ಕಾಂಗ್ರೆಸ್‌ 2 ನೇ ಪಟ್ಟಿ ಪ್ರಕಟ; ಬಂಡಾಯದ ಕ್ಷೇತ್ರಗಳಿಗೆ ಕೈ ಹಾಕದ ಹೈಕಮಾಂಡ್: ಮೂರನೇ ಪಟ್ಟಿ ಇನ್ನೂ ಕಗ್ಗಂಟು

ಬೆಂಗಳೂರು, ಏಪ್ರಿಲ್6:‌ ರಾಜ್ಯ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ಗುರುವಾರ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ನ ಎರಡನೇ ಪಟ್ಟಿಯಲ್ಲಿ ಕೆಲ ಕ್ಷೇತ್ರದಲ್ಲಿ ಟಿಕೆಟ್‌ ಗಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ನಾಯಕರಿಗೆ ಬಾರೀ ನಿರಾಸೆಯಾಗಿದೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಲು ಪಣ ತೊಟ್ಟಿರುವ ಕಾಂಗ್ರೆಸ್‌ ಪಕ್ಷವೂ ಆಪರೇಷನ್‌ ಹಸ್ತದ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಅಸಾಮಾಧಾನಿತರಿಗೆ ಗಾಳ ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿತ್ತು.

Congress Not Announced Candidates For Rebel Constituencies

ಇನ್ನು ಪಕ್ಷದ ನಾಯಕರನ್ನ ಕಡೆಗಣಿಸುವಂತಿಲ್ಲ, ಇತ್ತ ಅನ್ಯ ಪಕ್ಷದ ನಾಯಕರಿಗೆ ಟಿಕೆಟ್‌ ನೀಡುವುದನ್ನ ನಿರಾಕರಿಸುವಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲದಂತಾಗಿದೆ. ಈಗಾಗಲೇ 224 ಕ್ಷೇತ್ರಗಳಲ್ಲಿ 166 ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಣೆ ಮಾಡಿರುವ ಕಾಂಗ್ರೆಸ್‌ ಸಾಕಷ್ಟು ಬಂಡಾಯ ಹುಟ್ಟಿಕೊಂಡಿರುವ ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಣೆ ಮಾಡದೆ. ಯಾಗಿಗೆ ಟಿಕೆಟ್‌ ನೀಡಬೇಕು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿದೆ.

ಇನ್ನೂ 58 ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ ಬಿಜೆಪಿ ಪಟ್ಟಿ ಬಿಡುಗಡೆಯ ನಂತರ ಮೂರನೇ ಪಟ್ಟಿ ಬಿಡುಗಡೆಗೆ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಇನ್ನೂ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ ಸಾಕಷ್ಟು ಗೊಂದಲವಿರುವ ಕ್ಷೇತ್ರಗಳಿಗೆ ಟಚ್ ಮಾಡಿಡದೇ, ಗೊಂದಲಗಳಿಲ್ಲದ ಕ್ಷೇತ್ರಗಳಿಗೆ ಟಿಕೆಟ್‌ ನೀಡಿದೆ.

ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ ಗೊಂದಲ, ಬಂಡಾಯ ಎದುರಿಸುವ ಕ್ಷೇತ್ರಗಳಾಗಿವೆ. ಅತ್ಯಂತ ಕುತೂಹಲಕಾರಿ ಕ್ಷೇತ್ರ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿದ್ದು, ಮೂಡಿಗೆರೆ ಹಾಗೂ ತರೀಕೆರೆ ಕ್ಷೇತ್ರಗಳಲ್ಲಿಯೂ ಟಿಕೆಟ್‌ ಗೊಂದಲ ಮುಂದುವರೆದಿದೆ. ಇನ್ನೂ ಕಡೂರಿನಲ್ಲಿ ಈ ಬಾರಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ವೈ ಎಸ್‌ ವಿ ದತ್ತ ಅವರಿಗೆ ಹಾಕಿಲ್ಲ, ಹೀಗಾಗಿ ಚಿಕ್ಕಮಗಳೂರಲ್ಲೂ ಅದೇ ಸೂತ್ರ ಅನುಸರಿಸುತ್ತಾ ಕಾಂಗ್ರೆಸ್ ಎಂಬ ಚರ್ಚೆ ಶುರುವಾಗಿದೆ.

Congress Not Announced Candidates For Rebel Constituencies

ಪುಲಕೇಶಿನಗರದ ಟಿಕೆಟ್ ಇನ್ನು ಕಂಗಂಟು

ಇನ್ನೂ ಈಗಾಗಲೇ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಆದರೆ ಪುಲುಕೇಶಿನಗರದ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಘೋಷಣೆಯನ್ನ ಕಾಂಗ್ರೆಸ್‌ ಹೈಕಮಾಂಡ್‌ ಕಾಯ್ದಿರಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಹೆಸರು ಕೈ ತಪ್ಪಿದ ಹಿನ್ನೆಲೆ ಎರಡನೇ ಪಟ್ಟಿಗಾಗಿ ಕಾಯುತಿದ್ದ ಅಖಂಡಗೆ ಶ್ರೀನಿವಾಸ್‌ಮೂರ್ತಿಗೆ ಮತ್ತೆ ಬೇಸರವಾಗಿದೆ.

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲೂ ಇಲ್ಲ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು

ಹಾಸನ ಕ್ಷೇತ್ರದ ಅಭ್ಯರ್ಥಿ ವಿಚಾರ ಜೆಡಿಎಸ್‌ ಪಕ್ಷದಲ್ಲಿ ಮಾತ್ರವಲ್ಲ, ಕಾಂಗ್ರೆಸ್‌ ಪಕ್ಷದಲ್ಲೂ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಆಕಾಂಕ್ಷಿಗಳು ಕಡಿಮೆ ಇದ್ದರೂ ಅಭ್ಯರ್ಥಿಯನ್ನ ಕೈ ಹೈಕಮಾಂಡ್‌ ಫೈನಲ್‌ ಮಾಡಿಲ್ಲ. ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾದ ಬಳಿಕ ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಮಾಡಲು ಮುಂದಾಗಿದ್ದು, ಒಂದು ವೇಳೆ ಜೆಡಿಎಸ್‌ನಿಂದ ಸ್ವರೂಪ್ ಗೆ ಟಿಕೆಟ್ ಕೈ ತಪ್ಪಿದ್ರೆ ಗಾಳ ಹಾಕಲು ಹೈಕಮಾಂಡ್‌ ಪ್ಲಾನ್‌ ನಡೆಸಿದೆ ಎನ್ನಲಾಗಿದೆ.

ಕುಂದಗೋಳದಲ್ಲಿ ಕುಸುಮ ಶಿವಳ್ಳಿ ಟಿಕೆಟ್‌ ನೀಡದಂತೆ ಕೈ ಮುಖಂಡರು ಪಟ್ಟು

ಇನ್ನೂ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್​ ನಡುವೆ ಭಿನ್ನಮತ ಬುಗಿಲೆದ್ದಿದೆ. ಹೌದು ಈ ಬಾರಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಬಾರದೆಂದು ಕೆಲ ಕೈ ಮುಖಂಡರ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್​​​ ಟಿಕೆಟ್‌ ಆಕಾಂಕ್ಷಿಗಳ ಮನವೊಲಿಸಲು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹರಸಾಹಸ ಪಡುತ್ತಿದ್ದಾರೆ. ಶಿವಳ್ಳಿ ಕುಟುಂಬಕ್ಕೆ ಟಿಕೆಟ್‌ ನೀಡದಂತೆ ಕೆಲ ಮುಖಂಡರು ಪಟ್ಟು ಹಿಡಿದಿದ್ದು, ಕೈ ನಾಯಕರಿಗೆ ದೊಡ್ಡ ತಲೆನೋವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+