Karnataka Cabinet: ಕಾಂಗ್ರೆಸ್‌ನ 18 ಹೊಸ ಸಚಿವರ ಪಟ್ಟಿ ಲಭ್ಯ: ಲಿಂಗಾಯತರ ಕೈ ಹಿಡಿದ ಹೈಕಮಾಂಡ್ : ಇಲ್ಲಿದೆ ಫೈನಲ್ ಲಿಸ್ಟ್!?
ಬೆಂಗಳೂರು, ಮೇ25: ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಸರ್ಕಾರ ರಚನೆಯ ಬಳಿಕ 8 ಜನರನ್ನ ಸಂಪುಟಕ್ಕೆ ಸೇರ್ಪಡೆಗೊಂಡ ಹಿನ್ನೆಲೆ ಹಲವು ಹಿರಿಯ ಶಾಸಕರು ಅಸಮಾಧಾನಗೊಂಡಿದ್ದು, ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹೈಕಮಾಂಡ್ ಹಿರಿಯ ನಾಯಕರು ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಅವರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರಾಥಮಿಕ ಹಂತದ ಸಭೆ ನಡೆಸಿದ್ದು, ಆ ಪಟ್ಟಿ ಕುರಿತು ಮಲ್ಲಿಕಾರ್ಜುನ್ ಖರ್ಗೆ ಜೊತೆಗೆ ಚರ್ಚೆ ನಡೆಸಿದ್ದು, ಇಂದು(ಗುರುವಾರ) ರಾತ್ರಿ ವೇಳೆಗೆ ಸಚಿವ ಪಟ್ಟಿ ಹೊರಬೀಳಲಿದೆ. ಈ ಪೈಕಿ ಕೆಲವು ಸಂಭವನೀಯ ಸಚಿವರ ಪಟ್ಟಿ ಲಭ್ಯವಾಗಿದ್ದು, ಮೂಲಗಳಿಂದ ತಿಳಿದು ಬಂದಿದೆ.

135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ 50ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.ಸಚಿವ ಸ್ಥಾನಕ್ಕಾಗಿ ನೇರವಾಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಮಂತ್ರಿ ಪಟ್ಟಕ್ಕಾಗಿ ಲಾಬಿ ನಡೆಸಿದ್ದಾರೆ. ಈಗಾಗಲೇ ಉನ್ನತ ಮೂಲಗಳಿಂದ ಬಂದ ಲಭ್ಯವಾಗಿರುವ ಸಚಿವರುಗಳ ಪಟ್ಟಿಯೇ ಬಹುತೇಕ ಖಚಿತವಾಗಲಿದೆ ಎಂದು ಹೇಳಲಾಗಿದೆ.
ಸಂಭವನೀಯ ಸಚಿವರು:
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳಕರ್
ಶಿವಾನಂದ ಪಾಟೀಲ್
ಶರಣಬಸಪ್ಪ ದರ್ಶನಾಪುರ
ರಾಯರೆಡ್ಡಿ
ಡಾ. ಮಹಾದೇವಪ್ಪ
ಪಿರಿಯಾಪಟ್ಟಣ ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಅಜಯ್ ಸಿಂಗ್
ಪುಟ್ಟರಂಗ ಶೆಟ್ಟಿ
ನರೇಂದ್ರ ಸ್ವಾಮಿ
ಚಿಂತಾಮಣಿ ಸುಧಾಕರ್
ಹಿರಿಯೂರು ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ












Click it and Unblock the Notifications