‘ಬಿಜೆಪಿ ಶಾಸಕ ಮುನಿರತ್ನನ ಆಪ್ತ ಗುತ್ತಿಗೆದಾರರೊಬ್ಬರನ್ನು ಹಫ್ತಾ ವಸೂಲಿಗಾಗಿ...’
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಿತ್ತಾಟ ಹಾವು & ಮುಂಗುಸಿ ರೀತಿ ಆಗೋಗಿದೆ. ಇದು ಯಾವ ಮಟ್ಟಿಗೆ ತಲುಪಿದೆ ಅಂದ್ರೆ, ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಕ್ಷಣಕ್ಷಣಕ್ಕೆ ಗಂಭೀರ ಆರೋಪ ಮಾಡುತ್ತಿದೆ. ಹಾಗೇ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಇದೀಗ ಶಾಸಕ ಮುನಿರತ್ನ ಆಪ್ತನ ವಿಚಾರವೂ ಫೈಟಿಂಗ್‌ನಲ್ಲಿ ಪ್ರಸ್ತಾಪವಾಗಿದೆ!
ಹೌದು, ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಗುತ್ತಿಗೆದಾರನ ಕಿಡ್ನಾಪ್ ಆರೋಪವು ಕ್ಷಣಕ್ಕೊಂದು ತಿರುವನ್ನು ಪಡೆಯುತ್ತಿದೆ. ಗುತ್ತಿಗೆದಾರನ ಅಪಹರಿಸಿ, 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಈಗಾಗಲೇ ಯಶವಂತಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್ ಬಂಧನವಾಗಿದೆ. ಸಿಸಿಬಿ ಪಡೆ ಜಿ.ಕೆ.ವೆಂಕಟೇಶ್ ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ.

'ಬಿಜೆಪಿ ಶಾಸಕ ಮುನಿರತ್ನನ ಆಪ್ತ...'
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಅಧಿಕಾರ ಕಳೆದುಕೊಂಡ ಬಿಜೆಪಿ ಹಣಕ್ಕಾಗಿ ಹಪಹಪಿಸುತ್ತಿದೆ. ರಕ್ತಕ್ಕಾಗಿ ಹಪಹಪಿಸುವ ರಕ್ಕಸರ ರೀತಿ. ಬಿಜೆಪಿ ಶಾಸಕ ಮುನಿರತ್ನನ ಆಪ್ತ ಗುತ್ತಿಗೆದಾರರೊಬ್ಬರನ್ನ ಹಫ್ತಾ ವಸೂಲಿಗಾಗಿ ಕಿಡ್ನಾಪ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಅಧಿಕಾರವಿಲ್ಲದ ಈ ಸಂದರ್ಭದಲ್ಲಿ ಬಿಜೆಪಿ ಕಿಡ್ನಾಪ್, ದರೋಡೆ, ಹಫ್ತಾ ವಸೂಲಿಯಂತಹ ಕೃತ್ಯಕ್ಕೆ ಇಳಿದಿದೆ. ಇದಕ್ಕಾಗಿಯೇ #BJPRowdyMorcha ತೆರೆದಿರುವುದೇ @BJP4Karnataka?' ಎಂದು ಪ್ರಶ್ನೆ ಮಾಡಿದೆ ಕರ್ನಾಟಕ ಕಾಂಗ್ರೆಸ್.
ಅಧಿಕಾರ ಕಳೆದುಕೊಂಡ ಬಿಜೆಪಿ ಹಣಕ್ಕಾಗಿ ಹಪಹಪಿಸುತ್ತಿದೆ. ರಕ್ತಕ್ಕಾಗಿ ಹಪಹಪಿಸುವ ರಕ್ಕಸರ ರೀತಿ.
— Karnataka Congress (@INCKarnataka) October 21, 2023
ಬಿಜೆಪಿ ಶಾಸಕ ಮುನಿರತ್ನನ ಆಪ್ತ ಗುತ್ತಿಗೆದಾರರೊಬ್ಬರನ್ನು ಹಫ್ತಾ ವಸೂಲಿಗಾಗಿ ಕಿಡ್ನಾಪ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಅಧಿಕಾರವಿಲ್ಲದ ಈ ಸಂದರ್ಭದಲ್ಲಿ ಬಿಜೆಪಿ ಕಿಡ್ನಾಪ್, ದರೋಡೆ, ಹಫ್ತಾ ವಸೂಲಿಯಂತಹ ಕೃತ್ಯಕ್ಕೆ ಇಳಿದಿದೆ.… pic.twitter.com/Ou5Qzr67Dm
ಏನಿದು ಅಪಹರಣದ ಆರೋಪ?
ಇನ್ನು ಕಿಡ್ನ್ಯಾಪ್ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಯಶವಂತಪುರ ವಾರ್ಡ್‌ನ ಕಾಮಗಾರಿ ಗುತ್ತಿದಾರ ಚಂದ್ರು ಪಾಲಾಗಿತ್ತು. ಇದ್ರಿಂದ ಕೋಪಗೊಂಡು ವೆಂಕಟೇಶ್ ನಿನ್ನಿಂದ ನನಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಕಾಮಗಾರಿ ಕೂಡ ಕೈ ತಪ್ಪಿದೆ. ಕೂಡಲೇ ನನ್ನ ನಷ್ಟ ತುಂಬಿಕೊಡಬೇಕು ಎಂದು ಗುತ್ತಿಗೆದಾರ ಚಂದ್ರು ಮೇಲೆ ಒತ್ತಡ ಹಾಕಿದ್ದರೆಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ.
ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಜೋರಾಗಿದ್ದು ಇಬ್ಬರೂ ಒಬ್ಬರ ಮೇಲೆ ಒಬ್ಬರು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಆದರೆ ಈಗ ಕೇಳಿಬಂದಿರುವ ಆರೋಪವು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಈ ವಿಚಾರದಲ್ಲಿ ತಿಕ್ಕಾಟ ಜೋರಾಗಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕು.












Click it and Unblock the Notifications