ತುಘಲಕ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದ 450 ಡಾಟಾ ಎಂಟ್ರಿ ಆಪರೇಟರ್: ಬಿಜೆಪಿ

ಬೆಂಗಳೂರು, ಆಗಸ್ಟ್ 08: ಸರ್ಕಾರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾತಿ, ಆದಾಯ, ಕೃಷಿಗೆ ಡಿಜಿಟಲ್ ಸೇವೆ ನೀಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್‌ಗಳ ಮೇಲೆ ತುಘಲಕ್ ಸರ್ಕಾರದ ಕೆಂಗಣ್ಣು ಬಿದ್ದಿದೆ. ಇವರನ್ನು ಕೆಲಸದಿಂದ ಸರ್ಕಾರ ವಜಾಗೊಳಿಸಿದೆ ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು, ಸಾರ್ವಜನಿಕರಿಗೆ ಜಾತಿ, ಆದಾಯ, ಕೃಷಿಗೆ ಸಂಬಂಧಿಸಿದ ವಿವಿಧ ಪ್ರಮುಖ ಸೇವೆಗಳನ್ನು ಒದಗಿಸುತ್ತಿದ್ದ ಅಟಲ್ ಜೀ ಜನಸ್ನೇಹಿ ಕೇಂದ್ರದ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ತುಘಲಕ್ ಸರ್ಕಾರ ವಜಾಗೊಳಿಸಿದೆ.

Congress Govt Is Doing Revange Politics By Sacking 450 Poor Data Entry Operators, BJP Slams

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅಟಲ್ ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಯನ್ನು ಕಳೆದ ಜೂನ್, ಜುಲೈ ತಿಂಗಳ ವೇತನ ಸಹ ಪಾವತಿಸಲಾಗಿಲ್ಲ. ಸಂಬಳ ನೀಡದೇ ಏಕಾಏಕಿ ವಜಾ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ, ಡಾಟಾ ಎಂಟ್ರಿ ಆಪರೇಟರ್‌ಗಳ ಸಂಬಳ ನೀಡಲು ಶಕ್ತಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸರ್ಕಾರದ ಆಡಳಿತವನ್ನು ಬಿಜೆಪಿ ಟೀಕೆ ಮಾಡಿದೆ.

ಬಿಜೆಪಿ ತನ್ನ ಟ್ವೀಟ್‌ನಲ್ಲಿ #ATMSarkara ಎಟಿಎಂ ಸರ್ಕಾರ ಎಂದು ಹ್ಯಾಷ್ ಟ್ಯಾಗ್ ಹಾಕಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಬಡ ಡಾಟಾ ಎಂಟ್ರಿ ಆಪರೇಟರ್‌ಗಳ ಹೊಟ್ಟೆ ಮೇಲೆ ತುಘಲಕ್ ಸರ್ಕಾರ ಹೊಡೆದಿದೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಿಡಿ ಕಾರಿದೆ.

Congress Govt Is Doing Revange Politics By Sacking 450 Poor Data Entry Operators, BJP Slams

450 ಮಂದಿ ವಜಾ: ಆಗಿದ್ದೇನು?

ನಾಡಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ 1916 ಮಂದಿ ಜನರನ್ನು ಡಾಟಾ ಎಂಟ್ರಿ ಆಪರೇಟ್ ಆಗಿ ನೇಮಿಸಿಕೊಳ್ಳಲಾಗಿತ್ತು. ಸಾರ್ವಜನಿಕರಗೆ ನೀಡಿದ ಸೇವೆಯಿಂದ ಬರುತ್ತಿದ್ದ ಹಣದಲ್ಲಿ ಅಗತ್ಯ ಅನುದಾನ ನೀಡಲಾಗುತ್ತಿತ್ತು. ಯಾವುದೇ ತೊಂದರೆ ಇರಲಿಲ್ಲ. ಆದರೆ ಕಳೆದ ಜೂನ್ ಮತ್ತು ಜುಲೈ ತಿಂಗಳ ವೇತನ ಪಾವತಿದೇ ನೋಟಿಸ್ ನೀಡದೇ ನಮ್ಮನ್ನು ಏಕಾಎಕಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಡಾಟಾ ಆಪರೇಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟು ಅಟಲ್‌ ಜಿ ಜನಸ್ನೇಹಿ ಕೇಂದ್ರಗಳ 450 ಮಂದಿ ಡಾಟಾ ಆಪರೇಟರ್‌ಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಜಾ ಮಾಡಿದೆ. ಸರ್ಕಾರ ನಡೆ ವಿರುದ್ಧ ವಜಾ ಸಿಬ್ಬಂದಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಚಾರ, ವರ್ಗಾವಣೆಯಲ್ಲಿ ಹಣ ಲೂಟಿ ಕುರಿತು ವಾಗ್ದಾಳಿ ನಡೆಸಿದ್ದ ಬಿಜೆಪಿ ಇದೀಗ ಡಾಟಾ ಆಪರೇಟರ್‌ ವಿಚಾರವಾಗಿ ಕಾಂಗ್ರೆಸ್ ಮೇಲೆ ಕೆಂಡ ಕಾರಿದೆ. ಅಲ್ಲದೇ ಕೃಷಿ ಸಚಿವ ಚೆಲುವರಾಯಸ್ವಾಮಿ ಲಂಚ ಪಡೆಯುತ್ತಿದ್ದಾರೆ ಎಂಬ ಪ್ರಕರಣದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+