• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳು : ಕಾಂಗ್ರೆಸ್‌ ನಾಯಕರ ಭರ್ಜರಿ ಬಕ್ರೀದ್ ಭೋಜನ

|

ಬೆಂಗಳೂರು, ಆಗಸ್ಟ್ 12 : ನಾಡಿನಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡಿದರು. ಕರ್ನಾಟಕದ ಕಾಂಗ್ರೆಸ್ ನಾಯಕರು ಸಹ ಹಬ್ಬದ ಭೋಜನ ಸವಿದಿದ್ದು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಬಕ್ರೀದ್ ಭೋಜನ ಸವಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಎಚ್. ಸಿ. ಮಹದೇವಪ್ಪ ಸೇರಿದಂತೆ ಹಲವು ನಾಯಕರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.

ದಿ ಲೇಡಿ ಇನ್ ಕಾಟನ್ ಸ್ಯಾರಿ: ಸೋನಿಯಾ ಗಾಂಧಿ ನಿಜಕ್ಕೂ ಯಾರು?

ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಬಕ್ರೀದ್ ಭೋಜನ ಸವಿದಿದ್ದಾರೆ. ಮಾಜಿ ಸಚಿವ ಜಮೀದ್ ಅಹಮದ್ ಖಾನ್ ಈ ಚಿತ್ರಗಳನ್ನು ತಮ್ಮ ಫೇಸ್‌ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸರಳವಾಗಿ ಬಕ್ರೀದ್ ಆಚರಿಸಿದ ಕರಾವಳಿ ಮುಸ್ಲಿಮರು

ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚಣೆ ಮಾಡಿದರು. ಹಲವು ಜಿಲ್ಲೆಗಳಲ್ಲಿ ಮಳೆರಾಯ ರುದ್ರ ನರ್ತನವನ್ನು ನಿಲ್ಲಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು....

ಬಕ್ರೀದ್ ವಿಶೇಷ: ಈ ಬಾರಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬೇಡಿಕೆ

ಬಕ್ರೀದ್ ಭೋಜನ

ಬಕ್ರೀದ್ ಭೋಜನ

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ರಮೇಶ್ ಕುಮಾರ್, ಕೆ. ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಚ್. ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್ ಮುಂತಾದ ನಾಯಕರು ಸೋಮವಾರ ಬಕ್ರೀದ್ ಭೋಜನ ಸವಿದರು.

ಒಟ್ಟಾದ ಕಾಂಗ್ರೆಸ್ ನಾಯಕರು

ಒಟ್ಟಾದ ಕಾಂಗ್ರೆಸ್ ನಾಯಕರು

ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ನಿವಾಸದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಸೋಮವಾ ಸೇರಿದ್ದರು. ಒಟ್ಟಾಗಿ ಬಕ್ರೀದ್ ಭೋಜನ ಸವಿದರು, ಜಮೀರ್ ಅಹಮದ್ ಖಾನ್ ಈ ಪೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಭೋಜನ, ಚರ್ಚೆ

ಭೋಜನ, ಚರ್ಚೆ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡ ಬಳಿಕ ಪಕ್ಷದ ಹಲವು ನಾಯಕರು ಒಟ್ಟಾಗಿದ್ದರು. ಸಿದ್ದರಾಮಯ್ಯ ದೆಹಲಿಯಿಂದ ಭಾನುವಾರ ವಾಪಸ್ ಆಗಿದ್ದು, ರಾಜ್ಯದ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ನಾಯಕರು ಮಾತುಕತೆ ನಡೆಸುತ್ತಾ ಭೋಜನ ಸವಿದಿದ್ದಾರೆ.

ಫೋಟೋಗಳು ವೈರಲ್

ಫೋಟೋಗಳು ವೈರಲ್

ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಭೋಜನ ಸವಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜಮೀರ್ ಅಹಮದ್ ಫೇಸ್‌ ಬುಕ್ ಖಾತೆಯಲ್ಲಿ ಚಿತ್ರಗಳನ್ನು 116 ಜನರು ಶೇರ್ ಮಾಡಿದ್ದಾರೆ.

English summary
Karnataka Congress leaders lunch on Bakrid at MLC Naseer Ahmed house Bengaluru. Former CM Siddaramaiah and other leaders present in lunch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X