ಯಡಿಯೂರಪ್ಪ ಶುಷ್ಕ 'ಬ್ರೇಕಿಂಗ್ ನ್ಯೂಸ್'ಗೆ ಕಾಂಗ್ರೆಸ್ ಟಾಂಗ್

'ಬ್ರೇಕಿಂಗ್ ನ್ಯೂಸ್' ನೀಡುತ್ತೇನೆಂದು ನಿನ್ನೆ ಟ್ವೀಟ್ ಮಾಡಿ ಭಾರಿ ಕುತೂಹಲ ಮೂಡಿಸಿದ್ದ ಬಿಎಸ್‌ವೈ ಕೊನೆಗೆ ನಿರೀಕ್ಷೆಗಳನ್ನೆಲ್ಲಾ ಸುಳ್ಳುಮಾಡಿ ಬ್ರೇಕಿಂಗ್ ಏನನ್ನೂ ನೀಡದೇ ಕೇವಲ ಕಾಂಗ್ರೆಸ್ ವಿರುದ್ಧ ಭಾಷಣ ಮಾಡಿದ್ದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಯಡಿಯೂರಪ್ಪ ಅವರ 'ಬ್ರೇಕಿಂಗ್ ನ್ಯೂಸ್' ಟ್ವಿಟರ್‌ ಅನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ವಚನ ಭ್ರಷ್ಟ ಯಡಿಯೂರಪ್ಪ, ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಿಕೊಡಲಾಗದವರು ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಂಡಾರು' ಎಂದು ಟ್ವೀಟ್ ಮಾಡಿದೆ.

ಟ್ವಿಟ್ಟಗರು ಸಹ ಯಡಿಯೂರಪ್ಪ ಅವರ ಬ್ರೇಕಿಂಗ್ ನ್ಯೂಸ್‌ ಅನ್ನು 'ಫೇಕ್ ಬ್ರೇಕಿಂಗ್' ಎಂದು ಕರೆದಿದ್ದು, ಚೆನ್ನಾಗಿ ಕಾಲೆಳೆದಿದ್ದಾರೆ. 'ಈ ರೀತಿ ಕಾಗೆ ಹಾರಿಸುವುದನ್ನು ಜಗ್ಗೇಶ್ ಅವರಿಂದ ಕಲಿತದ್ದಾ' ಎಂದು ಕೇಶವ ಎಂಬುವರು ಕಾಲೆಳೆದಿದ್ದಾರೆ. ಅರ್ಚನ್ ಗೌಡ ಎನ್ನುವರು ಮಾಡಿರುವ ಟ್ವೀಟ್ ನಗು ಹುಟ್ಟಿಸುವಂತಿದೆ 'ಮತ್ತೊಮ್ಮೆ ಹಾವು ಬಿಡುತ್ತೇನೆ ಎಂದು ಖಾಲಿ ಬುಟ್ಟಿಯನ್ನು ಯಡಿಯೂರಪ್ಪ ತೋರಿಸಿದ್ದಾರೆ' ಎಂದಿದ್ದಾರೆ ಅವರು.

Congress replies to BSY breaking news drama

ಬ್ರೇಕಿಂಗ್ ನ್ಯೂಸ್‌ ಗೂ ಭಾಷಣಕ್ಕೂ ವ್ಯತ್ಯಾಸವನ್ನೇ ಬಿಎಸ್‌ವೈ ಮರೆತಿರುವ ಹಾಗಿದೆ, ಸುಮ್ಮನೆ ನಮ್ಮ ಸಮಯ ಹಾಳು ಮಾಡಿದರು ಅಷ್ಟೆ ಎಂದು ಕೆಲವರು ಟೀಕಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಿದ್ರೆ ಸಾಕಾಗುತಿತ್ತು ಅದೇ ದೊಡ್ಡ ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು, ಜನತೆಗೂ ನೆಮ್ಮದಿ ಸಿಗುತ್ತಿತ್ತು ಎಂದು ಮಾಡಿರುವ ಟ್ವೀಟ್ ನಗು ಉಕ್ಕಿಸದೇ ಇರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+