ಕಮಿಷನ್ ಸರ್ಕಾರ ಎಂದ ಮೋದಿಗೆ ಕಾರ್ಟೂನ್ ತೋರಿಸಿದ ಸಿದ್ದರಾಮಯ್ಯ

Recommended Video

      ನರೇಂದ್ರ ಮೋದಿ ಮೇಲೆ ಹರಿಹಾಯ್ದ ಸಿದ್ದರಾಮಯ್ಯ | Oneindia Kannada

      ಮೈಸೂರು, ಫೆಬ್ರವರಿ 20: ಇಲ್ಲಿ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಿದ್ದರಾಮಯ್ಯ ಅವರು ಕಾರ್ಟೂನ್ ವೊಂದನ್ನು ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.

      'ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಇಲ್ಲಿ 10 ಪರ್ಸೆಂಟ್ ಸರ್ಕಾರ ಇದೆ ಎಂದು ಹೇಳಿದ್ದೆ. ಆನಂತರ ನನಗೆ ಸಾಕಷ್ಟು ಜನ ಕರೆ ಮಾಡಿ, ಎಸ್​ಎಂಎಸ್ ಮೂಲಕ, ನೇರವಾಗಿ ಸಿಕ್ಕಾಗ 'ನಿಮ್ಮ ಮಾಹಿತಿ ಸರಿಯಿಲ್ಲ. ಶೇ.10 ಕಮಿಷನ್ ವ್ಯವಹಾರ ನಡೆಯುತ್ತಿಲ್ಲ, ಅದಕ್ಕಿಂತಲೂ ಹೆಚ್ಚು ಭ್ರಷ್ಟಾಚಾರವಿದೆ' ಎಂದು ಹೇಳಿದ್ದಾರೆ. ನಿಮಗೆ ಕಮಿಷನ್ ಸರ್ಕಾರ ಬೇಕೊ, ಮಿಷನ್ ಸರ್ಕಾರ ಬೇಕೊ? ಬಿಜೆಪಿ ಜನರ ಎಲ್ಲ ಕಾರ್ಯವನ್ನೂ ಮಿಷನ್ ರೀತಿ ನಡೆಸುತ್ತದೆ. ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು.

      Commission Politics : Karnataka CM Siddaramaiah hits back at PM Modi


      ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ ಅವರು,ಪ್ರೀತಿಯ ನರೇಂದ್ರ ಮೋದಿ ಅವರೇ ನಿಮಗೆ ಕಮಿಷನ್ ಬಗ್ಗೆ ಮಾತನಾಡುವುದು ಇಷ್ಟ ಎಂಬುದು ತಿಳಿಯಿತು.

      ಹಾಗಾದರೆ ನನ್ನ ಪ್ರಶ್ನೆಗೆ ಉತ್ತರಿಸಿ- ನೀವು ಅಪನಗದೀಕರಣ ಮೂಲಕ ಸಾರ್ವಜನಿಕರು ಕ್ಯೂನಲ್ಲಿ ನಿಲ್ಲುವಂತೆ ಮಾಡಿದ್ರಿ. ಈಗ ನೀರವ್ ಮೋದಿ ಅವರನ್ನು ಓಡಿ ಹೋಗಲು ಬಿಟ್ಟಿದ್ದೀರಿ, 12,000 ಕೋಟಿ ರು ಇದು ಸಾರ್ವಜನಿಕರ ಹಣವಲ್ಲವೇ, ಎಷ್ಟು ಪರ್ಸಂಟೇಜ್ ಸಾರ್ವಜನಿಕರ ಹಣ ಇದು? ಎಂದು ಪ್ರಶ್ನಿಸಿದ್ದಾರೆ.

      ಈ ಬಗ್ಗೆ ಮಾತನಾಡುತ್ತಾ, ಮೋದಿ ಅವರನ್ನು ದೇಶದ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಜರೆದಿದ್ದಾರೆ. ನಾನಾಗಿದ್ದರೆ ನೀರವ್ ಮೋದಿ ಪರಾರಿಯಾಗಲು ಬಿಡುತ್ತಿರಲಿಲ್ಲ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+