'ಕಾಂಗ್ರೆಸ್ ಸರ್ಕಾರದಿಂದ 12 ಲಕ್ಷ BPL ಕಾರ್ಡ್ ರದ್ದು'
ರಾಮನಗರ, ನವೆಂಬರ್ 07: ರಾಜ್ಯದಲ್ಲಿ 12 ಲಕ್ಷ BPL ಕಾರ್ಡ್ ರದ್ದು ಆಗ್ತಿವೆ. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸರ್ಕಾರ 12 ಲಕ್ಷ ಪಡಿತರ ಚೀಟಿಯನ್ನು ರದ್ದು ಮಾಡಲು ಮುಂದಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಆರೋಪಿಸಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರುಪಸಂದ್ರ ಗ್ರಾಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿದ ಅವರು, ಸಿದ್ದರಾಮಯ್ಯನವರೇ 12 ಲಕ್ಷ ಬಿಪಿ ಎಲ್ ಕಾರ್ಡ್ ರದ್ದು ಮಾಡುವುದನ್ನ ತಕ್ಷಣವೇ ತಡೆಯಬೇಕು. ತಡೆಯದಿದ್ರೆ ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ.ವಿಧಾನ ಸಭೆಯಲ್ಲಿ ಘರ್ಜಿಸುತಾರೆ, ಬಡವರ ರೇಷನ್ ಕಾರ್ಡ್ ರದ್ದಾಗಿದಿಯೋ ಅದನ್ನ ವಾಪಾಸ್ಸ್ ತರುವ ತಾಕತ್ತು ನಿಖಿಲ್ ಕುಮಾರಸ್ವಾಮಿಗೆ ಇದೆ ಇದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಈ ಸರ್ಕಾರ ಏನು ಬೇಕಾದರು ಮಾಡಿಕೊಳ್ಳಲಿ, ಆದರೆ ಬಿಪಿ ಎಲ್ ಕಾರ್ಡ್ ರದ್ದಾದರೆ ನರೇಂದ್ರ ಮೋದಿಯವರು ಕೊಡುತ್ತಿರುವ 5 ಕೆ.ಜಿ ಅಕ್ಕಿ ರದ್ದಗುತ್ತೆ . ಅಯುಷ್ಮಾನ್ ಭಾರತ್ ಯೋಜನೆ ರದ್ದಾಗುತ್ತೆ. ಶಾಲಾ ಮಕ್ಕಳಿಗೆ ಕೊಡುವ ಯೋಜನೆ ರದ್ದಾಗುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರುಪಸಂದ್ರ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ವೇಳೆ ಬಡ ಸಾಮಾನ್ಯ ಮಹಿಳಾ ವರ್ಗದವರಿಗೆ ಬದುಕು ಕಟ್ಟಿ ಕೊಡುವಂತ ಕೆಲಸ ಮಾಡಿದ್ದರು. ಸಾಮಾನ್ಯ ಜನರ ಭಾವನೆಯನ್ನ ಅರ್ಥ ಮಾಡಿಕೊಂಡು ಕೆಲಸ ಮಾಡುವ ಶಕ್ತಿ ನಿಖಿಲ್ ಕುಮಾರಸ್ವಾಮಿಗೆ ಇದೆ ಎಂದು ಹೇಳಿದರು.
ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ವೇಳೆ ಬಡ ಸಾಮಾನ್ಯ ಮಹಿಳಾ ವರ್ಗದವರಿಗೆ ಬದುಕು ಕಟ್ಟಿ ಕೊಡುವಂತ ಕೆಲಸ ಮಾಡಿದ್ದರು. ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸಾಮಾನ್ಯ ಜನರ ಭಾವನೆಯನ್ನ ಅರ್ಥಮಾಡಿಕೊಂಡು ಕೆಲಸ ಮಾಡುವ ಶಕ್ತಿ ನಿಖಿಲ್ ಕುಮಾರಸ್ವಾಮಿಗೆ ಇದೆ ಎಂದು ಹೇಳಿದರು.
ಈ ಸರ್ಕಾರ ಎಂಥ ದುಸ್ಥಿತಿಗೆ ಬಂದಿದೆ.ಇವತ್ತು ಸಿದ್ದರಾಮಯ್ಯನ ಕೈಯಲ್ಲಿ ಅಧಿಕಾರ ಇಲ್ಲ ಆಡಳಿತ ನಡೆಸುತ್ತಿರುವು ಜಮೀರ್ ಅವರು. ಈ ದೇಶದಲ್ಲಿ ಮುಸ್ಲಿಂ, ಹಿಂದೂ ಕ್ರೈಸ್ತರು, ಜೈನರು, ಬೌದ್ಧರು ಎಲ್ಲರು ಒಟ್ಟಾಗಿ ಸೇರಿ ಬದುಕಬೇಕೆಂದು ಯೋಚನೆ ಮಾಡಿದವರು ನಾವು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ಬಿಜೆಪಿ ಜೆಡಿಎಸ್ ಅವರು ಏನು ಮಾಡಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ, ಡಾ ಅಂಬೇಡ್ಕರ್ ಅವರು ಅಂತ್ಯ ಸಂಸ್ಕಾರ ಮಾಡಲು ದೆಹಲಿಯಲ್ಲಿ 10 ಅಡಿ ಜಾಗವನ್ನು ಕಾಂಗ್ರೆಸ್ ನವರು ಕೊಡಲಿಲ್ಲ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಆರೋಪಿದರು.
ನಿಮಗೆ ಕೈ ಮುಗಿದು ಮನವಿ ಮಾಡುತ್ತೇನೆ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ. ಇಂಥ ಕೆಟ್ಟ ಸರ್ಕಾರವನ್ನ ನಾನು ನೋಡಲಿಲ್ಲ.ರಾಜಕೀಯ ಇರುವುದು ಸಿಎಂ,ಪಿಎಂ ಆಗುವುದಕ್ಕೆ ಅಲ್ಲ.ಜನ ಸಾಮಾನ್ಯರ ಕೆಲಸ ಮಾಡುವುದಕ್ಕೆ ಜನರ ಬದುಕು ಕಟ್ಟಿಕೊಡುವುದಕ್ಕೆ ರಾಜಕಾರಣ ಇರುವುದು ಎಂದರು.ಅದೇ ಹಾದಿಯಲ್ಲಿ ನಿಖಿಲ್ ಅವರು ಸಾಗುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications