ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ, ಲಘು ಮಳೆ, ಮಂಜಿನ ಮುನ್ಸೂಚನೆ

ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ, ಲಘು ಮಳೆ, ಮಂಜಿನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನುಳಿದ ಜಿಲ್ಲೆಗಳು ಯಾವವು ಎಂದು ತಿಳಿಯಿರಿ

|
Google Oneindia Kannada News

ಬೆಂಗಳೂರು, ಜನವರಿ 01: ಫೆಬ್ರುವರಿ ತಿಂಗಳಿನ ಮೊದಲ ದಿನದ ಮುಂಜಾನೆ ಮಂಜು ಮುಸುಕಿದ್ದು, ನಗರದಲ್ಲಿ ಇಂದು ಕನಿಷ್ಠ ತಾಪಮಾನದ ನಿರೀಕ್ಷೆಯಿದೆ. ಕೆಲವು ಸ್ಥಳಗಳಲ್ಲಿ ಬೆಳಿಗ್ಗೆ ಮಂಜಿನ ಪದರವು ನಗರವನ್ನು ಆವರಿಸಿದೆ ಮತ್ತು ಲಘು ಮಳೆಯ ಮುನ್ಸೂಚನೆಯೂ ಇದೆ. ಈ ವಾರ ಇದೇ ರೀತಿಯ ವಾತಾವರಣ ಮುಂದುವರಿಯಬಹುದೆಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಪ್ರಕಾರ, ನಗರದಲ್ಲಿ ಕನಿಷ್ಠ ತಾಪಮಾನವು 17 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿದೆ.

ಅರುಣಾಚಲ ಪ್ರದೇಶದ ಶುಕ್ರವಾರ ಮುಂಜಾನೆ ಭೂಕಂಪ ಅರುಣಾಚಲ ಪ್ರದೇಶದ ಶುಕ್ರವಾರ ಮುಂಜಾನೆ ಭೂಕಂಪ

'ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅತಿ ಕಡಿಮೆ ಅಥವಾ ಲಘು ಮಳೆಯಾಗುವ ಸಾಧ್ಯತೆಯಿದೆ' ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ನೈಸರ್ಗಿಕ ವರದಿ ತಿಳಿಸಿದೆ.

Cold, light rain and fog forecast in many districts of the Karnataka including Bengaluru

ಮಂಗಳವಾರದಂದು ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಕಡಿಮೆಯಾಗಿದೆ. ಮಂಗಳವಾರದ ಗರಿಷ್ಠ ತಾಪಮಾನವು 28.8 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ಋತುವಿನ ಸರಾಸರಿಗಿಂತ ಸ್ವಲ್ಪ ಕಡಿಮೆಯಾಗಿದೆ.

ಆದರೆ, ಇಂದು ನಗರದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಭವಿಷ್ಯ ನುಡಿದಿದ್ದಾರೆ.

'ಫೆಬ್ರವರಿ 2 ರ ವರೆಗೆ, ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ತುಂಬಾ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 18 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ' ಎಂದು ಹವಾಮಾನ ಇಲಾಖೆ ತಿಳಿಸಿದೆ.

Cold, light rain and fog forecast in many districts of the Karnataka including Bengaluru

ಜನವರಿಯಲ್ಲಿ, ಬೆಂಗಳೂರು ಸಾಮಾನ್ಯವಾಗಿ ತಂಪಾದ ವಾತಾವರಣವನ್ನು ಕಂಡಿದೆ. ಜನವರಿಯಲ್ಲಿ ನಗರವು ಹಲವಾರು ದಿನಗಳವರೆಗೆ ಮಂಜಿನ ದಟ್ಟವಾದ ಪದರದಿಂದ ಆವೃತವಾಗಿತ್ತು. ಪಾದರಸದ ಮಟ್ಟವು ಆಗಾಗ್ಗೆ ಋತುವಿನ ಸರಾಸರಿ ಶ್ರೇಣಿಗಿಂತ ಕೆಳಕ್ಕೆ ಹೋಗುತ್ತು. ಜನವರಿ 15 ರಂದು ಪಾದರಸದ ಮಟ್ಟವು 12.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದರೊಂದಿಗೆ ಕಳೆದ ಐದು ವರ್ಷಗಳಲ್ಲಿ ನಗರದ ಅತ್ಯಂತ ಕಡಿಮೆ ತಾಪಮಾನವನ್ನು ಈ ತಿಂಗಳ ಆರಂಭದಲ್ಲಿ ದಾಖಲಾಗಿದೆ.

ಕೆಲವು ಹವಾಮಾನ ತಜ್ಞರ ಪ್ರಕಾರ, ಈ ಚಳಿಗಾಲದಲ್ಲಿ ನಗರಕ್ಕೆ ಗರಿಷ್ಠ-ಕನಿಷ್ಠ ತಾಪಮಾನದ ಅಂತರವು ಹೆಚ್ಚಿದೆ ಮತ್ತು ಇದು ನಗರದ ಶಾಶ್ವತ ಹವಾಮಾನ ಬದಲಾವಣೆಯಾಗಿ ನೆಲೆಗೊಳ್ಳಬಹುದು.

English summary
On the first day of February, the morning fog cleared and the city expected minimum temperature today. A layer of fog has covered the city in the morning at some places and light rain is also forecast
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X