ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಖಾಸಗಿ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ, ಐಟಿ, ಬಿಟಿ ಕ್ಷೇತ್ರಗಳನ್ನು ಈ ಮೀಸಲಾತಿ ಸೌಲಭ್ಯದಿಂದ ಹೊರಗಿಡಲಾಗಿದೆ.

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ ನೀಡುವ ಕುರಿತು ಕರಡು ತಿದ್ದುಪಡಿಯೊಂದನ್ನು ಕರ್ನಾಟಕದ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಇದಕ್ಕೆ ತಿದ್ದುಪಡಿಗೆ ಮುಖ್ಯಮಂತ್ರಿಯ ಅನುಮೋದನೆ ದೊರೆತಿದೆ ಎಂದು ಹೇಳಲಾಗುತ್ತಿದೆ.[ಮಹಿಳೆಯರಿಗೆ ಮೀಸಲಾತಿ ಯಾಕೆ ಬೇಕು?]

Karnataka: Congress govt mulls 100% job reservation in private sector for Kannadigas

ಈ ನಿಯಮವನ್ನು ಕೈಗಾರಿಕೆಗಳು ನಿಯಮಗಳನ್ನು ಪಾಲಿಸಲು ವಿಫಲವಾದರೆ, ಅಂಥ ಸಂಸ್ಥೆಗೆ ಸಿಗುವ ಸೌಲಭ್ಯ ರಿಯಾಯಿತಿಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.[ಜನಸಂಖ್ಯೆಗನುಗುಣವಾಗಿ ಶೇ.70 ರ ಮೀಸಲಾತಿಗೆ ಬದ್ಧ: ಸಿಎಂ]

ಸ್ಥಾಯಿ ಆದೇಶಗಳ ಅಧಿನಿಯಮ 2ಕ್ಕೆ ಪ್ರಸ್ತಾವಿತ ತಿದ್ದುಪಡಿಯಂತೆ 'ಭೂಮಿ, ಜಲ, ವಿದ್ಯುತ್ ಸಂಬಂಧ ರಿಯಾಯಿತಿಗಳನ್ನು ಅಥವಾ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆಯನ್ನು ರಾಜ್ಯ ಕೈಗಾರಿಕಾ ನೀತಿಯಂತೆ ಪಡೆದ ಪ್ರತಿಯೊಂದು ಕೈಗಾರಿಕಾ ಉದ್ದಿಮೆಯೂ ಸ್ಥಳೀಯ ಜನರಿಗೆ (ಕನ್ನಡಿಗರಿಗೆ) ಶೇ.100 ಮೀಸಲಾತಿಯನ್ನು ವಿವಿಧ ಉಪ ಅಧಿನಿಯಮಗಳ ಅನ್ವಯ ವಿಭಾಗಿಸಲಾದ ಉದ್ಯೋಗಿಗಳಿಗೆ ನೀಡತಕ್ಕದ್ದು' ಎಂದು ತಿಳಿಸಲಾಗಿದೆ.[ಸಣ್ಣಕಥೆ: ಮೀಸಲಾತಿಗೆ ಬಲಿಯಾದ ಒಂದು ಛೊಲೋ ಪ್ರೀತಿ!]

ನೇಮಕಾತಿ ಸಂದರ್ಭ ಖಾಸಗಿ ಕೈಗಾರಿಕೆಗಳು ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಬೇಕೇ ಹೊರತು ಆ ಹುದ್ದೆಗೆ ಬೇರೆ ಯಾರೂ ಸಿಗದೇ ಹೋದಾಗ ಕನ್ನಡಿಗರನ್ನು ನೇಮಿಸಬೇಕೆಂದಲ್ಲ ಎಂದು ಕಾರ್ಮಿಕ ಸಚಿವ ಸಂತೋಶ್ ಲಾಡ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Congress government in Karnataka is mulling 100 percent reservation for Kannadigas in all private sector industries in the state, barring IT and biotechnology firms, which avail concessions under the state industrial policy.
Please Wait while comments are loading...