CM-DCM Joint Pressmeet: ಅಧಿಕಾರ ಹಂಚಿಕೆ: ಸಿಎಂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ: ಚರ್ಚೆಯಾಗಿದ್ದೇನು?
ಬೆಂಗಳೂರು, ನವೆಂಬರ್ 29: ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಜಟಾಪಟಿ ಜೋರಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಆಹ್ವಾನಿಸಿದ್ದು, ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ್ಯವಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಮಹತ್ವದ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ.
ಕಾವೇರಿ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 2028 ರ ವಿಧಾನಸಭೆ ಚುನಾವಣೆ ನಮಗೆ ಬಹಳ ಮುಖ್ಯ. ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಬಹಳ ಮುಖ್ಯ. ಈ ಬಗ್ಗೆ ನಾನು ಡಿ ಕೆ ಶಿವಕುಮಾರ್ ಒಟ್ಟಿಗೆ ಕೂತು ಮಾತನಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ನಾನು ಡಿ.ಕೆ.ಶಿವಕುಮಾರ್ ಅವರು ಪೊನ್ನಣ್ಣ ನಾವು ಮೂವರು ಬ್ರೇಕ್ ಫಾಸ್ಟ್ ನಲ್ಲಿ ಭಾಗಿಯಾಗಿದ್ದೇವು. ಅಲ್ಲಿ ಏನೂ ಮಾತನಾಡಿಲ್ಲ. ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಇಂದು ನಮ್ಮ ಮನೆಗೆ ಬಂದಿದ್ದರು. ಒಟ್ಟಿಗೆ ಬ್ರೇಕ್ ಫಾಸ್ಟ್ ಒಟ್ಟಿಗೆ ಮಾಡಿದ್ದೇವೆ. ಹೈಕಮಾಂಡ್ ಮೊನ್ನೆ ಪೊನ್ನಣ್ಣರಿಗೆ ಕರೆ ಮಾಡಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಕರೆಯಿರಿ ಎಂದು ಹೇಳಿದ್ದರು. ಡಿ.ಕೆ. ಶಿವಕುಮಾರ್ ಅವರಿಗೂ ಇದನ್ನು ಹೇಳಿದ್ದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಕರೆದಿದ್ದರು. ಇನ್ನೊಂದಿನ ನಿಮ್ಮ ಮನೆಗೆ ಊಟಕ್ಕೆ ಬರ್ತಿನಿ ಅಂತ ಡಿ ಕೆ ಶಿವಕುಮಾರ್ ಅವರಿಗೆ ಹೇಳಿದ್ದೇನೆ ಎಂದರು.
ಪಕ್ಷದಲ್ಲಿ ಕೆಲ ಗೊಂದಲಗಳಿದ್ದವು. ನಾವು ಇಂದು ಮೀಟಿಂಗ್ ಮಾಡಿದ ಉದ್ದೇಶ, ಕೆಲವು ಗೊಂದಲಗಳು ನಿರ್ಮಾಣ ಆಗಿದ್ದೇವೆ. ಒಂದು ತಿಂಗಳಿನಿಂದ ಈ ಗೊಂದಲಗಳು ಶುರುವಾಗಿವೆ. ನಾವು ಇಬ್ಬರು ಮಾತನಾಡಿದ್ದೇವೆ. ನಮ್ಮ ಉದ್ದೇಶ 2028 ರ ಚುನಾವಣೆ, ಸ್ಥಳೀಯ ಸಂಸ್ಥೆ, ತಾಲೂಕು, ಜಿಲ್ಲಾ, ಗ್ರಾಮಪಂಚಾಯಿತಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. 2023 ರ ವಿಧಾನಸಭೆ ಚುನಾವಣೆ ಹೇಗೆ ನಾವಿಬ್ಬರು ಚರ್ಚೆ ಮಾಡಿದ್ದೇವೆ ಹಾಗೆಯೇ 2028 ರ ವಿಧಾನಸಭೆ ಚುನಾವಣೆಯಲ್ಲೂ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ಒಟ್ಟಿಗೆ ಹೋಗುತ್ತೇವೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ. ವಿರೋಧ ಪಕ್ಷದವರನ್ನು ಬಹಳ ಸಮರ್ಥವಾಗಿ ಎದುರಿಸುತ್ತೇವೆ. ಸುಳ್ಳು ಅಪಪ್ರಚಾರಗಳನ್ನು, ಸುಳ್ಳುಗಳನ್ನು, ಸುಳ್ಳು ಆರೋಪಗಳನ್ನು ಮಾಡುವುದು ಬಿಜೆಪಿಯ ಚಾಳಿ, ಹೀಗಾಗಿ ಇವರನ್ನು ಸಮರ್ಥವಾಗಿ ನಾವಿಬ್ಬರು ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications