‘ಜನತಾ ದರ್ಶನ’ & ಸಿಎಂ ಸಿದ್ದರಾಮಯ್ಯ ಊಟದ ಪ್ರಸಂಗ!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದೆ. ಇದೇ ವೇಳೆ ಹೊಸ ಸರ್ಕಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಾ, ಆಡಳಿತ ಯಂತ್ರವನ್ನೂ ಚುರುಕಾಗಿಸಿ ಅಭಿವೃದ್ಧಿಗೆ ಸಜ್ಜಾಗುತ್ತಿದೆ. ಹೀಗಿದ್ದಾಗ ಜನರ ಸಮಸ್ಯೆ ಆಲಿಸಿ, ರಾಜ್ಯದಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸಿಎಂ ಸಿದ್ದರಾಮಯ್ಯ ಇಂದು 'ಜನತಾ ದರ್ಶನ' ನಡೆಸಿದರು. ಆದ್ರೆ ಈ ವೇಳೆ ಸಿದ್ದರಾಮಯ್ಯ ಅವರ ಸಿಂಪ್ಲಿಸಿಟಿ ಕನ್ನಡಿಗರಿಗೆ ಇಷ್ಟವಾಗಿಬಿಟ್ಟಿದೆ!
ಹೌದು ರಾಜಕೀಯವಾಗಿ ಯಾರ ನಡುವೆ ಏನೇ ಮನಸ್ತಾಪ ಇದ್ದರೂ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಎಲ್ಲಾ ಪಕ್ಷದ ನಾಯಕರೂ ಒಂದೇ ಅಭಿಪ್ರಾಯ ಹೊಂದಿದ್ದಾರೆ. ಹಾಗೆ ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿಕ್ತವನ್ನು ಗೌರವಿಸುತ್ತಾರೆ. ಅದರಲ್ಲೂ ಒಬ್ಬ ರಾಜಕಾರಣಿಯು ತುಂಬಾ ಸಿಂಪಲ್ಲಾಗಿ ಬದುಕುವುದು ಕಷ್ಟದ ಮಾತು. ಆದ್ರೆ ಸಿಎಂ ಸಿದ್ದರಾಮಯ್ಯ ಅವರಿಗೆ ಅದೇ ಇಷ್ಟವಾಗಿದೆ. ಕರ್ನಾಟಕ ಕಂಡ ಕೆಲವೇ ಸಿಂಪಲ್ ಸಿಎಂಗಳ ಪೈಕಿ ಅವರು ಒಬ್ಬರು ಅಂತಿದ್ದಾರೆ ಅವರ ಬೆಂಬಲಿಗರು.

ಸಾಮಾನ್ಯರ ಜೊತೆ ಸಾಮಾನ್ಯರಾಗಿ ಸಿದ್ದರಾಮಯ್ಯ ಅವರು ಬದಕುತ್ತಾರೆ. ಇಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೂಡ, ಜನರ ಸಮ್ಮುಖದಲ್ಲೇ ಊಟ ಮಾಡಿ ಗಮನ ಸೆಳೆದರು ಸಿದ್ದರಾಮಯ್ಯ. ಈ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ & ಯಡಿಯೂರಪ್ಪ ಅವರು ಕೂಡ ಗ್ರಾಮ ವಾಸ್ತ್ರವ್ಯದಲ್ಲಿ ಸಿಂಪ್ಲಿಸಿಟಿ ಮೂಲಕ ಜನರ ಮನಸ್ಸು ಗೆದ್ದಿದ್ದರೆಂಬ ವಿಚಾರವನ್ನು ಇಲ್ಲಿ ಸ್ಮರಿಸಬಹುದು.
ಜನರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಧಿಕಾರಿಗಳನ್ನ ಅಭಿವೃದ್ಧಿ ವೇಗಕ್ಕೆ ರೆಡಿ ಮಾಡುವ ಕೆಲಸ ನಡೆಯುತ್ತಿದೆ. ಅದರಲ್ಲೂ ಜನಗಳ ಸಮಸ್ಯೆಗಳೇ ಬಗೆಹರಿಯುತ್ತಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಭಾರಿ ಸಮಸ್ಯೆ ಆಗುತ್ತಿದೆ ಅಂತಾ ಸಾವಿರಾರು ದೂರು ಬರುತ್ತಿದ್ದವು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದ ಸರ್ಕಾರ & ಸಿಎಂ ಸಿದ್ದರಾಮಯ್ಯ ಇಂದು 'ಜನತಾ ದರ್ಶನ' ನಡೆಸಿದರು. ಇದೇ ವೇಳೆ ಜನರ ಸಮಸ್ಯೆ ಅಲಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೂಡ ರವಾನಿಸಿದ್ದಾರೆ.

ಸಿಎಂ ಊಟದ ಫೋಟೋ ವೈರಲ್!
ಇನ್ನು 'ಜನತಾ ದರ್ಶನ' ನಡೆಯುವಾಗ ಸಿಎಂ ಸಿದ್ದರಾಮಯ್ಯ ಅವರು ಊಟಕ್ಕೆ ವಿರಾಮ ತೆಗೆದುಕೊಂಡರು. ಆಗ ಜನರ ನಡುವೆಯೇ ಒಂದಷ್ಟು ಆಹಾರ ಸೇವನೆ ಮಾಡಿದ್ದಾರೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆ ಸಿಎಂ ಸಿದ್ದರಾಮಯ್ಯ ಅವರ ಸಿಂಪ್ಲಿಸಿಟಿ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಜನತಾ ದರ್ಶನ ಮೂಲಕ ಸಾವಿರಾರು ಜನರ ಸಮಸ್ಯೆ ಆಲಿಸಿರುವ ಸಿಎಂ ಸಿದ್ದರಾಮಯ್ಯ, ಬಹುತೇಕರ ಸಮಸ್ಯೆಗಳಿಗೆ ಪರಿಹಾರ ಹುಡುಕಿಸಿದ್ದಾರೆ. ಹಾಗೆ ಅರ್ಜಿಗಳನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಸರಿಯಾದ ಕ್ರಮ ಕೈಗೊಳ್ಳವಂತೆ ಖಡಕ್ ಆದೇಶ ನೀಡಿದ್ದಾರೆ.
ಉದ್ಯೋಗ ಬೇಕೆಂದು ಹೆಚ್ಚಿನ ಅರ್ಜಿ
ಜನಸ್ಪಂದನ ಕಾರ್ಯಕ್ರಮಕ್ಕೆ 4-5 ಸಾವಿರ ಜನ ಅಹವಾಲುಗಳ ಜೊತೆ ಆಗಮಿಸಿದ್ರು, ಜನರು ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತೆ. ಹೀಗಾಗಿ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಜನಸ್ಪಂದನೆ ಕಾರ್ಯಕ್ರಮಕ್ಕೆ ನಿರೀಕ್ಷೆಗೆ ಮೀರಿ ಜನ ಬಂದಿದ್ರು ಅಂತಾ ಸಿಎಂ ತಿಳಿಸಿದ್ದಾರೆ. 3,500 ಮನವಿ ಸ್ವೀಕೃತವಾಗಿದೆ. ಬೆಳಿಗ್ಗೆಯಿಂದಲೇ ಜನರ ಬಳಿಗೆ ತೆರಳಿ ಖುದ್ದು ಕುಂದು ಕೊರತೆ ಆಲಿಸಿದೆ. ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳ ಬಗ್ಗೆ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
15 ದಿನಗಳ ಡೆಡ್‌ಲೈನ್ ಫಿಕ್ಸ್
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್ ಠಾಣೆ, ಹಾಸ್ಟೆಲುಗಳು ಮತ್ತಿತರೆಡೆಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು. ವಿಳಂಬ ನೀತಿಯು, ಭ್ರಷ್ಟಾಚಾರಕ್ಕೆ ಕೂಡ ದಾರಿ ಮಾಡಿಕೊಡುತ್ತೆ. ಆದ್ದರಿಂದ ತಕ್ಷಣ ಜನರಿಗೆ ಸ್ಪಂದಿಸಬೇಕು. ಕಾನೂನು ರೀತಿ ಆಗದಿದ್ದರೆ ಆಗ ಹಿಂಬರಹವನ್ನ ನೀಡಬೇಕು. ಇಂದು ಸ್ವೀಕರಿಸಿದ ಅರ್ಜಿಗಳನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. 15 ದಿನದೊಳಗೆ ಇವುಗಳನ್ನ ವಿಲೇವಾರಿ ಮಾಡಬೇಕು. ನಿಯಮಾವಳಿ ಅಡಿಯಲ್ಲಿ ಅರ್ಜಿಗಳ ವಿಲೇವಾರಿಗೆ ಅವಕಾಶವಿಲ್ಲದೆ ಇದ್ದರೆ, ಹಿಂಬರಹ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಸೂಚಿಸಿದ್ದಾರೆ.












Click it and Unblock the Notifications