ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಜ್ವಾಲೆ ಸ್ಪೋಟ?

|
Google Oneindia Kannada News

Recommended Video

Lok Sabha Election 2019: ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಜ್ವಾಲೆ ಸ್ಪೋಟ?

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರದಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡರೆ, ಅದರಿಂದಾಗುವ ಲಾಭ ಯಾರಿಗೆ? ಕಾಂಗ್ರೆಸ್ಸಿಗೋ ಅಥವಾ ಜೆಡಿಎಸ್ಸಿಗೋ?

ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಿಂದ ಏನೇ ಹೊರಬೀಳಲಿ, ಸೀಟು ಹೊಂದಾಣಿಕೆಯ ವಿಚಾರದಲ್ಲಿ, ಕಾಂಗೆಸ್ಸಿನ ಟಿಕೆಟ್ ಆಕಾಂಕ್ಷಿಗಳಿಗೆ 'ಮೈತ್ರಿ' ಭಾರೀ ನಿರಾಶೆ ಮೂಡಿಸುವುದಂತೂ ಖಂಡಿತ.

ಪಕ್ಷ ಉಳಿಸಿ ಕೊನೆ ಉಸಿರೆಳೆಯುತ್ತೆನೆ: ದೇವೇಗೌಡ ಭಾವುಕ ಮಾತು ಪಕ್ಷ ಉಳಿಸಿ ಕೊನೆ ಉಸಿರೆಳೆಯುತ್ತೆನೆ: ದೇವೇಗೌಡ ಭಾವುಕ ಮಾತು

ಜನವರಿ ತಿಂಗಳಾಂತ್ಯದೊಳಗೆ ಸೀಟ್ ಹೊಂದಾಣಿಕೆಯ ಮಾತುಕತೆ ಮುಗಿದಿರಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿಯಾಗಿದೆ. ಅದಕ್ಕೆ ದೆಹಲಿಯಿಂದ ಸೂಕ್ತ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು? ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?

ಇಲ್ಲಿ ಸಮಸ್ಯೆ ಕಾಂಗ್ರೆಸ್ಸಿಗೆ ಎದುರಾಗುತ್ತಿರುವುದು ಏನೆಂದರೆ, ದಿನದಿಂದ ದಿನಕ್ಕೆ ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿರುವುದು. ಇದು, ಒಂದೆಡೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿರುವುದು, ಇನ್ನೊಂದೆಡೆ ಕಾಂಗ್ರೆಸ್ ತಾನು ಗೆದ್ದಿದ್ದ ಸೀಟನ್ನೂ ಜೆಡಿಎಸ್ಸಿಗೆ ಬಿಟ್ಟುಕೊಡಬೇಕಾಗಿ ಬರುವಂತಹ ಪರಿಸ್ಥಿತಿಯೂ ಎದುರಾಗಬಹುದು.

ಜೆಡಿಎಸ್-ಕಾಂಗ್ರೆಸ್ ಸೀಟು ಹೊಂದಾಣಿಕೆ

ಜೆಡಿಎಸ್-ಕಾಂಗ್ರೆಸ್ ಸೀಟು ಹೊಂದಾಣಿಕೆ

ಕಾಂಗ್ರೆಸ್ಸಿಗೆ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ನೆಲೆಯಿದ್ದರೆ, ಜೆಡಿಎಸ್ ಪಕ್ಷಕ್ಕೆ ಆ ರೀತಿಯ ಪೂರಕ ವಾತಾವರಣ ಸದ್ಯಕ್ಕಿಲ್ಲ. ಹಾಗಾಗಿ, ತನ್ನ ಪ್ರಾಭಲ್ಯದ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎನ್ನುವ ಕಠಿಣ ನಿಲುವನ್ನು ಜೆಡಿಎಸ್ ತಾಳುವ ಎಲ್ಲಾ ಸಾಧ್ಯತೆಯಿರುವುದರಿಂದ, ಇದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ವೇಳೆ ಭಾರೀ ಭಿನ್ನಮತಕ್ಕೆ ದಾರಿಯಾಗಬಹುದು.

ಅಡಕತ್ತರಿಯಲ್ಲಿ ಕಾಂಗ್ರೆಸ್

ಅಡಕತ್ತರಿಯಲ್ಲಿ ಕಾಂಗ್ರೆಸ್

ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಿ ಸುಮಾರು ಆರು ಸೀಟುಗಳಿಗೆ ಡಿಮಾಂಡ್ ಇಟ್ಟಿದ್ದ ಜೆಡಿಎಸ್, ಈಗ ಹನ್ನೊಂದು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಹೈಕಮಾಂಡಿಗೆ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರಿಗೂ ಚಿಂತೆಯ ವಿಷಯವಾಗಿದೆ.

ಲೋಕಸಭೆ ಚುನಾವಣೆ : 10 ಹೊಸ ವಕ್ತಾರರನ್ನು ನೇಮಿಸಿದ ಕಾಂಗ್ರೆಸ್ ಲೋಕಸಭೆ ಚುನಾವಣೆ : 10 ಹೊಸ ವಕ್ತಾರರನ್ನು ನೇಮಿಸಿದ ಕಾಂಗ್ರೆಸ್

ಭಿನ್ನಮತ ಶಮನ ಮಾಡುವುದೇ ಕಾಂಗ್ರೆಸ್ಸಿಗೆ ದೊಡ್ಡ ಸವಾಲಿನ ಕೆಲಸ

ಭಿನ್ನಮತ ಶಮನ ಮಾಡುವುದೇ ಕಾಂಗ್ರೆಸ್ಸಿಗೆ ದೊಡ್ಡ ಸವಾಲಿನ ಕೆಲಸ

ಮೊದಲೇ, ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಹೈರಾಣವಾಗಿರುವ ಕಾಂಗ್ರೆಸ್, ಇನ್ನು ಜೆಡಿಎಸ್ ಕೇಳಿದಂತೆ ಹನ್ನೊಂದು ಕ್ಷೇತ್ರವನ್ನು ಬಿಟ್ಟುಕೊಟ್ಟರೆ, ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕಾರ್ಯ ಮಾಡುವುದನ್ನು ಬಿಟ್ಟು ಭಿನ್ನಮತ ಶಮನ ಮಾಡುವುದೇ ಕಾಂಗ್ರೆಸ್ಸಿಗೆ ದೊಡ್ಡ ಸವಾಲಿನ ಕೆಲಸವಾಗುವ ಸಾಧ್ಯತೆಯಿಲ್ಲದಿಲ್ಲ.

ಜೆಡಿಎಸ್ ಡಿಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿರುವ 11ಕ್ಷೇತ್ರ

ಜೆಡಿಎಸ್ ಡಿಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿರುವ 11ಕ್ಷೇತ್ರ

ಜೆಡಿಎಸ್ ಡಿಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿರುವ ಹನ್ನೊಂದು ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ. ಹೀಗಿರುವಾಗ, ಆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರೆ, ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಭಾರೀ ಒಡಕು ಮೂಡುವ ಸಾಧ್ಯತೆಯಿದೆ.

ಜೆಡಿಎಸ್-ಕಾಂಗ್ರೆಸ್‌ ಮೈತ್ರಿ : 12 ಸ್ಥಾನಕ್ಕೆ ದೇವೇಗೌಡರ ಬೇಡಿಕೆಜೆಡಿಎಸ್-ಕಾಂಗ್ರೆಸ್‌ ಮೈತ್ರಿ : 12 ಸ್ಥಾನಕ್ಕೆ ದೇವೇಗೌಡರ ಬೇಡಿಕೆ

ಬಿಜೆಪಿ ಈಗಾಗಲೇ ತನ್ನ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ

ಬಿಜೆಪಿ ಈಗಾಗಲೇ ತನ್ನ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ

ಬಿಜೆಪಿ ಈಗಾಗಲೇ ತನ್ನ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕೊನೆಯ ಹಂತದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಯಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರಿಗೆ ಒಂದು ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆಯಾದ ನಂತರದ ಬೆಳವಣಿಗೆ ಬಿಜೆಪಿ ಪಾಲಿಗೆ ನಿರ್ಣಾಯಕವಾಗಬಹುದು.

ಲೋಕಸಭಾ ಚುನಾವಣೆ 2019 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಲೋಕಸಭಾ ಚುನಾವಣೆ 2019 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

English summary
Upcoming Loksabha elections 2019: Congress may face civiar setback after seat sharing with JDS. JDS demanding seat where INC is strong, since JDS supremo Deve Gowda demanding for 11 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X