ವೆಂಕಟೇಶ್ ನಾಯಕ್ ಸಾವಿಗೆ ಕಂಬನಿ ಮಿಡಿದ ಗಣ್ಯರು
ಬೆಂಗಳೂರು, ಆಗಸ್ಟ್ 24 : ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್ ಬಳಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಮೃತಪಟ್ಟ ಶಾಸಕ ವೆಂಕಟೇಶ್ ನಾಯಕ್ ಸಾವಿಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಶಾಸಕರ ಮೃತದೇಹವನ್ನು ರಾಯಚೂರಿಗೆ ತರಲಾಗುತ್ತಿದೆ.
ಪೆನುಕೊಂಡ ಆಸ್ಪತ್ರೆಗೆ ರಾಯಚೂರು ಜಿಲ್ಲಾಡಳಿತ ವಿಶೇಷ ಆಂಬ್ಯುಲೆನ್ಸ್ ಕಳುಹಿಸಿದ್ದು. ಶಾಸಕ ವೆಂಕಟೇಶ್ ನಾಯಕ್ ಮೃತದೇಹ ಹೊತ್ತ ಆಂಬ್ಯುಲೆನ್ಸ್ ರಾಯಚೂರಿಗೆ ಹೊರಟಿದೆ. ದೇವದುರ್ಗ ತಾಲೂಕಿನ ಅರಕೆರ ಗ್ರಾಮದಲ್ಲಿ ವೆಂಕಟೇಶ್ ನಾಯಕ್ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಶಶಿಕಾಂತ್ ಸಿಂಥಿಲ್ ಹೇಳಿದ್ದಾರೆ. [ವೆಂಕಟೇಶ್ ನಾಯಕ್ ಕಿರು ಪರಿಚಯ]

ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ ವೆಂಕಟೇಶ್ ನಾಯಕ್ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವ ಶರಣ ಪ್ರಕಾಶ್ ಪಾಟೀಲ್ ಕಂಬನಿ ಮಿಡಿದಿದ್ದಾರೆ. [ರೈಲ್ವೆ ಅಪಘಾತ, ಶಾಸಕ ವೆಂಕಟೇಶ್ ನಾಯಕ್ ಸಾವು]
Congress President, Smt. Sonia Gandhi has expressed shock and anguish over the Bangalore-Nanded Express train tragedy
— INC India (@INCIndia) August 24, 2015 ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ : 'ವೆಂಕಟೇಶ್ ನಾಯಕ್ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟಾಗಿದೆ. ಅವರೊಬ್ಬ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ನಾವೇ ಅವರನ್ನು ಒತ್ತಾಯಮಾಡಿ ವಿಧಾನಸಭೆ ಚುನಾವಣೆಗೆ ನಿಲ್ಲಿಸಿದ್ದೆವು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಕಳಸಾ-ಬಂಡೂರಿ ನಾಲಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸರ್ವಪಕ್ಷ ನಿಯೋಗದೊಂದಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ.
ಪರಮೇಶ್ವರ್ ಕಂಬನಿ : 'ಶಾಸಕ ವೆಂಕಟೇಶ್ ಅವರು ಹೈದರಾಬಾದ್ ಕರ್ನಾಟಕದ ಪ್ರಾಮಾಣಿಕ ಕಾಂಗ್ರೆಸ್ ಮುಖಂಡರಾಗಿದ್ದರು' ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಸಂತಾಪ ಸೂಚಿಸಿದ್ದಾರೆ.
Smt Gandhi also sent her deep condolences to the family of Congress MLA Shri Venkatesh Naik, who was also killed in the tragedy.
— INC India (@INCIndia) August 24, 2015 ಸರಳ ರಾಜಕಾರಣಿ : 'ವೆಂಕಟೇಶ್ ನಾಯಕ್ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದೆ. ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದರು' ಎಂದು ವೈದ್ಯಕೀಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications