ಶೂನ್ಯ ನೇಮಕಾತಿಯಿಂದ- 10,000 ನೇಮಕಾತಿ ಮಹತ್ವದ ಟ್ವೀಟ್ ಮಾಡಿದ ಕಾಂಗ್ರೆಸ್
ಕರ್ನಾಟಕ ಸರ್ಕಾರವು ಸಾರಿಗೆ ನಿಗಮಗಳು ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಟ್ವೀಟ್ ಮಾಡಿದೆ. ಶೂನ್ಯ ನೇಮಕಾತಿಯಿಂದ- 10,000 ನೇಮಕಾತಿ ಹಾಗೂ ಶೂನ್ಯ ಬಸ್ಸುಗಳ ಸೇರ್ಪಡೆಯಿಂದ - 5800 ಹೊಸ ಬಸ್ಸುಗಳ ಸೇರ್ಪಡೆ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವು ಸುದೀರ್ಘ ಟ್ವೀಟ್ ಮಾಡಿದೆ. BJP Karnataka ಕೆಲವೊಂದು ಚಾಳಿಗಳನ್ನು ಬಿಡಿಸಲು ಸಾಧ್ಯವಿಲ್ಲ, ಅದೇ ರೀತಿ ನಿಮಗೆ ಟ್ವೀಟ್ ಮಾಡುವ ಚಾಳಿ. ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿನಗಳ ಕಾಲ ಮುಷ್ಕರ ಮಾಡಿಸಿ, ತಿಂಗಳು ತಿಂಗಳು ಮುಷ್ಕರ ಮಾಡುವುದಕ್ಕೆ ಅಡಿಪಾಯ ಹಾಕಿ ಕೊಟ್ಟ ಕೀರ್ತಿ ನಿಮಗೇ ಸಲ್ಲಬೇಕು.

ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ ಮುಷ್ಕರ ನಡೆದದ್ದು ಮರೆತುಬಿಟ್ಟೀರಾ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಮುಷ್ಕರದ ಹೆಸರಿನಲ್ಲಿ ಸಾವಿರಾರು ಸಂಖ್ಯೆಯ ನೌಕರರನ್ನು ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿ, ಅವರು ಇಂದಿಗೂ ಕೋರ್ಟ್, ಕಚೇರಿ ಅಲೆಯುತ್ತಿದ್ದಾರೆ ಇದಕ್ಕೆ ನಿಮ್ಮ ಉತ್ತರವೇನು ಎಂದು ಕೇಳಲಾಗಿದೆ.
ಅಲ್ಲದೇ ನಿಮ್ಮ ಆಡಳಿತದ ಅವಧಿಯಲ್ಲಿ ತಿಂಗಳಿಗೆ ಸರಿಯಾಗಿ ವೇತನ ಪಾವತಿ ಮಾಡದೆ ಅರ್ಧ ಸಂಬಳ ನೀಡುತ್ತಿದ್ದದ್ದರ ದಾಖಲೆ ಬೇಕೆ. ವೇತನ ಪರಿಷ್ಕರಣೆ ಮಾಡಿ ಹಣ ಪಾವತಿ ಮಾಡದೆ ಬಾಕಿ ಇಟ್ಟು ಹೋಗಿದ್ದೀರಲ್ಲ ಅದಕ್ಕೆ ಈಗ ಮುಷ್ಕರ ಮಾಡುತ್ತಿದ್ದಾರೆ. ನಿಮ್ಮ ಕಾಲದ ಬಾಕಿಗಾಗಿ ಈ ಮುಷ್ಕರ! ಇದಕ್ಕೆ ತಮ್ಮ ಉತ್ತರ. ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಕ್ಕೆ ಜಾಹೀರಾತು ನೀಡಬಹುದು. ಸಾರಿಗೆ ನೌಕರರನ್ನು ದಿನಂಪ್ರತಿ ಮುಷ್ಕರ ಮಾಡುವಂತೆ ಮಾಡಿ ಹೋಗಿರುವುದಕ್ಕೆ ಜಾಹೀರಾತು ನೀಡಲು ಬರುತ್ತದೆಯೇ ಪಾಪ, ತಮ್ಮ ಅಳಲು ನಮಗೆ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದೆ.
ನಮಗೆ ಅಡ್ಡಿಯಾಗಿರುವುದೇ ತಮ್ಮ ಕಾಲದ ಶೂನ್ಯ ಅಭಿವೃದ್ಧಿ ಕೆಲಸಗಳಿಗೆ ಕಾಯಕಲ್ಪ ನೀಡಲು.
☀️ ಕಳೆದ 2 ವರ್ಷ 5 ತಿಂಗಳಿನಲ್ಲಿ ಜಾರಿಗೆ ತಂದಿರುವ ಯೋಜನೆಗಳ ಸಣ್ಣ ಝಲಕ್ ಇಲ್ಲಿದೆ ನೋಡಿ 👇
✅ ಶೂನ್ಯ ನೇಮಕಾತಿಯಿಂದ- 10,000 ನೇಮಕಾತಿ
✅ ಶೂನ್ಯ ಬಸ್ಸುಗಳ ಸೇರ್ಪಡೆಯಿಂದ - 5800 ಹೊಸ ಬಸ್ಸುಗಳ ಸೇರ್ಪಡೆ
✅ ಹೊಸ ಘಟಕ/ ಬಸ್ ನಿಲ್ದಾಣಗಳ ನಿರ್ಮಾಣ
✅ ಹತ್ತು ಹಲವು ಕಾರ್ಮಿಕ ಕಲ್ಯಾಣ ಯೋಜನೆಗಳು - ರೂ.1 ಕೋಟಿ ಅಪಘಾತ ವಿಮೆ, ನಗದು ರಹಿತ ವೈದ್ಯಕೀಯ ಸೌಲಭ್ಯ.. ಈಗ ತಿಳಿಯಿತೇ ಅಡ್ಡಿಯ ಕಾರಣ ಎಂದು ಹೇಳಿದೆ.
ಬಿಜೆಪಿ ಟ್ವೀಟ್‌ನಲ್ಲಿ ಏನಿದೆ ?
ಇನ್ನು ಬಿಜೆಪಿ ಪಕ್ಷವು ಸೋಷಿಯಲ್ ಮೀಡಿಯಾದಲ್ಲಿ ತಿಂಗಳಿಗೊಮ್ಮೆ ಅಮಾವಾಸ್ಯೆ, ಹುಣ್ಣಿಮೆ ಬರುವ ರೀತಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಸಹ ತಿಂಗಳಿಗೊಮ್ಮೆ ಮುಷ್ಕರಗಳು ಉಂಟಾಗುತ್ತಿವೆ. ಇದೇ ಅಕ್ಟೋಬರ್ 15ರಿಂದ ಸರ್ಕಾರದ ವಿರುದ್ಧ ಮತ್ತೊಮ್ಮೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ. ಮಹಾನ್ ಸುಳ್ಳುಗಾರ ರಾಮಲಿಂಗ ರೆಡ್ಡಿ ಅವರೆ, ಕರ್ನಾಟಕ ಸಾರಿಗೆ ಸಂಸ್ಥೆ ಕಂಡು ಕೇಳರಿಯದಷ್ಟು ಲಾಭದಲ್ಲಿದೆ ಎಂದು ಪುಟಗಟ್ಟಲೆ ಜಾಹಿರಾತು ನೀಡುವ ನಿಮಗೆ, ನೌಕರರ ಬೇಡಿಕೆಗಳನ್ನು ಈಡೇರಿಸಲು ಅಡ್ಡಿಯಾಗಿರುವುದು ಏನು ಎಂದು ಪ್ರಶ್ನೆ ಮಾಡಿತ್ತು.












Click it and Unblock the Notifications