ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿನಿ ಮಾತನಾಡಿದರೆ ಬಣ್ಣ ಬಯಲಾಗುತ್ತದೆ: ಬಿಜೆಪಿಗೆ ಸಿದ್ದು ಎಚ್ಚರಿಕೆ

|
Google Oneindia Kannada News

Recommended Video

ಇತ್ತೀಚೆಗಷ್ಟೇ ಕಣ್ಣೀರು ಹಾಕಿದ್ದರು ಡಿಕೆ ಶಿವಕುಮಾರ್ | Oneindia Kannada

ಬೆಂಗಳೂರು, ಮೇ 10: ಮಾಜಿ ಸಚಿವ, ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿ.ಎಸ್. ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ಒತ್ತಡವೇ ಕಾರಣ ಎಂಬ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.

ತಮ್ಮ ಪಕ್ಷದ ಕುರಿತು ಮಾತನಾಡುವ ಮೊದಲು ನಿಮ್ಮ ಪಕ್ಷದಲ್ಲಿನ ಹುಳುಕನ್ನು ನೋಡಿಕೊಳ್ಳಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ: ಪೇಚಿಗೆ ಸಿಲುಕಿಸಿದ ಶ್ರೀರಾಮುಲು ಹೇಳಿಕೆ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ: ಪೇಚಿಗೆ ಸಿಲುಕಿಸಿದ ಶ್ರೀರಾಮುಲು ಹೇಳಿಕೆ

ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಉಂಟಾದ ಗೊಂದಲ ಮತ್ತು ವಿರೋಧಗಳನ್ನು ಅವರು ಬಿಜೆಪಿ ನಾಯಕರಿಗೆ ನೆನಪಿಸಿದ್ದಾರೆ.

Congress leader Siddaramaiah warned BJP will be exposed if Tejaswini Ananthkumar speak on torture

ತೇಜಸ್ವಿನಿ ಅನಂತ್ ಕುಮಾರ್ ಅವರು ಈ ರೀತಿಯ ಕಿರುಕುಳದ ಬಗ್ಗೆ ಮಾತನಾಡಿದರೆ ನಿಮ್ಮೆಲ್ಲರ ಬಣ್ಣ ಬಯಲಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಎಂದು ನಾಲಗೆ ಹರಿಬಿಟ್ಟಿರುವ ಬಿಜೆಪಿ ನಾಯಕರೇ, ದಿ.ಅನಂತಕುಮಾರ್‌ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ. ಎಲ್ಲವನ್ನೂ ಸಹಿಸಿಕೊಂಡಿರುವ ಧೈರ್ಯವಂತ ಹೆಣ್ಣುಮಗಳು ತೇಜಸ್ವಿನಿಯವರು ಬಾಯಿ ಬಿಟ್ಟರೆ ನಿಮ್ಮ‌ ಬಣ್ಣ ಬಯಲಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸುತ್ತಾರೆ: ಅಶೋಕ್ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸುತ್ತಾರೆ: ಅಶೋಕ್

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಅವರ ಹಿಂಬಾಲಕರು ಅಷ್ಟೇ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ರವಿ ಮತ್ತು ಎಸ್‌ಐ ಗಣಪತಿ ಅವರ ಸಾವು, ಇತರೆ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದರ ಬಗ್ಗೆ ಏನು ಎಂದು ಬಿಜೆಪಿ ಅನುಯಾಯಿಯಗಳು ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರಿಗೆ ಕಿರುಕುಳ ನೀಡಿದ್ದು ಮರೆತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ ಸಿದ್ದರಾಮಯ್ಯ ಅವರ ಅಭಿಮಾನಿಗಳು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

English summary
Congress leader slams BJP leaders on thier statements about former Minister CS Shivalli's death and said BJP will be exposed if former Union Minister Ananth Kumar's wife Tejaswini speak about party leaders torture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X