ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ

|
Google Oneindia Kannada News

Recommended Video

Karnataka Cabinet Expansion : ಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರ ಸಂಭಾವ್ಯ ಪಟ್ಟಿ

ಬೆಂಗಳೂರು, ಜೂನ್ 6: ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ ಬುಧವಾರ ಅಧಿಕೃತವಾಗಿ ಹೊರಬೀಳುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ ಮೈತ್ರಿ ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನಗಳನ್ನು ನೀಡಬೇಕು ಎಂಬುದನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ಅಂತಿಮಗೊಳಿಸಿದ್ದಾರೆ.

ಒಬ್ಬರಿಗೆ ಒಂದು ಹುದ್ದೆ ರಾಹುಲ್ ಸೂಚನೆ, ಡಿಕೆಶಿಗೆ ನಿರಾಸೆ!ಒಬ್ಬರಿಗೆ ಒಂದು ಹುದ್ದೆ ರಾಹುಲ್ ಸೂಚನೆ, ಡಿಕೆಶಿಗೆ ನಿರಾಸೆ!

ಸಂಭಾವ್ಯ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಮತ್ತು ನಾಯಕರು ಒಪ್ಪಿಕೊಂಡಿದ್ದು ಬುಧವಾರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

congress possible ministers list of coalition government

ಹಿರಿಯ ಶಾಸಕರ ಬದಲು ಹೊಸ ಮುಖಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ಈ ಹಿಂದೆ ತೀರ್ಮಾನಿಸಿತ್ತು. ಆದರೆ, ಈ ಕುರಿತು ಹಿರಿಯ ನಾಯಕರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಭವ ಮತ್ತು ಹಿರಿತನದ ಆಧಾರದಲ್ಲಿ ಅವರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಹೊಸ ಮುಖಗಳಿಗೆ ಅವಕಾಶ ನೀಡದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಸದ್ಯಕ್ಕೆ 15 ಶಾಸಕರ ಪಟ್ಟಿಯನ್ನು ಅಧ್ಯಕ್ಷ ರಾಹುಲ್ ಗಾಂಧಿ ಸಿದ್ಧಪಡಿಸಿದ್ದಾರೆ.

ಕಾಂಗ್ರೆಸ್ ಸಂಪುಟ ವಿಸ್ತರಣೆ ಕಸರತ್ತು ಬುಧವಾರ ಬೆಳಿಗ್ಗೆಗೆ ಮುಂದೂಡಿಕೆ ಕಾಂಗ್ರೆಸ್ ಸಂಪುಟ ವಿಸ್ತರಣೆ ಕಸರತ್ತು ಬುಧವಾರ ಬೆಳಿಗ್ಗೆಗೆ ಮುಂದೂಡಿಕೆ

ಜಾತಿವಾರು, ಪ್ರದೇಶವಾರು ಲೆಕ್ಕಾಚಾರಗಳು, ಮಾನದಂಡಗಳ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಪಟ್ಟಿ ಅನ್ವಯ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ರೋಷನ್ ಬೇಗ್ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.

ಆದರೆ ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ಶಾಮನೂರು ಶಿವಶಂಕರಪ್ಪ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ನಟಿ ಜಯಮಾಲಾ ಅವರಿಗೂ ಅವಕಾಶ ನೀಡಲು ಮುಂದಾಗಿದೆ.

ಸಂಪುಟ ವಿಸ್ತರಣೆ, ಖಾತೆ ಹಂಚಿಕೆ : ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ!ಸಂಪುಟ ವಿಸ್ತರಣೆ, ಖಾತೆ ಹಂಚಿಕೆ : ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ!

ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದು ಗೆದ್ದಿದ್ದ ಜಮೀರ್ ಅಹ್ಮದ್ ಅವರಿಗೂ ಮೈತ್ರಿ ಸರ್ಕಾರದ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರ ಹೆಸರೂ ಇದರಲ್ಲಿ ಕೇಳಿಬರುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿ.ಕೆ.ಶಿವಕುಮಾರ್
ಹೆಚ್.ಕೆ.ಪಾಟೀಲ್
ಆರ್ .ವಿ.ದೇಶಪಾಂಡೆ
ಶಾಮನೂರು ಶಿವಶಂಕರಪ್ಪ
ಕೆ.ಜೆ. ಜಾರ್ಜ್
ಯು.ಟಿ.ಖಾದರ್
ಕೃಷ್ಣಬೈರೇಗೌಡ
ಶಿವಾನಂದ ಪಾಟೀಲ್
ಜಮೀರ್ ಅಹ್ಮದ್
ಶಿವಶಂಕರ್ ರೆಡ್ಡಿ
ಶಂಕರ್
ರಾಜಶೇಖರ್ ಪಾಟೀಲ್
ಪುಟ್ಟರಂಗಶೆಟ್ಟಿ
ಜಯಮಾಲಾ
ಪ್ರಿಯಾಂಕ್ ಖರ್ಗೆ

English summary
Congress will announce its final list of ministers on wednesday. Sources said that the 15 ministers list is already finalised. Here is the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X