• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಫೆಬ್ರವರಿ 13ರ ಬಳಿಕ ಚಳಿ ಪ್ರಮಾಣ ಇಳಿಕೆ

|

ಬೆಂಗಳೂರು,ಫೆಬ್ರವರಿ 10: ರಾಜ್ಯದಲ್ಲಿ ಚಳಿಯ ವಾತಾವರಣ ಮುಂದುವರೆದಿದೆ. ಫೆ.13ರ ಬಳಿಕ ಚಳಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ಕಡಿಮೆಯಾಗುತ್ತಿದ್ದು, ಒಣಹವೆ ವಾತಾವರಣ ಮುಂದುವರೆದಿದೆ.ರಾಜ್ಯಾದ್ಯಂತ ಫೆ.13ರವರೆಗೂ ಹಗಲು ಒಣಹವೆ ಹಾಗೂ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ ಸ್ವಲ್ಪಚಳಿ ಮುಂದುವರೆಯಲಿದೆ. ಫೆ.13ರ ಬಳಿಕ ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗದ ಎಲ್ಲಾ ಪ್ರದೇಶಗಳಲ್ಲಿ ವಾಡಿಕೆ ಪ್ರಮಾಣದ ತಾಪಮಾನ ದಾಖಲಾಗಿ,ಈಗಿರುವ ಸ್ವಲ್ಪ ಚಳಿ ದೂರವಾಗುವ ನಿರೀಕ್ಷೆ ಇದೆ.

ದೆಹಲಿಯಲ್ಲಿ ಅಪಾಯಕಾರಿ ಮಟ್ಟ ತಲುಪಿದ ವಾಯು ಮಾಲಿನ್ಯ

ಕರಾವಳಿ ಭಾಗದಲ್ಲಿ ಈಗಾಗಲೇ ಚಳಿ ಕಡಿಮೆಯಾಗಿದೆ, ಆದರೆ ಉತ್ತರ ಕನ್ನಡ, ಶಿವಮೊಗ್ಗ ಭಾಗಗಳಲ್ಲಿ ಚಳಿ ಮುಂದುವರೆದಿದೆ.ಬೀದರ್‌ನಲ್ಲಿ ರಾಜ್ಯದ ಕನಿಷ್ಠ ಉಷ್ಣಾಂಶ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರಿಂದ ಆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಸ್ವಲ್ಪ ಚಳಿಯ ವಾತಾವರಣವಿರಲಿದೆ.

ಹಾಸನದಲ್ಲಿ 10.4 ಡಿಗ್ರಿ ಸೆಲ್ಸಿಯಸ್, ಧಾರವಾಡ 11, ವಿಜಯಪುರ 11.5, ಹಾವೇರಿ 13, ಗದಗ 13.6 ಡಿಗ್ರಿ ಸೆಲ್ಸಿಯಸ್,ಬೆಳಗಾವಿಯಲ್ಲಿ 13.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

   ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

   ಸದ್ಯ ರಾಜ್ಯದಲ್ಲಿ ತೇವಾಂಶ ಸಹಿತ ಗಾಳಿ ಬೀಸುವಿಕೆ ಪ್ರಮಾಣ ಕಡಿಮೆ ಇರುವುದರಿಂದ ಹಗಲು ವೇಳೆ ಹೆಚ್ಚು ಒಣ ಹವೆಯ ವಾತಾವರಣ ಕಂಡುಬರುತ್ತಿದೆ. ಇದರ ಮಧ್ಯೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಸ್ವಲ್ಪ ಕಡಿಮೆಯಾಗಿದೆ.

   English summary
   The chilly weather in Karnataka continues. The cold is expected to ease after Feb. 13, the weather department said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X