ಕಾಂಗ್ರೆಸ್ ಟಿಕೆಟ್ ರಾಜಕೀಯ : 224 ಕ್ಷೇತ್ರಕ್ಕೆ 1,004 ಅರ್ಜಿಗಳು

ಬೆಂಗಳೂರು, ಮಾರ್ಚ್ 06: ದೇಶದ ಅತ್ಯಂತ ಪುರಾತನ ಪಕ್ಷಕ್ಕೆ ಕರ್ನಾಟಕದಲ್ಲಿ ಟಿಕೆಟ್ ರಾಜಕೀಯದ ಬಿಸಿ ಈಗಲೇ ತಟ್ಟಿದೆ.ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನಾಲ್ಕು ತಿಂಗಳ ಬಳಿಕ, ಕೆಪಿಸಿಸಿ ಬಳಿ ಈಗ 1,004 ಅರ್ಜಿಗಳು ಬಂದಿವೆ.

2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವುದು ಹಾಗಿರಲಿ, ಈಗ ಬಂದಿರುವ ಅರ್ಜಿಗಳನ್ನು ಒಟ್ಟು ಮಾಡಿ, ವಿಂಗಡಣೆ ಮಾಡುವುದೇ ದೊಡ್ಡ ಕೆಲಸವಾಗಿಬಿಟ್ಟಿದೆ.

ಸದ್ಯ ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಯುಗಾದಿ ಕಳೆದ ಬಳಿಕದ ಮಿಕ್ಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಭಾರತೀಯ ಜನತಾ ಪಕ್ಷವಂತೂ ಸಮಾವೇಶ, ಪಾದಯಾತ್ರೆಗಳಲ್ಲಿ ನಿರತವಾಗಿದ್ದು, ಇನ್ನೂ ಟಿಕೆಟ್ ರಾಜಕೀಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಸದ್ಯ ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಯುಗಾದಿ ಕಳೆದ ಬಳಿಕದ ಮಿಕ್ಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಭಾರತೀಯ ಜನತಾ ಪಕ್ಷವಂತೂ ಸಮಾವೇಶ, ಪಾದಯಾತ್ರೆಗಳಲ್ಲಿ ನಿರತವಾಗಿದ್ದು, ಇನ್ನೂ ಟಿಕೆಟ್ ರಾಜಕೀಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಏಪ್ರಿಲ್ ಕೊನೆ ವಾರದಲ್ಲಿ ಕಾಂಗ್ರೆಸ್ ಪಟ್ಟಿ

ಏಪ್ರಿಲ್ ಕೊನೆ ವಾರದಲ್ಲಿ ಕಾಂಗ್ರೆಸ್ ಪಟ್ಟಿ

ಈ ಎರಡು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಸದ್ಯ ಕಾಂಗ್ರೆಸ್ಸಿನಲ್ಲಿ ರಾಜ್ಯಸಭೆ ಚುನಾವಣೆಯದ್ದೆ ಚಿಂತೆ.

ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ ಕೊನೆ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಪಟ್ಟಿ ವಿಳಂಬವಾಗಿ ಪ್ರಕಟಿಸಲು ಕಾರಣ?

ಪಟ್ಟಿ ವಿಳಂಬವಾಗಿ ಪ್ರಕಟಿಸಲು ಕಾರಣ?

ಕಾಂಗ್ರೆಸ್ ನಲ್ಲಿ ಪ್ರತಿಬಾರಿಯಂತೆ ಈ ಬಾರಿ ಕೂಡಾ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದು ಹೇಳಿ ಬೇರೆ ಪಕ್ಷಕ್ಕೆ ಸೇರುವುದು, ಅಥವಾ ಬಂಡಾಯ, ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಡೆಗಟ್ಟಲು ಯೋಜನೆ ಹಾಕಿಕೊಳ್ಳಲಾಗಿದೆ. ಪಟ್ಟಿ ವಿಳಂಬವಾಗಿ ಪ್ರಕಟಿಸಲು ಇದು ಕಾರಣ ಎನ್ನಬಹುದು ಎಂದು ಜಿ ಪರಮೇಶ್ವರ ಅವರು ಹೇಳಿದ್ದಾರೆ.

ಲೆಕ್ಕಾಚಾರ ಹೇಗಿದೆ?

ಲೆಕ್ಕಾಚಾರ ಹೇಗಿದೆ?

123 ಹಾಲಿ ಶಾಸಕರಿದ್ದಾರೆ ಅವರ ಕಾರ್ಯಕ್ಷಮತೆ, ಅವರ ಮೌಲ್ಯಮಾಪನ ಮಾಡಿ, ಟಿಕೆಟ್ ನೀಡಲಾಗುತ್ತದೆ. ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ.

ಯಾರು ಆಯ್ಕೆ ಮಾಡುತ್ತಾರೆ?

ಯಾರು ಆಯ್ಕೆ ಮಾಡುತ್ತಾರೆ?

ಅಭ್ಯರ್ಥಿಗಳ ಅರ್ಜಿ ಅಯ್ಕೆ ಪರಿಶೀಲಿಸಲು ಪರಮರ್ಶನಾ ಸಮಿತಿಯೊಂದನ್ನು ಕಾಂಗ್ರೆಸ್ ಇತ್ತೀಚೆಗೆ ರಚಿಸಿದೆ. ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ. ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+