ಅನಗತ್ಯ ವೆಚ್ಚ ಕಡಿತಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ
ಬೆಂಗಳೂರು, ಜೂನ್ 3: ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವಂತೆ ಅಧಿಕಾರಿಗಳಿಗೆ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಆಡಳಿತದಲ್ಲಿ ಯಾವುದೇ ಅನಗತ್ಯ ವೆಚ್ಚಗಳಿದ್ದಲ್ಲಿ ಅವುಗಳನ್ನು ಮರು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದ್ದಾರೆ.
ಸರಕಾರದ ಯಾವುದೇ ಸಂಸ್ಥೆಗಳು, ಅಧಿಕಾರಿಗಳು ನೂತನ ಕಾರು ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದರೆ ಅವುಗಳನ್ನು ಮರುಪರಿಶೀಲನೆ ಮಾಡಿ. ಸರಕಾರಿ ಕಚೇರಿಗಳು ಮತ್ತು ಅಧಿಕಾರಿಗಳ ವಸತಿ ನಿಲಯಗಳ ನವೀಕರಣ, ರಿಪೇರಿಯಂಥ ಕೆಲಸಗಳನ್ನೂ ಸದ್ಯಕ್ಕೆ ಇಟ್ಟುಕೊಳ್ಳಬೇಡಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸಿಎಂ ಕಚೇರಿ ಹೇಳಿದೆ.

ರೈತರ ಸಾಲಮನ್ನಾ ಪ್ರಸ್ತಾವನೆಯನ್ನು ಜಾರಿಗೊಳಿಸಲು ಎಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದು, ಇದಕ್ಕೆ ಎಲ್ಲಾ ಮೂಲಗಳಿಂದಲೂ ಹಣ ಹೊಂದಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ವೆಚ್ಚ ಕಡಿತಕ್ಕೆ ಕೈ ಹಾಕಿದ್ದಾರೆ.











Click it and Unblock the Notifications