ನು ರಾಜ್ಯದ ಜನತೆ ನಂಬಿಕೆಗೆ ಅರ್ಹವಲ್ಲ ಎಂದು ತೀರ್ಮಾನಿಸಿ ಹೀನಾಯವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಎರಡು ಪಕ್ಷಗಳ ನಡೆಯನ್ನು ಕಟುವಾಗಿ ಟೀಕಿಸಿದೆ.

ಹಾಗಾದರೆ ದಾರಿದ್ರ್ಯ ಬಂದಿದ್ದು ಯಾರಿಗೆ ಎಂಬುದನ್ನು ಉಭಯ ಪಕ್ಷಗಳೂ ಅವಲೋಕನ ನಡೆಸಿ ರಾಜ್ಯದ ಜನತೆಗೆ ತಿಳಿಸಲಿ ಎಂದು ರಾಜ್ಯ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿಯ ಕಾಲೆಳೆದಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕದಲ್ಲಿ ಕಟ್ಟಿ ಹಾಕಲು ಜೆಡಿಎಸ್ ಬಿಜೆಪಿ ಒಂದಾಗುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿಗೆ ಯಾವ ಸಮಸ್ಯೆಗಳು ಇಲ್ಲವೆಂದು ಬುಧವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ನಾನು ನವದೆಹಲಿಗೆ ತೆರಳಿ ಮೈತ್ರಿ ಬಗ್ಗೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+