ಕೊಡಗಿಗೆ ನೆರವು ಕೇಳಲು ಆಗಸ್ಟ್‌ 30ಕ್ಕೆ ದೆಹಲಿಗೆ ಹಾರಲಿದ್ದಾರೆ ಎಚ್‌ಡಿಕೆ

ಬೆಂಗಳೂರು, ಆಗಸ್ಟ್ 28: ಪ್ರವಾಹ ಪೀಡಿತ ಕೊಡಗಿಗೆ ನೆರವು ಕೇಳಲೆಂದು ಸಿಎಂ ಕುಮಾರಸ್ವಾಮಿ ಅವರು ಆಗಸ್ಟ್‌ 30ರಂದು ದೆಹಲಿಗೆ ತೆರಳಿ ಗೃಹ ಸಚಿವರನ್ನು ಹಾಗೂ ಮೋದಿ ಅವರನ್ನು ಭೇಟಿ ಆಗಲಿದ್ದಾರೆ.

ಇಂದು ಮೈಸೂರಿನಲ್ಲಿ ನಡೆದ ದಸರಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಕೊಡಗು ಹಾನಿಯ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವರದಿ ಸಲ್ಲಿಸಿದ್ದೇವೆ, ಆಗಸ್ಟ್‌ 30ರಂದು ನಾನೇ ಖುದ್ದಾಗಿ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದೇನೆ ಎಂದರು.

CM Kumaraswamy flying to Delhi on August 30 to ask help to Kodagu

ಕೇಂದ್ರದಿಂದ ಈ ವರೆಗೂ ನೆರವಿನ ಭರವಸೆ ಇರದಿರುವ ಕಾರಣದಿಂದ ಮುಖ್ಯಮಂತ್ರಿಗಳೇ ಖುದ್ದಾಗಿ ದೆಹಲಿಗೆ ತೆರಳಿ ಗೃಹ ಸಚಿವರನ್ನು ಭೇಟಿ ಮಾಡಲಿದ್ದಾರೆ. ಅಂದೇ ಮೋದಿ ಅವರನ್ನು ಭೇಟಿ ಆಗುವ ಸಾಧ್ಯತೆ ಇದೆ.

ಮೊನ್ನೆಯಷ್ಟೆ ಕೊಡಗಿನ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕೇಂದ್ರಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಜೊತೆಗೆ ಆರು ಕೋಟಿ ನೆರವು ಸಹ ನೀಡಿದ್ದರು. ರಾಜ್ಯ ಸರ್ಕಾರ ಕೂಡ ಈಗಾಗಲೇ ಕೊಡಗಿನ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+