ಸಂಪುಟ ವಿಸ್ತರಣೆ: ಜು.18ಕ್ಕೆ ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚೆ
ಬೆಂಗಳೂರು, ಜುಲೈ 15: ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಹೈಕಮಾಂಡ್ ಜತೆ ಚರ್ಚಿಸಲು ಕಾಂಗ್ರೆಸ್ ಮುಖಂಡರು ಜುಲೈ 18ರಂದು ದೆಹಲಿಗೆ ಹಾರಲಿದ್ದಾರೆ.
ಬಜೆಟ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎರಡನೇ ಹಂತದ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಹೈಕಮಾಂಡ್ ಬಳಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ.
ಜುಲೈ 18ರಂದು ದೆಹಲಿಯಲ್ಲಿ ನಡೆಯುವ ಚರ್ಚೆಯಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ, ಉಪಾಧ್ಯಕ್ಷ, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಈ ವಿಷಯವನ್ನು ಜಿ.ಪರಮೇಶ್ವರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅತೃಪ್ತರಿಗೆ ಈ ಬಾರಿ ಮಣೆ ಹಾಕಲು ಕಾಂಗ್ರೆಸ್ ನಿಶ್ಚಯಿಸಿದ್ದು, ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಗ್ಯಾರೆಂಟಿ ಎನ್ನಲಾಗುತ್ತಿದೆ. ಉಳಿದ ಅತೃಪ್ತರು ನಿಗಮ ಮಂಡಳಿ ಸ್ಥಾನಗಳಿಗೆ ಸಮಾಧಾನ ಮಾಡಿಕೊಳ್ಳಬೇಕಿದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಿಗಮ ಮಂಡಳಿ ಸ್ಥಾನಗಳನ್ನು ಹಂಚಿಕೊಂಡಿದ್ದು ಕಾಂಗ್ರೆಸ್‌ಗೆ ಹೆಚ್ಚಿನ ಪಾಲು ದೊರೆತಿದೆ. ನಿನ್ನೆ ತಾನೇ ದೇವೇಗೌಡರು ತಮ್ಮ ಪಕ್ಷದ ಸಭೆಯಲ್ಲಿ 'ಜೆಡಿಎಸ್‌ಗೆ ನಿಗಮ ಮಂಡಳಿಗಳು ಕಡಿಮೆ ದೊರಕಲಿವೆ ಅವಕಾಶ ಸಿಗದವರು ಬೇಸರವಾಗುವುದು ಬೇಡ' ಎಂದಿದ್ದರು.












Click it and Unblock the Notifications