‘ಈಗ ಯಡಿಯೂರಪ್ಪನವರ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ’

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹಲವು ಆರೋಪ ಮಾಡುತ್ತಿದೆ. ಈ ಪೈಕಿ ಬಿ.ವೈ. ವಿಜಯೇಂದ್ರ, ಬಿಜೆಪಿ ಕರ್ನಾಟಕ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಕ್ಷದ ಒಳಗೆ ಅಸಮಾಧಾನ ಭುಗಿಲೆದ್ದಿದೆ ಅಂತಾ ಹೇಳುತ್ತಿದೆ ಕಾಂಗ್ರೆಸ್. ಇದೀಗ ಕೆ.ಎಸ್. ಈಶ್ವರಪ್ಪ ಅವರ ವಿಚಾರ ಪ್ರಸ್ತಾಪಿಸಿ, ಬಿಜೆಪಿ ಒಳಜಗಳದ ಬಗ್ಗೆ ಗಂಭೀರ ಆರೋಪ ಮಾಡಿದೆ.

ಹೌದು, ಅಂತೂ, ಇಂತೂ ಕರ್ನಾಟಕ ಬಿಜೆಪಿಗೆ ಹೊಸ ಮನ್ವಂತರ ಆರಂಭವಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬಳಿಕ. ಅಂದ್ರೆ ಸುಮಾರು 6 ತಿಂಗಳಿಂದಲೂ ಒಳಜಗಳದಲ್ಲೇ ನೋವು ತಿಂದಿದ್ದ ಕಮಲ ಪಾಳಯಕ್ಕೆ ಖುಷಿಪಡುವ ಸುದ್ದಿ ಸಿಕ್ಕಿದೆ. ಕರ್ನಾಟಕ ಮಾಜಿ ಸಿಎಂ & ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಮಣೆಹಾಕಿದೆ. ಆದರೆ ಈ ಸಮಯದಲ್ಲಿ ಆಂತರಿಕ ಕಿಚ್ಚು ಹೊತ್ತಿದೆ ಅಂತಾ ಹೇಳುತ್ತಿರುವ ಕಾಂಗ್ರೆಸ್, ಈಶ್ವರಪ್ಪ ಅವರ ವಿಚಾರ ಪ್ರಸ್ತಾಪಿಸಿ ಈಗ ಹೇಳಿದ್ದೇನು ಗೊತ್ತಾ?

congress-bjp-war-continues

'ಯಡಿಯೂರಪ್ಪನವರ ಮಗ ನಿಮ್ಮ ಮಗನ..'

ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿದ್ದು, 'ರಿಟೈರ್ಡ್ ರಾಜಾಕಾರಿಣಿ @ikseshwarappa ಅವರೇ, ಇದೆಂತಹಾ ದುಸ್ಥಿತಿ ನಿಮ್ಮದು, ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು, ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು. ಈಗ ಯಡಿಯೂರಪ್ಪನವರ ಮಗ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ!' ಅಂತಾ ಹೇಳಿದೆ. ಈ ಮೂಲಕ ಬಿಜೆಪಿ ಆಂತರಿಕ ಕಿತ್ತಾಟ ಪ್ರಸ್ತಾಪಿಸಿ, ಅಸ್ತ್ರ ಪ್ರಯೋಗಿಸಿದೆ.

ಬಿಜೆಪಿ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?

ಬಿ.ವೈ.ವಿಜಯೇಂದ್ರ ಆಯ್ಕೆಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಆರಂಭಿಸಿದ್ದು, ಈ ಕುರಿತು ಸಾಲು ಸಾಲು ಟ್ವೀಟ್ ಮಾಡುತ್ತಿದೆ. ಈ ರೀತಿ ಮೊನ್ನೆಯಷ್ಟೇ '#BJPvsBJP ಕದನ ಈಗ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. 20, 30 ವರ್ಷಗಳಿಂದ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಪಕ್ಷದಲ್ಲಿ ಕಾಣಿಸಿಕೊಂಡು "ಯಡಿಯೂರಪ್ಪನವರ ಮಗ" ಎಂಬ ಒಂದೇ ಅರ್ಹತೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವ ಯಡಿಯೂರಪ್ಪನವರ ಮಗನನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ.. ಒಡಕಿನ ಮನೆಯಾಗಿರುವ #FamilyJanataParty ಮುಂದೆ ಸಂಪೂರ್ಣ ನುಜ್ಜುಗುಜ್ಜಾಗುವ ಎಲ್ಲಾ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.' ಎಂದು ವಾಗ್ದಾಳಿ ನಡೆಸಿತ್ತು. ಈಗ ಈಶ್ವರಪ್ಪ ಅವರ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿದೆ.

ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸೋಷಿಯಲ್ ಮೀಡಿಯಾ ವಾರ್ ಕಳೆದ 1 ವರ್ಷದಿಂದ ತೀವ್ರವಾಗಿದೆ ಅಂತಾ ಹೇಳಬಹುದು. ಹೀಗಿದ್ರೂ ಪರಿಸ್ಥಿತಿ ಇನ್ನೂ ತಣ್ಣಗಾಗಿಲ್ಲ, ಈ ಸಮಯದಲ್ಲೇ ಬಿಜೆಪಿ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಈ ವಿಚಾರವನ್ನ ಅಸ್ತ್ರ ಮಾಡ್ಕೊಂಡು ಇದೀಗ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಲೋಕಸಭೆ ಚುನಾವಣೆಯ ಮುಕ್ತಾಯದ ತನಕ ಇದು ಹೀಗೆ ಮುಂದುವರಿಯುವುದು ಬಹುತೇಕ ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+