ಗೃಹಲಕ್ಷ್ಮೀ ಹಣ ದಿಢೀರ್ 1000 ರೂಪಾಯಿಗೆ ಇಳಿಕೆ ಮಾಡುವ ಸಾಧ್ಯತೆ? Gruha Lakshmi

ಸಿದ್ದರಾಮಯ್ಯ ಅವರ ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ ಭರ್ಜರಿ 2000 ರೂಪಾಯಿ ಕೊಡುತ್ತಾ ಬಂದಿದೆ. ಬಡವರು ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಈ ಹಣ ದೊಡ್ಡ ಸಹಾಯ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದ 2000 ರೂಪಾಯಿ ನೀಡುವ ಇದೇ ಗೃಹಲಕ್ಷ್ಮೀ ಯೋಜನೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಆದರೆ ಈ ಯೋಜನೆ ಬಗ್ಗೆ ವಿರೋಧ ಪಕ್ಷದ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ಗೃಹಲಕ್ಷ್ಮೀ ಹಣ ದಿಢೀರ್ 1000 ರೂಪಾಯಿಗೆ ಇಳಿಕೆ ಮಾಡುವ ಸಾಧ್ಯತೆ?

ಹೌದು, ಗೃಹಲಕ್ಷ್ಮೀ ಹಣ ನಂಬಿಕೊಂಡು ಕರ್ನಾಟಕದಲ್ಲಿ ಕೋಟ್ಯಂತರ ಜನರು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ ಅನ್ನೋದು ಕಾಂಗ್ರೆಸ್ ನಾಯಕರ ಮಾತು. ಆದರೆ ಗೃಹಲಕ್ಷ್ಮೀ ಹಣವನ್ನ ಕೊಡುವ ಮೂಲಕ ಕರ್ನಾಟಕ ರಾಜ್ಯವನ್ನು ಬೀದಿಗೆ ತರುತ್ತಿದೆ ಕಾಂಗ್ರೆಸ್ ಪಕ್ಷ ಅನ್ನೋದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆರೋಪ. ಈ ಎಲ್ಲಾ ಆರೋಪಗಳು, ಮಾಹಿತಿಗಳ ನಡುವೆ ಕೂಡ ಗೃಹಲಕ್ಷ್ಮೀ ಹಣ ಬಡವರ ಮನೆಗಳಲ್ಲಿ ಸಾಕಷ್ಟು ಬಲ ತುಂಬುತ್ತಿದೆ. ಇಂತಹ ಸಮಯದಲ್ಲೇ, ಗೃಹಲಕ್ಷ್ಮೀ ಹಣ ದಿಢೀರ್ 1000 ರೂಪಾಯಿಗೆ ಇಳಿಕೆ ಮಾಡುವ ಸಾಧ್ಯತೆ?

CM Siddaramaiah Government Supporting Gruhalakshmi But This Is What Discussion Going On Social Media

ಗೃಹಲಕ್ಷ್ಮೀ ಹಣ ದಿಢೀರ್ 1000 ರೂಪಾಯಿಗೆ...

ಅಂದಹಾಗೆ 2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಲು, ಇದೇ 2000 ರೂಪಾಯಿ ಸಹಾಯ ಮಾಡುವ ಗೃಹಲಕ್ಷ್ಮೀ ಯೋಜನೆ ದೊಡ್ಡ ಪ್ರಭಾವ ಬೀರಿತ್ತು. ರಾಜ್ಯದ ಮಹಿಳೆಯರಿಗೆ ಈ ಸಹಾಯ ಧನ ದೊಡ್ಡ ಬೆಂಬಲ ಕೂಡ ನೀಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದೇ ಗ್ಯಾರಂಟಿ ಯೋಜನೆಗಳು. ಒಟ್ಟಾರೆ 5 ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಸಾಕಷ್ಟು ದೊಡ್ಡ ಹೆಸರು ಮಾಡಿದೆ. ಆದರೆ ಈ ಯೋಜನೆಯ ಹಣವನ್ನು 2000 ರೂಪಾಯಿಯಿಂದ ದಿಢೀರ್ 1000 ರೂಪಾಯಿಗೆ ಇಳಿಸಲು ಸರ್ಕಾರದಿಂದ ಚಿಂತನೆ ನಡೆದಿದೆಯಾ?

ಗೃಹಲಕ್ಷ್ಮೀ ಹಣ 2000 ರೂಪಾಯಿಯಿಂದ...

ಗ್ಯಾರಂಟಿ ಯೋಜನೆಗಳ ಪೈಕಿ 'ಗೃಹಲಕ್ಷ್ಮೀ' ದೊಡ್ಡ ಹವಾ ಎಬ್ಬಿಸಿದ್ದು, ಕನ್ನಡ ನಾಡಿನಲ್ಲಿ ಗೃಹಿಣಿಯರು ಇದರಿಂದ ಸಾಕಷ್ಟು ಲಾಭವನ್ನೂ ಪಡೆಯುತ್ತಿದ್ದಾರೆ. ಹೀಗಿದ್ದಾಗ 'ಗೃಹಲಕ್ಷ್ಮೀ' ಯೋಜನೆ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ಆದರೆ ಇಂತಹ ಪರಿಸ್ಥಿತಿಯಲ್ಲೇ ಗೃಹಲಕ್ಷ್ಮೀ ಯೋಜನೆ ಹಣ 2000 ರೂಪಾಯಿಯಿಂದ ದಿಢೀರ್ 1000 ರೂಪಾಯಿಗೆ ಇಳಿಸಲು ಸರ್ಕಾರದಿಂದ ಚಿಂತನೆ ನಡೆದಿದೆಯಾ? ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಹಾಗಿದ್ರೆ ಸೋಷಿಯಲ್ ಮೀಡಿಯಾದಲ್ಲಿ ಈಗ ಗೃಹಲಕ್ಷ್ಮೀ ಯೋಜನೆ ಹಣದ ಬಗ್ಗೆ ಹಬ್ಬಿರುವ ಗಾಳಿ ಸುದ್ದಿಯ ಅಸಲಿ ಸಮಾಚಾರ ಏನು?

ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಬದಲಾವಣೆ ಮಾಡ್ತಾರೆ ಅನ್ನೋ ಗಾಳಿ ಸುದ್ದಿ ಕುರಿತು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ, ಈ ಎಲ್ಲಾ ಗಾಳಿ ಸುದ್ದಿಗಳನ್ನೂ ಮೀರಿ 'ಗೃಹಲಕ್ಷ್ಮೀ' ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಸಿದ್ಧವಿಲ್ಲ. ಹೀಗಿದ್ದರೂ ವಿರೋಧ ಪಕ್ಷಗಳು ಮಾತ್ರ ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಅಂತಾ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ... ಹೀಗಾಗಿ 'ಗೃಹಲಕ್ಷ್ಮೀ' ಹಣದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎನ್ನಬಹುದು! ಈಗ ಇರುವ ಗೃಹಲಕ್ಷ್ಮೀ ಯೋಜನೆ ಹಣ 2000 ರೂಪಾಯಿ ಹೀಗೆ ಮುಂದುವರಿಯುತ್ತೆ ಅನ್ನೋದು ಕೂಡ ಗ್ಯಾರಂಟಿ ಅಂತಾ ಕೂಡ ಹೇಳಬಹುದಾಗಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+