Siddaramaiah: ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು!

ಬೆಂಗಳುರು,ಜುಲೈ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು, ಶೀತ, ಕೆಮ್ಮು, ಗಂಟಲು ನೋವಿನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ರಾಂತಿಗೆ ಜಾರಿದ್ದಾರೆ.

ಸಿಎಂ ಸಿದ್ದರಾಮಯ್ಯನವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಭೇಟಿಗೆ ಬಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಾಪಸ್ ಆಗಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಇಂದಿನ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆಯೂ ಇದೆ. ಶುಕ್ರವಾರ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ಹಲವಾರು ಬಾರಿ ಸಿದ್ದರಾಮಯ್ಯ ಅವರು ಕೆಮ್ಮುತ್ತಲೇ ಬಜೆಟ್ ಭಾಷಣವನ್ನು ಓದಿದ್ದರು.

CM Siddaramaiah Is Resting With Cold Cough And Sore Throat

ಇನ್ನೂ ಸರ್ಕಾರ ರಚನೆಗಳ ಬಳಿಕ ಅನೇಕ ದಿನಗಳಿಂದ ನಿರಂತರ ಕೆಲಸದಿಂದ ಮುಖ್ಯಮಂತ್ರಿ ಸಿದ್ದರಾಮ್ಯಯನವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗುತ್ತಿದೆ.ಶುಕ್ರವಾರ ಬಜೆಟ್ ಮಂಡನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಇಂದು (ಶನಿವಾರ) ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಸಿಎಂ ಭೇಟಿ ಮಾಡಲು ಬಂದಿದ್ದ ಅಧಿಕಾರಿಗಳನ್ನೂ ಸಿದ್ದರಾಮಯ್ಯ ಭೇಟಿಯಾಗಿಲ್ಲ. ಇತ್ತ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ಕೆಲ ಕಾಲ ಕಾದು ವಾಪಸ್ ತೆರಳಿದ್ದಾರೆ.

ಇಂದು (ಶನಿವಾರ) ಬೆಳಗ್ಗೆ ಸರ್ಕಾರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಿಎಂ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಅಲೋಕ್ ಮೋಹನ್, ಇಂಟಲಿಜೆನ್ಸ್ ಎಡಿಜಿಪಿ ಶರತ್ ಚಂದ್ರ ಸಿಎಂ ಭೇಟಿ ಸಾಧ್ಯವಾಗದೆ ವಾಪಸ್ಸಾಗಿದ್ದಾರೆ. ಇತ್ತ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್, ಸುಂದರ್ ರಾಜ್ ಸೇರಿದಂತೆ ಹಲವರು ಸಿಎಂ ಭೇಟಿಗೆ ಬಂದಿದ್ದರು. ಸಿಎಂ ಅನಾರೋಗ್ಯದ ಹಿನ್ನಲೆ ಮಂಡಳಿ ಪದಾಧಿಕಾರಿಗಳೂ ಸಹ ವಾಪಸ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+