ಬಿಜೆಪಿ-ಕಾಂಗ್ರೆಸ್ ನಡುವೆ ಶುರುವಾಯ್ತು 'ಧಮ್ ಬಿರಿಯಾನಿ' ಜಗಳ; ಯಾಕೆ?
ಬಿಜೆಪಿ ನಾಯಕರೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದುಕೊಂಡಿದ್ದ ಜಾಗದಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪ ಮಾಡಿದ್ದು, ವಿಧಾನ ಪರಿಷತ್‌ನ (ಮೇಲ್ಮನೆ) ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಸಿಎ ನಿವೇಶನಗಳನ್ನು ಪಡೆದಿದ್ದಾರೆ ಎಂದು ದೂರಿದೆ.
ಅಲ್ಲದೆ ಈ ಸಂಬಂಧ ಇಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹಮದ್ ಅವರೊಂದಿಗೆ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರ ನಿಯೋಗವು ನೇರವಾಗಿ ರಾಜ್ಯಪಾಲರ ಥಾವರ್‌ಚಂದ್ ಅವರನ್ನು ಭೇಟಿ ಮಾಡಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಕೂಡ ಸಲ್ಲಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ವಸಂತ ಕುಮಾರ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ವಿಧಾನ ಪರಿಷತ್ತಿನ ಸದಸ್ಯರಾದ ಪುಟ್ಟಣ್ಣ, ರವಿ, ಸುದಾಮ್ ದಾಸ್, ದಿನೇಶ್ ಗೂಳಿಗೌಡ, ಜಗದೇವ್ ಗುತ್ತೆದಾರ್, ತಿಪ್ಪಣ್ಣ ಕಮಕನೂರು, ಬಲ್ಕಿಸ್ ಬಾನು, ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ನಾರಾಯಣ ಸ್ವಾಮಿ, ಶರಣಪ್ಪ ಮಟ್ಟೂರ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷರಾದ ಧರ್ಮಸೇನ ಈ ನಿಯೋಗದಲ್ಲಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರು ಶಾಲೆ ನಡೆಸುವ ಉದ್ದೇಶದಿಂದ ಸಿಎ ಸೈಟ್ ಪಡೆದು 20 ವರ್ಷಗಳ ಬಳಿಕ ಆ ಜಾಗದಲ್ಲಿ ದಮ್ ಬಿರಿಯಾನಿ ಸೆಂಟರ್ ಮಾಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಸಂಪೂರ್ಣ ವಿವರಗಳಿರುವ 60 ಪುಟಗಳ ದಾಖಲೆಯನ್ನು ರಾಜ್ಯಪಾಲರಿಗೆ ದೂರು ನೀಡಿದೆ.

ಕರ್ನಾಟಕ ವಿಧಾನಪರಿಷತ್ ಗೌರವವನ್ನು ಉಳಿಸುವ ನಿಟ್ಟಿನಲ್ಲಿ ಪಾರದರ್ಶಕ ತನಿಖೆ ಆಗಬೇಕು. ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದೆ. ʼನಾರಾಯಣಸ್ವಾಮಿ ಅವರು ಗೃಹಮಂಡಳಿ ಅಧ್ಯಕ್ಷರಾಗಿದ್ದಾಗ ಶಿಕ್ಷಣದ ಉದ್ದೇಶಕ್ಕೆಂದು ಸಿಎ ಸೈಟ್ ಪಡೆದಿದ್ದರು. ಪ್ರಸಕ್ತ ಆ ಸ್ಥಳದಲ್ಲಿ ಆದರ್ಶ ಧಮ್ ಬಿರಿಯಾನಿ ಸೆಂಟರ್ ಇದೆ. ಇದು ದುರ್ದೈವ ಎಂದು ಸಲೀಂ ಅಹ್ಮದ್ ದೂರಿದರು.
ʼಮಲ್ಲಿಕಾರ್ಜುನ ಖರ್ಗೆ ಅವರು ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಯಾವೆಲ್ಲ ಅವಕಾಶಗಳನ್ನು ಕೊಟ್ಟಿದ್ದರು ಎನ್ನುವುದನ್ನು ಅವರು ನೆನಪು ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಎಲ್ಲ ಸವಲತ್ತುಗಳನ್ನು ಪಡೆದು, ಈಗ ಬಿಜೆಪಿಗೆ ಹೋಗಿ, ಅಲ್ಲಿ ಕುರ್ಚಿಯ ಆಸೆಗಾಗಿ ತಮ್ಮನ್ನು ಬೆಳೆಸಿದವರ ವಿರುದ್ಧವೇ ಮಾತನಾಡುವುದು ಎಷ್ಟು ಸರಿ? ನಾರಾಯಣಸ್ವಾಮಿ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುತ್ತಿದ್ದಾರೆʼ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ʼಬಿಜೆಪಿಯ ಹಗರಣಗಳು ಒಂದೊಂದಾಗಿಯೇ ಬಿಚ್ಚಿಕೊಳ್ಳುತ್ತಿವೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ನಾರಾಯಣಸ್ವಾಮಿಯವರ ಭೂಗಳ್ಳತನದ ಪುರಾಣ ದೊಡ್ಡದಿದೆ. 2002ರಿಂದ 2005ರವರೆಗೆ ಕರ್ನಾಟಕ ಗೃಹ ಮಂಡಳಿಯ ನಿರ್ದೇಶಕರಾಗಿದ್ದ ಇದೇ ನಾರಾಯಣಸ್ವಾಮಿಯವರು ನಡೆಸಿರುವ ಅಕ್ರಮ ಒಂದೆರಡಲ್ಲʼ ಎಂದು ಆರೋಪ ಮಾಡಿದರು.
ʼಮಂಡಳಿಯ ನಿರ್ದೇಶಕರಾಗಿದ್ದುಕೊಂಡೇ ತಮ್ಮ ಅಧ್ಯಕ್ಷತೆಯ ಟ್ರಸ್ಟಿಗೆ ಶಾಲೆ ನಿರ್ಮಿಸುತ್ತೇನೆ ಎಂದು ಸಿಎ ನಿವೇಶನವನ್ನು ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಈಗ ಸದರಿ ನಿವೇಶನದಲ್ಲಿ ಶಾಲೆ ಬದಲಾಗಿ ಧಮ್ ಬಿರಿಯಾನಿ ಹೋಟೆಲ್ ಇದೆ. ಮಂಡಳಿಯ ನಿರ್ದೇಶಕ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದ ನಾರಾಯಣಸ್ವಾಮಿಯವರು ನಿಯಮ ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೂರು ರಾಜ್ಯಪಾಲರ ಮುಂದಿದೆ, ರಾಜ್ಯಪಾಲರು ನಿಷ್ಪಕ್ಷಪಾತಿಯಾಗಿದ್ದರೆ, ರಾಜ್ಯಪಾಲರ ಹುದ್ದೆಗೆ ಘನತೆ ಬರಬೇಕು ಎಂದಾದರೆ ನಾರಾಯಣಸ್ವಾಮಿಯವರನ್ನು ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣಸ್ವಾಮಿ, ʼನನ್ನ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ಅವರು ದೂರು ನೀಡಿರುವುದನ್ನು ನಾನು ಸ್ವಾಗರಿಸುತ್ತೇನೆ. ಇದು 20 ವರ್ಷಗಳ ಹಿಂದಿನ ಪ್ರಕರಣ. ಇದು ರಾಜಕೀಯದ ಆಟ, ಇದಕ್ಕೆ ನಾನು ಹೆದರಲ್ಲ. ಯಾಕೆಂದರೆ ನಾನು ಛಲವಾದಿʼ ಎಂದು ತಿರುಗೇಟು ನೀಡಿದ್ದಾರೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications