'ಸಿಎಂ ಬಿಎಸ್ವೈಗೆ ಮದುವೆಯಾಗಿದೆ, ಪ್ರಸ್ತ ಮಾಡೋಕೆ ಬಿಡುತ್ತಾ ಇಲ್ಲ'
Recommended Video
ಬೆಂಗಳೂರು, ಫೆ 18: ಸದಾ ಒಂದಲ್ಲಾ ಒಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡುತ್ತಾ, ವಿರೋಧಿಗಳ ಕಾಲೆಳೆಯುವ ಸಿ.ಎಂ.ಇಬ್ರಾಹಿಂ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
"ನಮ್ಮ ಮುಖ್ಯಮಂತ್ರಿಗಳ ಪರಿಸ್ಥಿತಿ ಹೇಗಿದೆ ಎಂದರೆ, ಮದುವೆಯಾಗಿದೆ, ಆದರೆ ಪ್ರಸ್ತ ಮಾಡೋಕೆ ಬಿಡುತ್ತಾ ಇಲ್ಲ. ಪ್ರಸ್ತಕ್ಕೆ ರೂಂ ಹುಡುಕುವಂತಹ ಪರಿಸ್ಥಿತಿ ಅವರಿಗೆ ಬಂದಿದೆ" ಎಂದು ಇಬ್ರಾಹಿಂ, ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ.
"ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ. ನಿಮ್ಮಿಬ್ಬರ ಜಗಳದಲ್ಲಿ ನಾವು (ಮುಸ್ಲಿಮರು) ತೊಂದರೆ ಎದುರಿಸಬೇಕಾಗಿ ಬಂದಿದೆ" ಎಂದ ಇಬ್ರಾಹಿಂ, ಮುಖ್ಯಮಂತ್ರಿಗಳು ತಮ್ಮ ಮನಸ್ಸಿನಲ್ಲಿದ್ದ ಆಸೆಯನ್ನು ರಾಜ್ಯಪಾಲರ ಮೂಲಕ ತೋಡಿಕೊಂಡಿದ್ದಾರೆ" ಎಂದು ಇಬ್ರಾಹಿಂ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಇಬ್ರಾಹಿಂ "ಯಡಿಯೂರಪ್ಪನವರಿಗೆ ಪವರ್ ಕೊಡಿ, ಅವರಿಗೆ ನಮ್ಮ ಕಡೆಯಿಂದ ಎಲ್ಲಾ ಸಹಕಾರ ಸಿಗಲಿದೆ" ಎಂದು ವಾಗ್ದಾನ ನೀಡಿದ್ದಾರೆ.
ದುಡ್ಡಿಲ್ಲ, ಕಾಸಿಲ್ಲ, ಸಂಪತ್ತು ಹೇಗೆ ಎನ್ನುವ ರೀತಿಯಲ್ಲಿತ್ತು ರಾಜ್ಯಪಾಲರ ಭಾಷಣ" ಎಂದಿರುವ ಇಬ್ರಾಹಿಂ, "ರಾಜರ ಹಾಡಿನ ಕಥೆಯ ಹಾಗಿತ್ತು" ಎಂದು ಇಬ್ರಾಹಿಂ, ವ್ಯಂಗ್ಯವಾಡಿದ್ದಾರೆ.
"ಹದಿನೇಳು ನೂತನ ಶಾಸಕರನ್ನು ಬಿಜೆಪಿಯವರು ಪೂಜೆ ಮಾಡಿ, ಅವರ ಫೋಟೋ ಹಾಕಿಕೊಳ್ಳಬೇಕು. ರಾಜ್ಯಪಾಲರ ಭಾಷಣದಂತೆ ನಡೆದುಕೊಳ್ಳಲು ಸಂಕಲ್ಪ ಬೇಕಾಗಿದೆ. ಅದು ಆಗಬೇಕಾದರೆ ಮುಖ್ಯಮಂತ್ರಿಗಳ ಕೈಬಲ ಪಡಿಸಬೇಕು" ಎಂದು ಇಬ್ರಾಹಿಂ ಹೇಳಿದ್ದಾರೆ.












Click it and Unblock the Notifications