ಕಾಂಗ್ರೆಸ್ ಬಿಜೆಪಿ ನಡುವೆ ರೀಡೂ ಫೈಟ್; ತನಿಖೆಗೆ ಮುಂದಾದ ಸರ್ಕಾರ: ಸಿಎಂ ಹೇಳಿದ್ದೇನು?
ಮುಚ್ಚಿಯೇ ಹೋಯಿತು ಎನ್ನುವಂತಿದ್ದ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಇದೀಗ ಮತ್ತೆ ಮುನ್ನೆಲೆ ಬಂದಿದೆ.
ಬೆಂಗಳೂರು,ಫೆಬ್ರವರಿ25: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ. ಇದರ ನಡುವೆಯೇ ಮುಚ್ಚಿಯೇ ಹೋಯಿತು ಎನ್ನುವಂತಿದ್ದ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಇದೀಗ ಮತ್ತೆ ಮುನ್ನೆಲೆ ಬಂದಿದೆ.
ಚುನಾವಣೆ ಹೊತ್ತಲಿ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಈ ಹಗರಣವನ್ನ ಮುಚ್ಚಿ ಹಾಕುಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾನು ಹೇಳಿದ್ದನ್ನು ಹೇಗೆ ಅವರು ಸುಳ್ಳು ಅಂತಾರೆ? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕಮಿಷನ್ ರಿಪೋರ್ಟ್ ನ್ನು ನಾನು ಓದಿ ಹೇಳಿದ್ದೇನೆ. ಅವರು ನೇಮಿಸಿದ್ದ ಕೆಂಪಣ್ಣ ಆಯೋಗ ರಿಪೋರ್ಟ್ ನ್ನೇ ನಾನು ಓದಿ ಹೇಳಿದ್ದೇನೆ. ಅದೇನು ಬಸವರಾಜ್ ಬೊಮ್ಮಾಯಿದ್ದಲ್ಲ. ನಾನು ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆಯೇ ಬರೋದಿಲ್ಲ, ಏನಾದರೂ ಸುಳ್ಳು ಹೇಳುತ್ತಿದ್ದಾರೆ ಅವರೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಅವರೇ ಹೇಳಿದ್ದಾರೆ, ಅಧಿಕಾರಿ ಗಳನ್ನು ತಂದಿದ್ದನ್ನು ನಾನೇ ಅನುಮೋದಿಸಿದ್ದು ನಾನೇ ಅಂತಾ, ಇದಕ್ಕಿಂತ ಸಾಕ್ಷಿ ಮತ್ತೇನು ಬೇಕು? ಅವರು ಮಾಡಿರೋದು ತಪ್ಪು ಅಂತಾ ಇದರಿಂದಲೇ ಗೊತ್ತಾಗುತ್ತಲ್ವಾ? ಅಡ್ವಕೇಟ್ ಜನರಲ್ ವಾದ ಆದಮೇಲೆ ಜಡ್ಜ್ ಏನು ಹೇಳಿದ್ದಾರೆ, ಅದು ಅಲ್ವಾ ಮುಖ್ಯ. ವಾದಗಳನ್ನು ನಮಗೆ ಬೇಕಾದಂತೆ ನಾವು ಮಾಡಿಕೊಳ್ಳುತ್ತೇವೆ. ಆದರೆ ಅಂತಿಮವಾಗಿ ಜಡ್ಜ್ ಕೊಟ್ಟ ತೀರ್ಪು ತಾನೇ ಮುಖ್ಯ. ಜಡ್ಜಮೆಂಟ್ ಹೇಳಿದ್ದೇನೆ, ಕಮಿಷನ್ ರಿಪೋರ್ಟ್ ಓದಿದ್ದೇನೆ. ಇದು ಕಟು ಸತ್ಯ, ಸಿದ್ದರಾಮಣ್ಣನವರು ಕಟು ಸತ್ಯವನ್ನು ಎದುರಿಸುವಂತ ಕಾಲ ಬಂದಿದೆ ಎಂದು ತಿರುಗೇಟು ನೀಡಿದರು.

ಹೀಗಾಗಿ ಮುಂದೆ ನಾವು ಏನು ಕ್ರಮ ತಗೋಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ, ತನಿಖೆಗೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು.












Click it and Unblock the Notifications