ರಾಜ್ಯದಲ್ಲಿ ಸಚಿವ ಸಂಪುಟ ಸರ್ಜರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕೊಟ್ರು ಮಹತ್ವದ ಅಪ್ಡೇಟ್
ಬೆಂಗಳೂರು, ಡಿಸೆಂಬರ್, 04: ರಾಜ್ಯ ಸಚಿವ ಸಂಪುದಲ್ಲಿ ಮತ್ತೆ ಬದಲಾವಣೆಗಳಾಗಲಿವೆ ಎನ್ನವ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಇದೀಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಸಚಿವ ಸಂಪುಟ ಬಗ್ಗೆ ಯಾರು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಹೈಕಮಾಂಡ್ ಅದಕ್ಕೆ ಸೂಚನೆ ನೀಡಬೇಕು. ಇನ್ನೂ ಹೈಕಮಾಂಡ್ ಏನು ಹೇಳಿಲ್ಲ, ನಾನು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದರು. ಇದೇ ವೇಳೆ ಮುಡಾ ಹಗರಣದ ಬಗ್ಗೆ ಇ.ಡಿ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಪತ್ರ ಬಗ್ಗೆ ಪ್ರತಿಕ್ರಿಯಿಸಿ, ನಾಳೆ ಹೈ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.

ಒಂದು ದಿನ ಮುಂಚಿತವಾಗಿ ಲೋಕಾಯುಕ್ತಕ್ಕೆ ಪತ್ರ ಬರೆದಿರುವುದರ ಉದ್ದೇಶ ಏನು? ಇ.ಡಿ ಅಧಿಕಾರಿಗಳು ದುರುದ್ದೇಶ ಪೂರಕವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ತನಿಖೆ ಮಾಡುವ ಅಧಿಕಾರವೇ ಇಲ್ಲ ಎಂದು ಆಕ್ರೊಶ ಹೊರಹಾಕಿದರು.
ರಾಜ್ಯಾಪಾಲರು ತನಿಖೆ ಮಾಡಿ ಅಂತಾ ಲೋಕಾಯುಕ್ತಾಗೆ ಹೇಳಿರುವುದು. ಕೋರ್ಟ್ ಸಹ ಡಿಸೆಂಬರ್ 24ಕ್ಕೆ ತನಿಖೆ ವರದಿ ನೀಡಿ ಅಂತಾ ಹೇಳಿದ್ದಾರೆ. ಇದೀಗ ಇಡಿ ಯಾಕೆ ಲೆಟರ್ ಬರೆಯುತ್ತಾರೆ? ರಾಜಕೀಯವಾಗಿ ಇಡಿ ಈ ಕೇಸ್ ಮಾಡುತ್ತಿದೆ. ತನಿಖೆ ಮಾಡಿ ಈಗ ಯಾಕೆ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಪಿಟಿಐ ಹಾಗೂ ಮಾಧ್ಯಮಗಳಿಗೆ ರಿಲೀಜ್ ಮಾಡಿರುವುದು ಕಾನೂನು ಬಾಹಿರ ಎಂದು ವಿರೋಧ ವ್ಯಕ್ತಪಡಿಸಿದರು.
ಇನ್ನು ಡಿಸೆಂಬರ್ 5ರಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದಲ್ಲಿ ಸಮಾವೇಶ ನಡೆಯುತ್ತಿದೆ. ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚಾಗಿ ಜನರು ಕರೆದುಕೊಂಡು ಬರುತ್ತಾರೆ. ಹೆಸರು ಯಾವುದು ಬದಲಾವಣೆ ಆಗಿಲ್ಲ. ಕಾಂಗ್ರೆಸ್ ಪಕ್ಷವೂ ಸೇರಿಕೊಂಡು ಮಾಡುತ್ತಿದೆ ಎಂದು ಹೇಳಿದರು.
ಹಿಂದಿನ ಭೂಮಾಲಿಕ ದೇವರಾಜು ಕೂಡ ಮೇಲ್ಮನವಿ ಸಲ್ಲಿಸಿದ್ದಾರೆ. ದೇವರಾಜು ಪರ ವಕೀಲರು ಇಡಿ ಬರೆದಿರುವ ಪತ್ರವನ್ನು ಪ್ರಸ್ತಾಪಿಸಬಹುದು. ಆದರೆ ನಾಳೆ ವಿಚಾರಣೆ ಮುಖ್ಯವಾಗಿ ರಾಜ್ಯಪಾಲರ ಕ್ರಮವನ್ನೇ ಆಧರಿಸಿರುತ್ತದೆ. ರಾಜ್ಯಾಪಾಲರ ಅನುಮತಿ ನೀಡಿದ್ದು, ಸೂಕ್ತವೇ ಅಥವಾ ಅಲ್ಲವೇ ಎಂಬ ಬಗ್ಗೆ ವಾದ ಮಂಡನೆ ಆಗಲಿದೆ. ತನಿಖೆಗೆ ರಾಜ್ಯಪಾಲರ ಅನುಮತಿಯನ್ನು ಏಕ ಸದಸ್ಯ ಪೀಠ ಎತ್ತಿ ಹಿಡಿದಿದೆ. ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಕೂಡ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಮೇಲ್ಮನೆ ಸಲ್ಲಿಸಿದ್ದಾರೆ.
ಆದ್ದರಿಂದ ನಾಳಿನ ವಿಚಾರಣೆಯ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ಆ ಪ್ರಕರಣದ ವಿಚಾರಣೆಯ ವೇಳೆ ಲೋಕಾಯುಕ್ತ ತನಿಖೆಯ ವರದಿಯನ್ನು ಸಲ್ಲಿಸಬೇಕು. ಆಗ ಇಡಿ ಬರೆದಿರುವ ಪತ್ರ ಮಹತ್ವ ಪಡೆಯುವ ಸಾಧ್ಯತೆಯಿದೆ. ಸಿಬಿಐ ತನಿಖೆಗೆ ವಹಿಸಬೇಕೆಂಬ ಪ್ರಶ್ನೆಗೆ ಇಡಿ ಬರೆದಿರುವ ಪತ್ರ ಉತ್ತರವಾಗಬಹುದು. ಆದ್ದರಿಂದ ಇಡಿ ಬರೆದಿರುವಂತಹ ಪತ್ರದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.











Click it and Unblock the Notifications