ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪನವರನ್ನೂ ಮೀರಿಸುವ ಸಿದ್ದರಾಮಯ್ಯ

Written By:
Subscribe to Oneindia Kannada

ಬೆಂಗಳೂರು, ಅ 17: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರ ಎನ್ನುವುದಕ್ಕಿಂತ, ಸುಳ್ಳು ಹೇಳುವ ಸಿದ್ದರಾಮಯ್ಯನವರ ಸರಕಾರ ಎಂದರೆ ಸೂಕ್ತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮಂಗಳವಾರ (ಅ 17) ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಹಿಂದೆ ಇದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಸುಳ್ಳನ್ನೂ ಈಗಿನ ಮುಖ್ಯಮಂತ್ರಿ ಮೀರಿಸುತ್ತಿದ್ದಾರೆ. ಆ ಮೂಲಕ ಜನರಿಗೆ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ ಎಂದು ಎಚ್ಡಿಕೆ ಟೀಕಿಸಿದ್ದಾರೆ. (ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಅಂತಿಮ)

ಬೆಂಗಳೂರು ನಗರಾಭಿವೃದ್ದಿ ಸಚಿವ ಜಾರ್ಜ್ ಯಾವುದಕ್ಕೂ ಪ್ರಯೋಜನವಿಲ್ಲ. ಬೆಂಗಳೂರಿನಲ್ಲಿ 115 ವರ್ಷಗಳ ನಂತರ ದೊಡ್ಡ ಮಟ್ಟದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ.

CM Siddaramaiah biggest liar than Yeddyurappa, HD Kumaraswamy statement

ರಾಜ್ಯ ಸರಕಾರಕ್ಕೆ ಮೂರು ದಿನಗಳ ಮುಂಚೆಯೇ ಮುನ್ಸೂಚನೆ ಸಿಕ್ಕಿದ್ದರೂ ಯಾವ ರೀತಿಯ ಮುಂಜಾಗ್ರತಾ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಸಚಿವ ಜಾರ್ಜ್ ಅವರು ತುಂಬಾ ಲಘುವಾಗಿ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.

ಹಿಂದಿನ ಬಿಜೆಪಿ ಆಡಳಿತಕ್ಕೂ ಈಗಿನ ಸರಕಾರದ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜನರ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು, ಜನರ ಮೇಲೆ ಗೌರವವಿದ್ದರೆ ಸರಿಯಾದ ರೀತಿಯಲ್ಲಿ ಆಡಳಿತ ನಡೆಸಲಿ ಎಂದು ಕುಮಾರಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷವನ್ನು ಟೀಕಿಸಿದ್ದಾರೆ.

ಗುಂಡಿ ಮುಚ್ಚುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಸಿದ್ದರಾಮಯ್ಯ ಸರಕಾರ ಲೂಟಿ ಮಾಡಿದೆ. ಯಾವುದೋ ಅಸ್ತಿತ್ವವಿಲ್ಲದ ಕಂಪೆನಿಯ ಹೆಸರಿನಲ್ಲಿ ಟೆಂಡರ್ ಬಿಡುಗಡೆಯಾಗಿದೆ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಜನರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು, ಗ್ರಾಮ ವಾಸ್ತವ್ಯ ಮುಂದುವರಿಸಬೇಕು ಎನ್ನುವ ಮನಸ್ಸಿದೆ, ಆದರೆ ವೈದ್ಯರು ಅನುಮತಿ ನೀಡುತ್ತಿಲ್ಲ. ಸ್ವಲ್ಪದಿನದ ವಿಶ್ರಾಂತಿಯ ನಂತರ ಮತ್ತೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಕುಮಾರಸ್ವಾಮಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah biggest liar than BJP State president B S Yeddyurappa, JDS State President H D Kumaraswamy statement in Bengaluru on Oct 17.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ