ನನ್ನ ಷೂ ಹುಡುಕಿದ್ದಷ್ಟೇ, ಹಾಕಿದ್ದಲ್ಲ: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತಸಹಾಯಕರಿಂದ ಷೂ ಲೇಸ್ ಹಾಕಿಸಿಕೊಂಡ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಕನ್ನಡದ ಪೋಷಕ ನಟ ಚೇತನ್ ರಾಮರಾವ್ ಅಂತಿಮ ದರ್ಶನಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಬಂದಾಗ ಈ ಘಟನೆ ನಡೆದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಟ್ವಿಟ್ಟರ್ ನಲ್ಲಿ ಆರೋಪ ನಿರಾಕರಿಸಿರುವ ಸಿದ್ದರಾಮಯ್ಯ,"ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಯಾರೂ ನನ್ನ ಷೂ ಲೇಸ್ ಹಾಕಿಲ್ಲ. ನನ್ನ ಷೂಗಾಗಿ ಸಂಬಂಧಿಕರೊಬ್ಬರು ಹುಡುಕುವ ಕಾರಣಕ್ಕಾಗಿ ಬಗ್ಗಿದ್ದರು. ಆಗ ತೆಗೆದ ಫೋಟೋ ಅದು" ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.[ಆಪ್ತ ಸಹಾಯಕನಿಂದ ಶೂ ಧರಿಸಿಕೊಂಡ ಸಿಎಂ ಸಿದ್ದರಾಮಯ್ಯ]

Siddaramaiah

ಆದರೂ ಈ ವಿಡಿಯೋಗೆ ಟ್ವಿಟ್ಟರ್ ನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಷೂ ಲೇಸ್ ಕಟ್ಟಿಸಿಕೊಳ್ಳುವುದು ಅಧಿಕಾರದ ದುರುಪಯೋಗ ಎಂಬ ಆರೋಪ ಕೇಳಿಬಂದಿತ್ತು. ಸಿದ್ದರಾಮಯ್ಯ ಅವರ ನಡವಳಿಕೆ ಹೈಕಮಾಂಡ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂಬ ಮಾತುಗಳು ಕೇಳಿಬಂದಿದ್ದು, ಒಟ್ಟಿನಲ್ಲಿ ಷೂ ಲೇಸ್ ಹಾಕಿಸಿಕೊಂಡ ವಿಚಾರ ಭಾರೀ ಸುದ್ದಿಯಂತೂ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
“I want to clarify that nobody was putting my shoelace on. The photo in question was taken while a relative had bent down to look for my shoes,’’ tweeted by the CM Siddaramaiah.
Please Wait while comments are loading...