Lok Sabha Election:ಏಳು ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದಲಿತರ ಮತ ವರವಾಗಬಹುದು?
ದೇಶದಲ್ಲಿ ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ. ಈಗಾಗಲೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಬಿಜೆಪಿ ಈ ನಿಟ್ಟನಿಲ್ಲಿ ಕಾರ್ಯಪ್ರವೃತ್ತವಾಗಿದೆ. ಕರ್ನಾಟಕದಲ್ಲೂ ಚುನಾವಣಾ ಬಿಸಿ ಏರುತ್ತಿದೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗಳು ನಡೆಯಲಿದ್ದು, ಮೇ 7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ತಮ್ಮ ತಮ್ಮ ನಾಮಪತ್ರವನ್ನು ಸಲ್ಲಿಸಿ ಪ್ರಚಾರಕ್ಕೆ ರೆಡಿಯಾಗುತ್ತಿದ್ದಾರೆ. ರಾಜಕೀಯ ಮುಖಂಡರ ಕೆಸರೆರೆಚಾಟ ಇನ್ನೊಂದು ಮಗ್ಗಲು ಮುಟ್ಟಲಿದೆ. ರಾಜಕೀಯ ಪಕ್ಷಗಳು ಜಾತಿಯ ಲೆಕ್ಕಾಚಾರವನ್ನು ನೋಡಿಕೊಂಡೆ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಕಾಂಗ್ರೆಸ್ ಪಕ್ಷ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಈ ಪಕ್ಷಕ್ಕೆ ಈ ಏಳು ಕ್ಷೇತ್ರಗಳು ವರವಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ದಲಿತರ ಪ್ರಾಬಲ್ಯವನ್ನು ಸಾಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಬಾವುಟ ಹಾರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಕ್ಷೇತ್ರಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಲವನ್ನು ನೀಡುತ್ತದೆ. ಗುಲ್ಬರ್ಗ, ಬಿಜಾಪುರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ ಮತ್ತು ರಾಯಚೂರಿನ ಎರಡು ಪರಿಶಿಷ್ಟ ಪಂಗಡದ ಐದು ಕ್ಷೇತ್ರಗಳು ಇದ್ದು ಈ ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಎಷ್ಟಿವೆ ಒಂದು ಲೋಕಸಭಾ ಕ್ಷೇತ್ರದಲ್ಲಿ ದಲಿತ ಮತಗಳು?
ಎಲ್ಲ ಜಾತಿಗಳಲ್ಲೂ ಇರುವಂತೆ ದಲಿತ ಸಮುದಾಯಲ್ಲಿ ಪಂಗಡಗಳು ಇವೆ. ಇವುಗಳನ್ನು ನೂರಕ್ಕೂ ಹೆಚ್ಚು ಜಾತಿಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಎಡಪಂಥೀಯ ಮತ್ತು ಬಲಪಂಥೀಯ ಜಾತಿಗಳಾಗಿ ವಿಂಗಡಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 3.5 ರಿಂದ 4 ಲಕ್ಷ ಮತಗಳಿವೆ ಎಂದು ಅಂದಾಜಿಸಲಾಗಿದೆ.

100 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ 30,000 ರಿಂದ 40,000 ದಲಿತ ಮತದಾರಿದ್ದಾರೆ. ದಿ ನ್ಯೂಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಬಗ್ಗೆ ಮಾಜಿ ಸಂಸದ ಎಚ್ ಹನುಮಂತಪ್ಪ ಮಾಹಿತಿ ನೀಡಿದ್ದಾರೆ.
ದಲ್ಲಿತರಲ್ಲೂ ಮತ ಬೇಧ ಇದೆ ಆದರೆ ಎಲ್ಲರೂ ಒಟ್ಟಾಗಿ ನಡೆದು ಕೊಳ್ಳುವ ಅನಿವಾರ್ಯತೆ ಇದೆ. ಸಭೆಗಳನ್ನು ಮಾಡಿ ಪಕ್ಷವನ್ನು ಕಟ್ಟುವ ಕಾರ್ಯಗಳು ನಡೆಯಬೇಕಿದೆ ಎಂದು ಸಂಸದ ಎಚ್ ಹನುಮಂತಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಮೊದಲೆಲ್ಲಾ ದಲಿತ ಮತಗಳು ಒಂದೇ ಪಕ್ಷಕ್ಕೆ ಮೀಸಲು ಆಗಿದ್ದವು. ಆದರೆ ಈಗ ಈ ಸಮುದಾಯದ ಜನ ಬೇರೆ ಪಕ್ಷಗಳ ಮುಖ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ಬಲಪಂಥೀಯ ದಲಿತರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ, ಎಡಪಂಥೀಯ ದಲಿತರು ಬಿಜೆಪಿಗೆ ಮತ ಹಾಕುತ್ತಾರೆ. ಬಹುತೇಕ ದಲಿತರು ಅಂಬೇಡ್ಕರ್ ವಾದಿಗಳಾಗಿದ್ದು, ಅಂಬೇಡ್ಕರ್ ವಾದಿ ಚಿಂತನೆಯನ್ನು ಅನುಸರಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ದಲಿತ ಮತಗಳಲ್ಲಿ ಹೆಚ್ಚಿನ ಪಾಲು ಪಡೆಯುವ ನಿರೀಕ್ಷೆಯಿದೆ. ದಲಿತ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ಬಲ ನೀಡಲಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications