ಸಾರಿಗೆ ಸಿಬ್ಬಂದಿ ಸಾವಿನ ಸಂಖ್ಯೆ ಇಳಿಕೆ: ಕಾಂಗ್ರೆಸ್ ಹೇಳಿದ್ದೇನು?

ಕರ್ನಾಟಕದ ಸರ್ಕಾರಿ ಸಾರಿಗೆಗೆ ದೊಡ್ಡ ಹೆಸರು ಇದೆ, ಹಾಗೇ ರಾಜ್ಯದ ಸಾರಿಗೆ ದೇಶಾದ್ಯಂತ ಮಾದರಿ ಆಗುವಂತೆ ಬೆಳೆದಿದೆ. ಹೀಗಿದ್ದಾಗ 'ಶಕ್ತಿ ಯೋಜನೆ' ಮೂಲಕ ಕರ್ನಾಟಕ ಸರ್ಕಾರಿ ಸಾರಿಗೆ ಸಂಸ್ಥೆ ಮತ್ತಷ್ಟು ಬಲ ಪಡೆದಿದೆ. ಇದೇ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ಸಾವಿನ ಸಂಖ್ಯೆ ಕುರಿತು ಕಾಂಗ್ರೆಸ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ದೊಡ್ಡ ಪಾತ್ರವನ್ನೇ ವಹಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯುದ್ಧವೂ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿಯು ಅಸ್ತ್ರ ಮಾಡ್ಕೊಂಡು ನಿತ್ಯವು ವಾಗ್ದಾಳಿ ನಡೆಸುತ್ತಿದೆ. ಈ ಸಮಯದಲ್ಲೇ ಲೋಕಸಭೆ ಚುನಾವಣೆಯೂ ಬಂದಿದೆ, ಹೀಗಿದ್ದಾಗ ಶಕ್ತಿ ಯೋಜನೆ ಕೂಡ ದೊಡ್ಡ ಪ್ರಭಾವ ಬೀರುವ ಯೋಜನೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮಹತ್ವದ ಟ್ವೀಟ್ ಅನ್ನ ಮಾಡಿದೆ.

Congress Said That New Scheme Improved Health Of KSRTC & BMTC Staffs

ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್!

ಹೌದು ಈಗ ಕಾಂಗ್ರೆಸ್ ಮಾಡಿರುವ ಟ್ವೀಟ್ ನೋಡುವುದಾದರೆ, 'ಇದು ನಮ್ಮ ಸರ್ಕಾರದ ಆಡಳಿತದ ವೈಖರಿ, ಇದು ನಮ್ಮ ಜನಪರ ಚಿಂತನೆಯ ಬದ್ಧತೆ, ಜನರ ಹಿತ ಕಾಯುವುದೇ ಕಾಂಗ್ರೆಸ್ ಸರ್ಕಾರದ ಆದ್ಯತೆ. ಜಯದೇವ ಆಸ್ಪತ್ರೆಯೊಂದಿಗೆ ಸಾರಿಗೆ ನೌಕರರ ಅರೋಗ್ಯ ತಪಾಸಣೆಯ ಒಡಂಬಡಿಕೆ ಮಾಡಿಕೊಂಡ ನಂತರ ಸಾರಿಗೆ ನೌಕರರು ನಿಯಮಿತವಾಗಿ ತಪಾಸಣೆ, ಚಿಕಿತ್ಸೆ ಪಡೆದ ಪರಿಣಾಮ ಹೃದಯ ಸಂಬಂಧಿ ಕಾಯಿಲೆಗಳಿಂದ KSRTC ನೌಕರರ ಸಾವಿನ ಪ್ರಮಾಣ ಗಣನಿಯವಾಗಿ ಕಡಿಮೆಯಾಗಿದೆ.' ಎಂದಿದೆ ಕಾಂಗ್ರೆಸ್.

28 ಮಂದಿಯಲ್ಲಿ ಸಮಸ್ಯೆ...

ಹಾಗೇ ತನ್ನ ಟ್ವೀಟ್‌ನಲ್ಲಿ, 'ಈ ಯೋಜನೆ ಜಾರಿಯಾದ ಬಳಿಕ 3,526 ಮಂದಿಯ ತಪಾಸಣೆ ನಡೆಸಲಾಗಿತ್ತು, 28 ಮಂದಿಯಲ್ಲಿ ಸಮಸ್ಯೆ ಕಂಡುಬಂದಿತ್ತು, 22 ಜನರಿಗೆ ಸ್ಟಂಟ್ ಕೂಡ ಅಳವಡಿಸಲಾಗಿದೆ. ಚಿಕಿತ್ಸೆ ವೆಚ್ಚವನ್ನೂ ಸಾರಿಗೆ ನಿಗಮವೇ ಭರಿಸುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರ ಕಾಳಜಿಯಿಂದ ಸಾರಿಗೆ ನೌಕರರ ಬದುಕಲ್ಲಿ ನೆಮ್ಮದಿ ತುಂಬಿದೆ. ಜನಪರ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.' ಎಂದು ಕಾಂಗ್ರೆಸ್ ಈಗ ಟ್ವೀಟ್ ಮಾಡಿದೆ.

Congress Said That New Scheme Improved Health Of KSRTC & BMTC Staffs

ಒಟ್ನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನ ಹೈಪ್ ಮಾಡುತ್ತಿದೆ. ಆದರೆ ಬಿಜೆಪಿ ಈ ಬಗ್ಗೆ ಸಾಲು ಸಾಲು ಆರೋಪ ಮಾಡುತ್ತಿದ್ದು, ಈ ಬಗ್ಗೆ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದೆ. ಆದರೆ ಮತದಾರ ಪ್ರಭು ಈ ಬಗ್ಗೆ ತನ್ನದೇ ಲೆಕ್ಕಾಚಾರ ಹಾಕಿಕೊಂಡಿದ್ದು, ಯಾರ ಪರ ಲೋಕಸಭೆಯಲ್ಲಿ ನಿಲ್ಲುತ್ತಾನೆ? ಅನ್ನೋದನ್ನು ತಿಳಿಯಲು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+