ಸಿದ್ದರಾಮಯ್ಯ ಸೋಮವಾರದ ಕಾರ್ಯಕ್ರಮವೇನು?
ಬೆಂಗಳೂರು, ಡಿ.2 : ಸಿಎಂ ಸಿದ್ದರಾಮುಯ್ಯ ಅವರ ಸೋಮವಾರದ ದಿನಚರಿ ಏನು?. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಜೊತೆಗೆ ಸಿಎಂ ತವರು ಜಿಲ್ಲೆಯಲ್ಲಿ ಪಂಚಲಿಂಗದರ್ಶನ ಸೋಮವಾರದಿಂದ ಆರಂಭವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ತಲಕಾಡಿಗೆ ಭೇಟಿ ನೀಡಿ ನಂತರ ಬೆಳಗಾವಿಗೆ ತೆರಳಲಿದ್ದಾರೆ.
ನ.25ರಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಶನಿವಾರ ಮತ್ತು ಭಾನುವಾರ ಬಿಡುವು ದೊರಕಿರುವುದರಿಂದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಕಪಾಪ ಆರಂಭವಾಗುವ ಹೊತ್ತಿಗೆ ಸಿಎಂ ಪುನಃ ಬೆಳಗಾವಿಗೆ ತೆರಳಬೇಕಿದೆ. ಇದ ಮಧ್ಯಯೇ ತವರು ಜಿಲ್ಲೆಯ ಪಂಚಲಿಂಗ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದೆ.

ಸೋಮವಾರ ಸಿಎಂ ಸಿದ್ದರಾಮುಯ್ಯ 9 ಗಂಟೆಗೆ ತಲಕಾಡಿಗೆ ಭೇಟಿ ನೀಡಿಲಿದ್ದಾರೆ ಪಂಚಲಿಂಗ ಡಿ.2ರಿಂದ 7ರ ವರೆಗೆ ನಡೆಯಲಿರುವ ಪಂಚಲಿಂಗ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗಾವಿಗೆ ತೆರಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಧಾನಸಭೆಗೆ ಹಾಜರಾಗಲಿರುವ ಅವರು 12. ಗಂಟೆಗೆ ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಲಿದ್ದಾರೆ. (ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ ಯಾವುದಯ್ಯ)
ಕಲಾಪದಲ್ಲಿ ಏನು : ಸೋಮವಾರದ ಕಲಾಪದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುವ ವಿಚಾರದ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಕ್ಕರೆ ಕಾರ್ಖನೆ ಮಾಲೀಕರು ಸರ್ಕಾರ ಕಬ್ಬಿಗೆ ಘೋಷಿಸಿರುವ 2500 ರೂ. ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿವೆ. ಇದನ್ನು ಉಲ್ಲಂಘಿಷಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರದ ಎಚ್ಚರಿಕೆಯನ್ನು ಕಾರ್ಖನೆ ಮಾಲೀಕರು ತೀವ್ರವಾಗಿ ಖಂಡಿಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಸಕ್ಕರೆ ಕಾರ್ಖನೆ ಮಾಲೀಕ ಉಮೇಶ್ ಕತ್ತಿ ಸರ್ಕಾರ ಘೋಷಿಸಿದ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ಸೋಮವಾರ ಸದನದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. (ಸಿದ್ದರಾಮಯ್ಯ ಸರ್ಕಾರಕ್ಕೆ ಸಕ್ಕರೆ ಕಾಯಿಲೆ!)
ಆರೋಗ್ಯ ಸಚಿವರಿಗೆ ಆನಾರೋಗ್ಯ : ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಜ್ವರದಿಂದಾಗಿ ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ದರಿಂದ ಸೋಮವಾರದ ಕಲಾಪಕ್ಕೆ ಆರೋಗ್ಯ ಸಚಿವರು ಗೈರು ಹಾಜರಾಗಬಹುದು.


Click it and Unblock the Notifications
