ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ?

ಬೆಂಗಳೂರು, ಫೆಬ್ರವರಿ 9: ಲೋಕಸಭಾ ಚುಣಾವಣೆ ಹಿನ್ನಲೆ ಅಭ್ಯರ್ಥಿಗಳ ಆಯ್ಕೆಗಾಗಿ ಹಲವು ಸುತ್ತಿನ ಚರ್ಚೆಗಳ ನಂತರ ಕರ್ನಾಟಕ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಕೆಲವು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿ ಕಾಂಗ್ರೆಸ್‌ ನಿಂದ ಸಚಿವರನ್ನ ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರ ಚಿತ್ತವನ್ನು ಅವಲೋಕಿಸಲು ಉದ್ದೇಶಪೂರ್ವಕವಾಗಿ ಇಂತಹ ಪಟ್ಟಿಯನ್ನು ತೇಲಿಬಿಡಲಾಗುತ್ತಿದೆ ಮತ್ತು ಹೆಸರುಗಳನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ ಎಂದು ಕಾಂಗ್ರೆಸ್ ಮೂಲಗಳು ಸೂಚಿಸುತ್ತವೆ.

Congress’ probable list of candidates for Lok Sabha polls in Karnataka

ಸಂಭಾವ್ಯ ಪಟ್ಟಿಯಲ್ಲಿ ಮೂವರು ಸಚಿವರಿದ್ದು, ಬಹುತೇಕ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರಾಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಇತ್ತ ರಾಜ್ಯದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವಗುರಿಯನ್ನು ಕಾಂಗ್ರೆಸ್ ಹೊಂದಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಮಾತ್ರ ಗೆಲ್ಲುವು ಸಾಧಿಸಿದ್ದರು. ಆದರೆ, ಈ ಬಾರಿ 20 ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ

Congress’ probable list of candidates for Lok Sabha polls in Karnataka

ಕೆಪಿಸಿಸಿ ಆಂತರಿಕ ಚರ್ಚಾ ಪಟ್ಟಿ ಇಲ್ಲಿದೆ.

ಬೆಳಗಾವಿ : ಸತೀಶ್ ಜಾರಕಿಹೊಳಿ ಅಥವಾ ಜಾರಕಿಹೊಳಿ ಪುತ್ರಿ
ಚಾಮರಾಜನಗರ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್‌ ಬೋಸ್‌
ಚಿಕ್ಕೋಡಿ : ಲಕ್ಷ್ಮಣ್ ಸವದಿ ಪುತ್ರ ಅಥವಾ ಗಣೇಶ್ ಹುಕ್ಕೇರಿ ಶಿಫಾರಸ್ಸು ಸಾಧ್ಯತೆ
ಹಾವೇರಿ: ಹೆಚ್​ಕೆ ಪಾಟೀಲ್
ಮಂಗಳೂರು: ಯು ಟಿ ಖಾದರ್‌ ಅಥವಾ ಮಿಥುನ್‌ ರೈ
ಬಾಗಲಕೋಟೆ : ಸರ್ ನಾಯಕ್, ವೀಣಾ ಕಾಶಪ್ಪನವರ್ ಅಥವಾ ಸಂಯುಕ್ತ ಶಿವಾನಂದ ಪಾಟೀಲ್
ಕಲಬುರ್ಗಿ : ಮಲ್ಲಿಕಾರ್ಜುನ್ ಖರ್ಗೆ ಅಳಿಯ, ರಾಧಾಕೃಷ್ಣ ಹೆಸರು ಮುಂಚೂಣಿಯಲ್ಲಿ
ಉತ್ತರಕನ್ನಡ: ಆರ್​ವಿ ದೇಶಪಾಂಡೆ
ಮೈಸೂರು :ಲಕ್ಷ್ಮಣ್ ಹಾಗೂ ಶುಶ್ರುತ್ ಗೌಡ, ಯತೀಂದ್ರ ಸಿದ್ದರಾಮಯ್ಯ
ಬಳ್ಳಾರಿ: ಸೌಪರ್ಣಿಕಾ ತುಕಾರಾಂ ಅಥವಾ ವಿ.ಎಸ್‌.ಉಗ್ರಪ್ಪ
ಬೆಂಗಳೂರು ಉತ್ತರ : ಸಚಿವ ಕೃಷ್ಣಭೈರೇಗೌಡ
ಬೆಂಗಳೂರು ದಕ್ಷಿಣ: ಪ್ರಿಯಾಕೃಷ್ಣ
ಹಾಸನ : ಮಾಜಿ ಸಚಿವ ಬಿ.ಶಿವರಾಂ
ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅಥವಾ ವಿನಯ್ ಕುಮಾರ್‌
ಚಿತ್ರದುರ್ಗ: ಎಚ್.ಆಂಜನೇಯ
ತುಮಕೂರು: ಮುದ್ದೇಹನುಮೇಗೌಡ
ಶಿವಮೊಗ್ಗ : ನಟ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌
ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ಬೆಂಗಳೂರು ಗ್ರಾಮಾಂತರ: ಹಾಲಿ ಸದಸ್ಯ ಡಿ.ಕೆ.ಸುರೇಶ್‌
ಬೆಂಗಳೂರು ಕೇಂದ್ರ: ಸಚಿವ ಕೆ.ಜೆ.ಜಾರ್ಜ್‌, ಬಿ ಕೆ ಹರಿಪ್ರಸಾದ್
ಧಾರವಾಡ: ಶಿವಲೀಲಾ ಕುಲಕರ್ಣಿ
ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ
ಬೀದರ್‌: ಸಾಗರ್‌ ಖಂಡ್ರೆ
ಕೋಲಾರ: ಕೆ.ಎಚ್ ಮುನಿಯಪ್ಪ
ರಾಯಚೂರು : ಬಿವಿ ನಾಯಕ್
ದಕ್ಷಿಣ ಕನ್ನಡ: ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ
ಮಂಡ್ಯ : ಸ್ಟಾರ್‌ ಚಂದ್ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+