ಬಿಜೆಪಿಯಲ್ಲಿ ಮುಂದಿನ ಸಿಎಂಗಿರಿಗೆ ಜಿದ್ದಾಜಿದ್ದಿ : ಸಿಎಂ ರೇಸ್ ನಲ್ಲಿರುವ ಬಿಜೆಪಿ ನಾಯಕರು ಇವರೇ ನೋಡಿ
ಬೆಂಗಳೂರು, ನವೆಂವರ್ 28: ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಡ ಹಾಕಿದ್ದರು. ಇದೀಗ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಮುಂದಿನ ಸಿಎಂ ಫೈಟ್ ಜೋರಿದ್ದು, ಬಿ ಎಸ್ ಯಡಿಯೂರಪ್ಪ ಬಣ ಹಾಗೂ ಯತ್ನಾಳ್ ಬಣದ ನಡುವೆ ಮುಂದಿನ ಸಿಎಂ ಫೈಟ್ ಜೋರಾಗಿ ನಡೆಯುತ್ತಿದೆ.
ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಇತ್ತ ಯತ್ನಾಳ್ ನಮ್ಮ ಬಣದವರು ಸಿಎಂ ಆಗ್ತಾರೆ ಎಂದಿದ್ದಾರೆ. ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಪಟ್ಟವನ್ನ ಅಲಂಕರಿಸಿದ ದಿನದಿಂದಲೂ ಸಹ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ಇನ್ನೂ ಯತ್ನಾಳ್ ಅವರ ಬಣದಲ್ಲಿ ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಬಿ ವೈ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ವಿರುದ್ಧ ತೊಡೆತಟ್ಟಿದ್ದಾರೆ. ಅಲ್ಲದೇ ಇನ್ನೊಂದು ವರ್ಷದಲ್ಲಿ ನಮ್ಮ ತಂಡದ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಮುಂದಿನ ಬಾರಿ ಟಿಕೆಟ್ ನೀಡುವ ಅಧಿಕಾರ ನಮಗೆ ಬರುತ್ತದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಾವು ಬಿಜೆಪಿಯವರಾಗಿದ್ದು, ಪಕ್ಷದಲ್ಲಿದ್ದೇವೆ. ನಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದ ಯತ್ನಾಶ್ ಅವರು, ಉಪ ಚುನಾವಣೆ ಸೋಲಿಗೆ ಎಲ್ಲರೂ ಹೊರಬೇಕು ಎಂಬ ಯಡಿಯೂರಪ್ಪ ಹೇಳಿಕೆಗೆ ಗೆದ್ದರೆ ಅವರು ಹೊರಬೇಕು. ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ್ದಾರೆಂದು ನಾವೆಲ್ಲ ಕೇಳಬೇಕಾ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ಇನ್ನೂ ನಮ್ಮ ತಂಡದಿಂದ ಒಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಮಾಜಿ ಸಚಿವ ಎಂ ಪಿ ರೇಣುಕಾಸ್ವಾಮಿ ಕಿಡಿಕಾರಿದ್ದು, ವಿಜಯೇಂದ್ರ ನಮ್ಮ ಭವಿಷ್ಯದ ನಾಯಕನೆಂಬುದನ್ನು ತೋರಿಸುತ್ತೇವೆ ಎಂದು ಪರೋಕ್ಷವಾಗಿ ಬಸವನಗೌಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಸಿಎಂ ರೇಸ್ ನಲ್ಲಿರುವವರ ಪಟ್ಟಿ ಇಲ್ಲಿದೆ?
* ಬಿ ವೈ ವಿಜಯೇಂದ್ರ
* ಬಸವನಗೌಡ ಪಾಟೀಲ್ ಯತ್ನಾಳ್
* ಸುನೀಲ್ ಕುಮಾರ್
* ಆರ್. ಅಶೋಕ್
* ಬಿ ಎಲ್ ಸಂತೋಷ್
* ರಮೇಶ್ ಜಾರಕಿಹೊಳಿ












Click it and Unblock the Notifications