ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರೆ ಸ್ವಲ್ಪ ನಿಟ್ಟುಸಿರು ಬಿಡಿ, ಬಸ್‌ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ

|
Google Oneindia Kannada News

Recommended Video

ಸದ್ಯಕ್ಕೆ ಪ್ರಯಾಣಿಕರು ಖುಷಿ ಪಡುವ ವಿಚಾರ ಇದು..! | Oneindia Kannada

ಬೆಂಗಳೂರು, ಅಕ್ಟೋಬರ್ 8: ಇಂಧನ ಬೆಲೆ ಏರಿಕೆಯಾಗಿದೆ ಹಾಗಾಗಿ ಬಸ್‌ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ ಇದೀಗ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವುದರಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವವನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ

ಮಂಗಳವಾರ ಅಕ್ಟೋಬರ್ 9ರಂದು ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸರ್ಕಾರಿ ಬಸ್ ದರ ಏರಿಕೆ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಆದರೂ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಸದ್ಯಕ್ಕೆ ಪ್ರಯಾಣ ದರ ಏರಿಕೆ ಮಾಡುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಕಡಿಮೆ ಇದೆ.

ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರಕ್ಕೆ ಪ್ರಮುಖ ಕಾರಣಗಳು

ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರಕ್ಕೆ ಪ್ರಮುಖ ಕಾರಣಗಳು

ತೈಲ ದರ ಏರಿಕೆಯಿಂದ ಸಾರಿಗೆ ನಿಗಮಗಳಿಗೆ ಮಾಸಿಕ ಕೋಟ್ಯಂತರ ರೂ ಹೆಚ್ಚುವರಿ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ ನಾಲ್ಕು ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ತೈಲ ದರ ಏರಿಕೆಯಿಂದ ನಿಗಮಗಳ ಆರ್ಥಿಕ ಸ್ಥಿತಿ ಇನ್ನಷ್ಟು ಬೊಗಡಾಯಿಸಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿರುವುದರಿಂದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಉಪ ಚುನಾವಣೆ ಬಳಿಕ ಏರಿಕೆಯಾಗುತ್ತಾ ಬಸ್ ಪ್ರಯಾಣ ದರ?

ಉಪ ಚುನಾವಣೆ ಬಳಿಕ ಏರಿಕೆಯಾಗುತ್ತಾ ಬಸ್ ಪ್ರಯಾಣ ದರ?

ಈಗಾಗಲೇ ಉಚ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟಿಕೆಟ್ ದರ ಏರಿಕೆ ಸಂಬಂಧ ಮಂಗಳವಾರ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಕಡಿಮೆ ಇದೆ.

ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಬಸ್ ಪ್ರಯಾಣ ದರ ಶೇ.18ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್ ಪ್ರಯಾಣ ದರ ಶೇ.18ಹೆಚ್ಚಳಕ್ಕೆ ಪ್ರಸ್ತಾವನೆ

ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಶೇ,.18ರಷ್ಟು ಹೆಚ್ಚಳ ಮಾಡುವಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ಶೇ.16ರಷ್ಟು ಹೆಚ್ಚಳ ಮಾಡುವಂತೆ ಸೂಚಿಸಿತ್ತು. ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ 2 ರೂ ಕಡಿಮೆ ಮಾಡಿದ ಬಳಿಕ ಟಿಕೆಟ್ ದರ ಏರಿಕೆಯನ್ನು ತಡೆಹಿಡಿದಿದೆ.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

ರಾಜ್ಯ ಸರ್ಕಾರ ಇಂಧನ ದರ 2 ರೂ. ಕಡಿಮೆ ಮಾಡಿತ್ತು

ರಾಜ್ಯ ಸರ್ಕಾರ ಇಂಧನ ದರ 2 ರೂ. ಕಡಿಮೆ ಮಾಡಿತ್ತು

ರಾಜ್ಯ ಸರ್ಕಾರ ಸೆ.17ರಂದುರಂದು ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 2 ರೂ ಕಡಿಮೆ ಮಾಡಿತ್ತು, ಅದರ ಬೆನ್ನಲ್ಲೇ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆ ಟಿಕೆಟ್ ದರವನ್ನು ಶೇ.18ರಷ್ಟು ಹೆಚ್ಚಳ ಮಾಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಟಿಕೆಟ್ ದರ ಏರಿಕೆ ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.

ಸರ್ಕಾರ ಸುಂಕ ಕಡಿಮೆ ಮಾಡಿದ್ರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗ್ತಿಲ್ಲಸರ್ಕಾರ ಸುಂಕ ಕಡಿಮೆ ಮಾಡಿದ್ರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗ್ತಿಲ್ಲ

English summary
Chief minister HD kumaraswamy puts breakes, rolls back bus fare hike because of By elections. State road transport undertaking in karnataka announced a fare hike of 18 percent. Kumaraswamy ordered the transport department to withold the hike untill further order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X