ಕಾಂಗ್ರೆಸ್-ಜೆಡಿಎಸ್ ಸರ್ಕಾರ: ಕಗ್ಗಂಟಾಗಲಿದೆಯೇ ಖಾತೆ ಹಂಚಿಕೆ?
Recommended Video

ಬೆಂಗಳೂರು, ಮೇ 21: ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಮುಖಂಡರು ನಂತರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಂಪುಟ ರಚನೆಯ ಅಂತಿಮ ತೀರ್ಮಾನವು ಕಾಂಗ್ರೆಸ್ ಮುಖಂಡರೊಂದಿಗಿನ ಅವರ ಸಭೆಯ ಬಳಿಕ ಹೊರಬೀಳುವ ನಿರೀಕ್ಷೆಯಿದೆ.
ಉಪಮುಖ್ಯಮಂತ್ರಿ ಆಯ್ಕೆಯ ಮಹತ್ವದ ನಿರ್ಧಾರವೂ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗಿನ ಈ ಭೇಟಿ ವೇಳೆ ಅಂತಿಗೊಳ್ಳಲಿದೆ.
'ಕಾಂಗ್ರೆಸ್ ಮುಖಂಡರೊಂದಿಗಿನ ಸಭೆಯ ಬಳಿಕ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ನನ್ನ ಜತೆ ಯಾರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದನ್ನು ನಾನು ನಿರ್ಧರಿಸಲಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಮಾತ್ರ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮರು ದಿನ ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲಿದೆ. ಶುಕ್ರವಾರದಂದು ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದರು.
ಮುಖ್ಯಮಂತ್ರಿ ಸೇರಿದಂತೆ 34 ಖಾತೆಗಳಿರುವ ಸಂಪುಟದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸಚಿವರ ಪಾಲನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ 20 ಮತ್ತು ಜೆಡಿಎಸ್ 14 ಸಚಿವ ಸ್ಥಾನಗಳನ್ನು ಹಂಚಿಕೊಳ್ಳುಬಹುದು ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಶಾಸಕರ ಬಲಾಬಲದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಿಂತ ದುಪ್ಪಟ್ಟು ಸ್ಥಾನ ಹೊಂದಿದೆ. ಕಾಂಗ್ರೆಸ್ 78 ಶಾಸಕರ ಬಲ ಹೊಂದಿದ್ದು, ಜೆಡಿಎಸ್ 37 ಶಾಸಕರನ್ನು ಹೊಂದಿದೆ. ಈಗಾಗಲೇ ತಮ್ಮೊಂದಿಗೆ ಕೈಜೋಡಿಸಿರುವ ಇಬ್ಬರು ಶಾಸಕರಿಗೆ ಯಾವ ಸ್ಥಾನ ನೀಡುವುದು ಎಂಬ ಬಗ್ಗೆ ಉಭಯ ಪಕ್ಷಗಳನ್ನು ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸಂಪುಟದಲ್ಲಿ ಸಿಂಹಪಾಲನ್ನು ತನಗೆ ನೀಡಬೇಕೆಂದು ಕಾಂಗ್ರೆಸ್ ಬೇಡಿಕೆ ಸಲ್ಲಿಸಿದೆ. ಜೆಡಿಎಸ್‌ಗೆ ನೀಡಲಾಗುವ 14 ಸಚಿವ ಸ್ಥಾನಗಳಲ್ಲಿ ಪಕ್ಷೇತರರನ್ನೂ ಪರಿಗಣಿಸಬೇಕು ಎಂದು ಕಾಂಗ್ರೆಸ್ ಅನಿಸಿಕೆ ವ್ಯಕ್ತಪಡಿಸಿದೆ.
ಅಲ್ಲದೆ, ಆಡಳಿತ ನಡೆಸಲು ತನಗೂ ಸಮಾನ ಅವಕಾಶ ನೀಡಬೇಕು ಎಂದು ಅಧಿಕಾರ ಹಂಚಿಕೆಯ ಸೂತ್ರವನ್ನು ಕಾಂಗ್ರೆಸ್ ಮುಂದಿರಿಸುತ್ತಿದೆ.
ಅಲ್ಲದೆ ಪ್ರಮುಖ ಸ್ಥಾನಗಳನ್ನು ತನಗೇ ನೀಡಬೇಕು ಎಂದು ಕಾಂಗ್ರೆಸ್ ಬಯಸಿದ್ದರೆ, ಸ್ಪೀಕರ್ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಸಲ್ಲಿಸಿದೆ.












Click it and Unblock the Notifications