ಮುಸ್ಲಿಮರ ಮತಗಳಿಗಾಗಿ ಕೇಸರಿ ವಿರೋಧಿಸುತ್ತಿರುವ ಕಾಂಗ್ರೆಸ್‌: ಬಿ.ಸಿ.ನಾಗೇಶ್

ಬೆಂಗಳೂರು, ನವೆಂಬರ್ 15: ಶಿಕ್ಷಣ ಕ್ಷೇತ್ರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿಕಾರಿದರು.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವರ್ಗದ ವೋಟ್‌ಗಾಗಿ ಕಾಂಗ್ರೆಸ್ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದನ್ನ ವಿರೋಧ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಚುನಾವಣೆ ಬಂತು ಎಂದು ಕಾಂಗ್ರೆಸ್‌ ಕೇಸರಿ ಬಣ್ಣ ರಾಜಕೀಯ ಮಾಡ್ತಾ ಇದ್ದಾರೆ, ಒಂದು ವರ್ಗದ ಮತ ಗಟ್ಟಿ ಮಾಡಿ ಇಟ್ಟುಕೊಳ್ಳಲು ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಇದು ಹಿಜಾಬ್ ಪ್ರಕರಣದಿಂದ ಆರಂಭ ಆಯಿತು, ಶಾಲೆಯಲ್ಲಿ ಪ್ರಿಸ್ಸಿಪಲ್ ಆಡಳಿತ ಮಂಡಳಿ ನಡುವೆ ನಡೆಯುತ್ತಿದ್ದ ವಿಚಾರವನ್ನ ಕಾಂಗ್ರೆಸ್ ಹಿರಿಯ ನಾಯಕ ಮಾತಾಡಿದ ಕಾರಣ ಅದು ದೊಡ್ಡದಾಯ್ತು, ನಂತರ ಕೋರ್ಟ್ ಮೆಟ್ಟಿಲಿಗೆ ಹೋಯಿತು. ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲೂ ರಾಜಕೀಯ ಮಾಡಿದ್ರು, ಇದೀಗ ಶಿಕ್ಷಣದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ 7601 ಕೊಠಡಿಗಳಿಗೆ ಶಂಕುಸ್ಥಾಪನೆ ಆಗಿದೆ, ವೋಟ್ ಬ್ಯಾಂಕ್ ‌ಗಾಗಿ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅನವಶ್ಯಕ ಪಾಲಿಟಿಕ್ಸ್ ಮಾಡಲು ಮುಂದಾಗಿದೆ.ಯಾವುದೇ ಸುತ್ತೋಲೆಯಲ್ಲಿ ಶಾಲೆಗಳಿಗೆ ಇದೇ ರೀತಿಯ ಬಣ್ಣ ಬಳಿಯಿರಿ ಅಂತ ಹೇಳಿಲ್ಲ, ಅಲ್ಲಿಯ ವಾತವರಣಕ್ಕ ತಕ್ಕಂತೆ ಕೊಠಡಿ ನಿರ್ಮಿಸಿ ವಿವೇಕ ಹೆಸರಿಡಿ ಅಂತ ಹೇಳಿದ್ದೇವೆ. ಒಂದು ವೇಳೆ ಶಿಕ್ಷಣ ಕ್ಷೇತ್ರಕ್ಕೂ ಕೇಸರಿ ಬಣ್ಣಕ್ಕೂ ಹತ್ತಿರ ಇದೆ,ಕೇಸರಿ ಬಣ್ಣ ಬಳಿದರೆ ಮಾನಸಿಕ ವಿಕಾಸ ಎಂದು ಎಕ್ಸ್‌ಪರ್ಟ್‌ಗಳು ವರದಿ ನೀಡಿದರೆ ನಾವು ಹಿಂದೇಟು ಹಾಕಲ್ಲ ಎಂದರು.

ವಿರೋಧ ಮಾಡಲಿಕ್ಕಾಗಿ ಒಂದಷ್ಟು ಜನ ಇದ್ದಾರೆ. ಕಾಂಗ್ರೆಸ್‌ ಅಂತೂ ಶಿಕ್ಷಣ ಕ್ಷೇತ್ರದಲ್ಲಿ ಅನವಶ್ಯಕ ರಾಜಕೀಯ ಪ್ರಯತ್ನ ನಡೆಸುತ್ತಿದೆ. ಓಟ್ ಬ್ಯಾಂಕ್ ‌ಗಾಗಿ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲೂ ಪಾಲಿಟಿಕ್ಸ್ ಮಾಡಲು ಮುಂದಾಗಿದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ‌ನ ಹಿರಿಯ ನಾಯಕ ಆಡಿದ ಮಾತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿವಾದ ಸೃಷ್ಟಿ ಆಗ್ತಿದೆ ಎಂದು ಕಿಡಿಕಾರಿದರು.

Congress is opposing saffron to get Muslim votes

ರಾಜಕೀಯ ಉದ್ದೇಶಕ್ಕಾಗಿ, ಒಂದು ಧರ್ಮದ ಓಟಿಗಾಗಿ ಈ ರೀತಿಯ ವಿರೋಧ ಸರಿಯಲ್ಲ. ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ, ವಿವೇಕ ಬಣ್ಣ ಬಳಿಯೋದು ಅವರವರ ವಿವೇಚನೆಗೆ ಬಿಟ್ಟಿದ್ದು. ಈಗಾಗಲೇ ವಿವೇಕಾನಂದರ ಭಾವಚಿತ್ರ ಕೆಲ ಶಾಲೆಗಳಲ್ಲಿ‌ಇದೆ. ಎಲ್ಲಾ ಶಾಲೆಗಳಲ್ಲಿ ವಿವೇಕಾನಂದರ ಫೋಟೋ ಹಾಕಲು ತೀರ್ಮಾನ ಮಾಡಿದ್ದಿವಿ, ಯಾವ ಕರೀತಿಯ ಫೋಟೋ ಹಾಕಬೇಕು ಎಂಬುದನ್ನ ತಿರ್ಮಾನ ಮಾಡುತ್ತೇವೆ, ಆದರೆ ಎಲ್ಲಾ ಶಾಲೆಗಳಲ್ಲೂ ವಿವೇಕಾನಂದರ ಫೋಟೊ ಬರುವುದಂತೂ ನಿಜ ಎಂದು ತಿಳಿಸಿದರು.

ನಿನ್ನೆ7601 ಕೊಠಡಿಗೆ ಶಂಕು ಸ್ಥಾಪನೆ ಆಗಿದೆ. ಎಲ್ಲಾ ಸಿಇಒಗಳಿಗೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದ್ದು, ಮುಂದಿನ ಎಲ್ಲಾ ಎಕಾಡೆಮಿಕ್ ಇಯಿರ್ ಗೆ ಈ ಕೊಠಡಿ ಸಿಗಲಿದೆ, ಮಾರ್ಚ್ ಒಳಗೆ ಮುಗಿಬೇಕು ಎಂದು ಸೂಚನೆ ನೀಡಿದ್ದೇವೆ. ಎಲ್ಲಾ ಶಾಲೆಯಲ್ಲಿ ಶೌಚಾಲಯಗಳು ಇರಲಿದೆ. ಇನ್ನೂ ಹೈದರಾಬಾದ್ ಕರ್ನಾಟಕ ಕ್ಕೆ 900 ಕೋಟಿ ಕೊಡುವ ಭರವಸೆ ಸಿಎಂ ನೀಡಿದ್ದಾರೆ. ಶಿಕ್ಷಕರ ನೇಮಕ ಕೂಡ ಮಾಡುತ್ತಿದ್ದೇವೆ, ಮಿನಿಮಮ್ ತರಬೇತಿ ನೀಡಿ ಶಿಕ್ಷಕರನ್ನು ಶಾಲೆಗೆ ನೇಮಕ ಮಾಡುತ್ತೇವೆ. ಕೋವಿಡ್ ಕಾರಣದಿಂದಾಗಿ ಶಿಕ್ಷಕರ ನೇಮಕ ತಡ ಆಗಿತ್ತು, ಈ ಬಾರಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಶಾಲಾ ಕೊಠಡಿಯಲ್ಲಿ ಉತ್ತಮ ವಾತಾವರಣ ಕೂಡ ಸೃಷ್ಟಿ ಮಾಡಬೇಕು. ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಾತಾವರಣ ಹೇಗೆ ಇರಬೇಕು ಎಂದು ಯೋಚನೆ ಮಾಡಿದ್ರು, ಖಾಸಗಿ ಶಾಲೆಯ ಮಾದರಿಯಲ್ಲೇ ಸಾಹುಕಾರ್ ಮಕ್ಕಳು ಓದಿದ ರೀತಿಯಲ್ಲೇ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕು ಎಂದು ಅಂದೇ ವಾಜಪೇಯಿ ಯೋಚನೆ ಮಾಡಿದ್ದರು.ಒಂದು ಶಾಲೆಗೆ ಕಡ್ಡಾಯವಾಗಿ ಇಬ್ಬರು ಶಿಕ್ಷಕರು ಇರಬೇಕು ಎಂದು ಅಂದು ಯೋಚನೆ ಮಾಡಿದ್ವು, ಈಗ ಮೂವತ್ತು ಮಕ್ಕಳಿಗೆ ಒಂದು ಟೀಚರ್ ಕೆಲವು ಕಡೆ ಹತ್ತು ಮಕ್ಕಳಿಗೂ ಒಂದು ಟೀಚರ್ ಇದ್ದಾರೆ ಎಂದು ತಿಳಿಸಿದರು.

ನಾವು ಬಣ್ಣದ ಬಗ್ಗೆ ಸರ್ಕ್ಯೂಲರ್ ತಂದಿಲ್ಲ, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ನಿರ್ಧಾರ ಮಾಡಿ ಎಂದಿದ್ದೇವೆ. ಆದರೆ ವಿವೇಕ ಹೆಸರು ಬ್ರಾಂಡ್ ಮಾಡಲು ಸೂಚನೆ ನೀಡಿದ್ದು ನಿಜ. ನಾಳೆ ಚುನಾವಣೆಗೆ ಹೋದಾಗ ಮಾತಾಡೋಕೆ ವಿಷಯ ಇರೋದಿಲ್ಲ ಎಂದು ಬಣ್ಣದ ಬಗ್ಗೆ ಮಾತಾಡ್ತಾ ಇದ್ದಾರೆ. ಕೇಸರಿ ತ್ಯಾಗದ ಸಂಕೇತ. ಸೂರ್ಯನ ಬಣ್ಣವೂ ಕೇಸರಿ, ಮಕ್ಕಳ ಮೇಲೆ ಕೇಸರಿ ಬಣ್ಣ ವಿದ್ಯೆಗೆ ಪೂರಕವಾಗಿದೆ ಎಂದು ತಜ್ಞರು ಹೇಳಿದರೆ ಜಾರಿ ಮಾಡುತ್ತೇವೆ. ಇವರಿಗೆ ಯಾಕೆ ಬಣ್ಣದ ಬಗ್ಗೆ ಬೇಸರ, ಕೇಸರಿ ಬಣ್ಣದಲ್ಲಿ ಹಿಂದುತ್ವ ಕಂಡಿತಾ ? ಖಾಸಗಿ ಶಾಲೆಯವರು ಕೇಸರಿ ಬಣ್ಣ ಹಾಕಿದರೆ ಒಳ್ಳೆಯದು, ಅನೇಕ ಖಾಸಗಿ ಶಾಲೆಯವರು ಈಗಾಗಲೇ ಕೇಸರಿ ಬಣ್ಣ ಹಾಕಿದ್ದಾರೆ,ಹಾಕಿದರೆ ತಪ್ಪೇನಿಲ್ಲ. ಇದನ್ನು ಕಾಂಗ್ರೆಸ್ ಕೈಬಿಡಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+