‘ಸಿದ್ದರಾಮಯ್ಯ ಪರ್ಸಂಟೇಜ್ ಮುಖ್ಯಮಂತ್ರಿ'

Posted By: Gururaj
Subscribe to Oneindia Kannada
   ಸಿದ್ದರಾಮಯ್ಯ ಪರ್ಸಂಟೇಜ್ ಮುಖ್ಯಮಂತ್ರಿ ಅಂದ್ರು ಬಿ ಎಸ್ ಯಡಿಯೂರಪ್ಪ

   ಬೆಂಗಳೂರು, ಅಕ್ಟೋಬರ್ 24 : 'ಸಿದ್ದರಾಮಯ್ಯ ಪರ್ಸಂಟೇಜ್ ಮುಖ್ಯಮಂತ್ರಿ. ಯಾವುದೇ ಯೋಜನೆಗೂ ಶೇ 25ರಷ್ಟು ಕಮೀಶನ್ ಇಲ್ಲದೆ ಅನುಮೋದನೆ ನೀಡುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

   ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ಲಾಂಛನ ಬಿಡುಗಡೆ

   ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ, 'ಯೋಜನೆ ಅಥವ ಕಾಮಗಾರಿ ಅಂದಾಜು ಮೊತ್ತವನ್ನು ಶೇ 25ರಷ್ಟು ಹೆಚ್ಚಿಸಿ, ಅದನ್ನು ಕಮೀಶನ್ ರೂಪದಲ್ಲಿ ಪಡೆಯುವ ಅಭ್ಯಾಸ ಮಾಡಿಕೊಂಡಿದ್ದಾರೆ' ಎಂದು ದೂರಿದರು.

   Coal scam : Yeddyurappa attacks Siddaramaiah

   'ಕಲ್ಲಿದ್ದಲು ಹಗರಣವನ್ನು ಬಿಜೆಪಿ ಬಯಲು ಮಾಡಿದ ಮೇಲೆ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಲ್ಲಿದ್ದಲು ಪೂರೈಸಲು ಒಪ್ಪಂದ ಮಾಡಿಕೊಂಡಿದ್ದ ಕಂಪೆನಿ ಕಟ್ಟಬೇಕಿದ್ದ ದಂಡದ ಹಣವನ್ನು ಸುಪ್ರೀಂಕೋರ್ಟ್ ಆದೇಶದ ಅನ್ವಯವೇ ಪಾವತಿಸಿದ್ದೇವೆ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ' ಎಂದರು.

   ಸಿದ್ದು, ಡಿಕೆಶಿ ಮೇಲೆ 417 ಕೋಟಿ ಅವ್ಯವಹಾರ ಆರೋಪ ಮಾಡಿದ ಬಿಎಸ್ ವೈ

   ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಯಡಿಯೂರಪ್ಪ ಅವರು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ಅವ್ಯವಹಾರ ಬಗ್ಗೆ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿ 417 ಕೋಟಿ ರುಪಾಯಿಯ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka BJP president B.S.Yeddyurappa verbally attacked Chief Minister Siddaramaiah.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ