ಅಶ್ವತ್ಥ್ ನಾರಾಯಣರನ್ನು ಕೂಡಲೇ ಅರೆಸ್ಟ್ ಮಾಡಬೇಕು: ಸಲೀಂ ಅಹ್ಮದ್ ಆಗ್ರಹ
ಅಶ್ವತ್ಥ್ ನಾರಾಯಣ್ ಅವರಿಗೆ ನಾಚಿಕೆಯಾಗಬೇಕು,ಸಂವಿಧಾನದ ಮೇಲೆ ವೋಟ್ ತಗೋತಾರೆ, ಅವರನ್ನ ಕೂಡಲೇ ಅರೆಸ್ಟ್ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ
ಹುಬ್ಬಳ್ಳಿ,ಫೆಬ್ರವರಿ16: ಅಶ್ವತ್ಥ್ ನಾರಾಯಣ್ ಅವರಿಗೆ ನಾಚಿಕೆಯಾಗಬೇಕು,ಸಂವಿಧಾನದ ಮೇಲೆ ವೋಟ್ ತಗೋತಾರೆ, ಅವರನ್ನ ಕೂಡಲೇ ಅರೆಸ್ಟ್ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ದತೆ ತೋರಸುತ್ತದೆ. ಹೊಡಿ ಬಡಿ ಸರ್ಕಾರ ಬಿಜೆಪಿದು,
ಈ ಸರ್ಕಾರದ ಆಯಸ್ಸು ಕೇವಲ 60 ದಿನ, 60 ದಿನ ಆದ ಮೇಲೆ ಸರ್ಕಾರ ಹೋಗತ್ತದೆ, ಹೀಗಾಗಿ ಅವರು ಹುಚ್ಚಾಗಿ ಮಾತಾಡ್ತಾರೆ. ಸಿಟಿ ರವಿ,ಅಶ್ವಥ್ ನಾರಾಯಣ್ ಅವರದ್ದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತಾಡ್ತಾರೆ ಎಂದು ಹೇಳಿದರು.
ಮೋದಿ ನೂರು ಸಲ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆದೆ. ಇದು ಬಿಜೆಪಿ ಪಕ್ಷ ಅಲ್ಲ, ಭ್ರಷ್ಟಾಚಾರ ಜನತಾ ಪಾರ್ಟಿ,ಬ್ರೋಕರ್ ಜನತಾ ಪಾರ್ಟಿ. ರೈತರಿಗೆ ಪರಿಹಾರ ಕೊಡೋ ಯೋಗ್ಯತೆ ಇಲ್ಲ.
ಅದನ್ನು ಬಿಟ್ಟು ಟಿಪ್ಪು,ಸಾವರ್ಕರ್ ಬೇಕಾ ಎಂದು ಮಾತಾಡ್ತಿದಾರೆ ಎಂದು ಕಿಡಿಕಾರಿದರು.

ಇದು ಭ್ರಷ್ಟಾಚಾರದಲ್ಲಿ ಉದಯವಾದ ಪಾರ್ಟಿ,ಭ್ರಷ್ಟಾಚಾರದಲ್ಲಿ ಮುಳುಗಿದೆ. ಭಾವನಗೆಳಿಂದ ಸಮಾಜ ಒಡೆಯೋ ಕೆಲಸ ಮಾಡ್ತಿದ್ದಾರೆ. ಇವರು ಏನೇ ಮಾಡಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರತ್ತೆ, ರಾಜ್ಯದಲ್ಲಿ ನಾವು 100 ಸೀಟ್ ಗೆಲ್ತೀವಿ,ಅಲ್ಲಲ್ಲ 150 ಸೀಟ್ ಗೆಲ್ತೀವಿ ಎಂದು ತಡವರಿಸಿಕೊಂಡು ಸಲೀಂ ಅಹ್ಮದ್ ಹೇಳಿದರು.
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ. ಮಹಾತ್ಮಾ ಗಾಂಧೀಜಿಯರವರನ್ನೇ ಕೊಂದವರು ಇವರು, ಆರ್ ಎಸ್ ಎಸ್ ನವರು ಇಂತವರ ಬಾಯಿಯಿಂದ ಹೇಳಿಸಿದ್ದಾರೆ. ರಾಜ್ಯದಲ್ಲಿ ಚರ್ಚೆಯಾಗ ಬೇಕಿರುವುದು ಅಭಿವೃದ್ದಿ ವಿಚಾರ. ರೈತರ, ಬಡವರ ದಲಿತರು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಚುನಾವಣಾ ಪ್ರನಾಳಿಕೆಯಲ್ಲಿ ಬೇಕಿದ್ದರೆ ಬರೆದುಕೊಳ್ಳಲಿ ಎಂದು ಹೇಳಿದರು.
ಈ ಚುನಾವಣೆ ಟಿಪ್ಪು ವರ್ಸಸ್ ಸಾವರ್ಕರ್ ನಡುವೆ ಚುನಾವಣೆ ಎಂದು ಬರೆದುಕೊಳ್ಳಲಿ, ಜನ ತೀರ್ಮಾನ ಮಾಡಲಿ. ಜನ ಇಂತಹದಕ್ಕೆಲ್ಲ ಪ್ರೋತ್ಸಾಹ ಕೊಡೋಕೆ ಆಗುತ್ತಾ ? ಸಿದ್ಧರಾಮಯ್ಯನನ್ನ ಮುಗಿಸಲಿ ಎಂದರೆ ಏನರ್ಥ. ಎಲ್ಲರೂ ಇದನ್ನ ಖಂಡಿಸಬೇಕು. ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಪ್ರಜೆಗಳಿಗೆ ರಕ್ಷಣೆ ಕೊಡೋದು ಸಚಿವರು ಹಾಗೂ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.












Click it and Unblock the Notifications