ಹೀರೋ ಆಗ್ತಾರಂತೆ ಪ್ರದೀಪ್ ಈಶ್ವರ್; ಹಾಗಾದ್ರೆ ರಾಜಕೀಯಕ್ಕೆ ಗುಡ್‌ಬೈ ಹೇಳ್ತಾರಾ?
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದವರು. ದಿಢೀರ್ ರಾಜಕಾರಣ ಪ್ರವೇಶಿಸಿದ ಅವರು ಸದ್ಯ ಶಾಸಕರಾಗಿರುವ ಜೊತೆಗೆ ತಮ್ಮದೇ ಸ್ಟೈಲಿನಿಂದ ಜನಮನ್ನಣೆ ಗಳಿಸಿದವರು. ಅದರಲ್ಲೂ ಇವರ ಹೇಳೋ ಡೈಲಾಗ್‌ಗಳಿಂದ ದೊಡ್ಡ ಫ್ಯಾನ್ ಬೇಸ್ ಕೂಡ ಇದೆ. ಮೈಕ್ ಹಿಡಿದು ನಿಂತರೆ ಜನರಿಗೆಲ್ಲ ಮಾತಲ್ಲೇ ಎನರ್ಜಿ ಕೊಡೋ ಇವರು, ರಾಜಕಾರಣಕ್ಕೆ ಗುಡ್‌ಬೈ ಹೇಳ್ತಿದ್ದಾರಾ? ಎನ್ನುವ ಮಾತುಗಳು ಕೇಳಿಬರುತ್ತಿವೆ.
ಚುನಾವಣಾ ಭಾಷಣದಲ್ಲಿ ಮಾತನಾಡಿದ್ದ ಇವರು, ʼಬುಜ್ಜೀ...ಮಮ್ಮಲ್ನಿ ಎವಡ್ರಾ ಆಪೇದಿʼ (ನಮ್ಮನ್ನ ಯಾರೋ ತಡೆಯೋದು) ಎನ್ನುವ ತೆಲುಗು ಡೈಲಾಗ್ ಹೇಳಿ ಥೇಟ್ ಸಿನಿಮಾ ಹೀರೋ ತರ ಮಿಂಚಿದ್ದರು. ಇನ್ನು ಚಿಕ್ಕಬಳ್ಳಾಪುರ ಆಂಧ್ರ ಗಡಿಗೆ ಹೊಂದಿಕೊಂಡಿರುವುದರಿಂದ ಇವರಿಗೆ ಕನ್ನಡದ ಜೊತೆಗೆ ತೆಲುಗು ಭಾಷೆಯನ್ನೂ ಸುಲಲಿತವಾಗಿ ಮಾತನಾಡಬಲ್ಲರು.

ಇವರ ಕ್ರೇಜ್ ನೋಡಿ ಅನೇಕರು ಪ್ರದೀಪ್ ಈಶ್ವರ್ ಸಿನಿಮಾ ಹೀರೋ ಆಗಬಹುದು ಎಂದೆಲ್ಲ ಮಾತನಾಡಿಕೊಂಡಿದ್ದರು. ಈಗ ಅದೇ ನಿಜವಾಗುವ ಕಾಲ ಸಮೀಪಕ್ಕೆ ಬಂದಿದೆ. ಇದು ಯಾವುದೋ ಗಾಳಿ ಮಾತಲ್ಲ. ತಮ್ಮ ಸಿನಿ ಕೆರಿಯರ್ ಬಗ್ಗೆ ಖುದ್ದು ಪ್ರದೀಪ್ ಈಶ್ವರ್ ಅವರೇ ರಿವೀಲ್ ಮಾಡಿದ್ದಾರೆ.
ಇಷ್ಟಕ್ಕೂ ಪ್ರದೀಪ್ ಈಶ್ವರ್ ನಟಿಸಲಿರುವ ಸಿನಿಮಾ ಯಾವುದು ಎಂಬುದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ, ಯಾರೊಂದಿಗೆ ನಟಿಸಲಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇವರು ನಟಿಸುತ್ತಿರುವುದು ಕನ್ನಡ ಸಿನಿಮಾದಲ್ಲೂ ಅಲ್ಲ, ಕನ್ನಡ ನಟರೊಂದಿಗೂ ಅಲ್ಲ. ಇವರು ನೇರವಾಗಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ʼಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಸಿನಿಮಾವೊಂದರಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದೆʼ ಎಂದು ಖುದ್ದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೊಂಡಿದ್ದಾರೆ. ನಾನು ಚಿರಂಜೀವಿ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಅವರ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ. ನಮ್ಮಿಬ್ಬರ ಸಮುದಾಯವೂ ಒಂದೇ. ನಾನು ಶಾಸಕನಾದ ಮೇಲೆ ಅವರ ಮನೆಗೂ ಕರೆಸಿಕೊಂಡಿದ್ದರು ಎಂದು ಅವರೊಂದಿಗೆ ನಂಟಿನ ಬಗ್ಗೆ ಹೇಳಿದ್ದಾರೆ.
Chikballapur MLA Pradeep Eashwar with Megastar Chiranjeevi.
— Ganesh (@relentlessrag) November 12, 2023
🔥🔥🔥 pic.twitter.com/zeYEILvGkA
ಇತ್ತೀಚೆಗೆ ನಟ ಪವನ್ ಕಲ್ಯಾಣ್ ಅವರು ಚುನಾವಣೆಯಲ್ಲಿ ಗೆದ್ದಾಗಲೂ ವಿಶ್ ಮಾಡಿದ್ದೆ. ಚಿರಂಜೀವಿ ಅವರೊಂದಿಗೆ ನಟಿಸುವ ಬಗ್ಗೆ ಮಾತುಕತೆಯೂ ಆಗಿದೆ. ಸದ್ಯ ಅವರು ಬೇರೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವುದರಿಂದ ಮುಂದಿನ ಚಿತ್ರದಲ್ಲಿ ಅವರೊಂದಿಗೆ ತೆರೆ ಹಂಚಿಕೊಳ್ಳುವುದಂತೂ ಗ್ಯಾರಂಟಿʼ ಎಂದಿದ್ದಾರೆ.

ಆದರೆ, ಯಾವ ಸಿನಿಮಾ? ಅದರಲ್ಲಿ ನನ್ನ ಪಾತ್ರ ಏನು ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ. ಚಿಕ್ಕಂದಿನಿಂದಲೂ ಚಿರು ಜೊತೆಗೆ ಡ್ಯಾನ್ಸ್ ಮಾಡಬೇಕೆಂಬುದು ನನ್ನ ಕನಸು ಎಂದೇ ಹೇಳಬಹುದು. ಹಾಗಾಗಿ ಅವರೊಂದಿಗೆ ಒಂದು ಸ್ಟೆಪ್ ಹಾಕಿದರೂ ಅದೇ ನನ್ನ ಭಾಗ್ಯ ಎಂದುಕೊಳ್ಳುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಪ್ರದೀಪ್ ಈಶ್ವರ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ.
ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನೇಮಕಗೊಂಡಿದ್ದರು. ಬಳಿಕ ನಟ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಿ ಬಂದಿದ್ದರು.












Click it and Unblock the Notifications