ಸಿಐಡಿ ವರದಿ ಸೋರಿಕೆಯಾಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Written By:
Subscribe to Oneindia Kannada

ಬೆಂಗಳೂರು, ಜುಲೈ, 15: ಡಿವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಿಐಡಿ ವರದಿ ಸೋರಿಕೆಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಸಿಐಡಿ ವರದಿ ಸೋರಿಕೆಯಾಗಿದೆ ಎಂದು ಶುಕ್ರವಾರ ವರದಿಯಾಗುತ್ತಿದೆ. ಗಣಪತಿ ಸಾವಿಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ವರದಿ ಬಿತ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.[ಜಾರ್ಜ್ ವಿರುದ್ಧ ಎಫ್ಐಆರ್ ಹಾಕುವಂತೆ ಕೋರಿದ್ದ ಅರ್ಜಿ ವಜಾ!]

karnataka

'ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಯಾವುದೇ ವರದಿಯನ್ನು ಇನ್ನು ಸಲ್ಲಿಕೆ ಮಾಡಿಲ್ಲ. ವಿಚಾರಣೆ ಮುಂದುವರಿದಿದ್ದು ಮಾಹಿತಿ ಕಲೆಹಾಕುತ್ತಿದೆ' ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.[ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಲ್ಲ. ವೃತ್ತಿ ಕಿರುಕುಳ ಕಾರಣ ಎಂದು ಸಿಐಡಿ ಹೇಳಿದೆ. ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಪ್ರಾಥಮಿಕ ತನಿಖಾ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದು ವರದಿ ಬಿತ್ತರವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.[ಲೋಕಾಯುಕ್ತದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!]

ಆಡಿಯೋ ಇದೆ
ಚಂದ್ರಶೇಖರ್ ಸ್ವಾಮೀಜಿ ಮತ್ತು ಡಿವೈ ಎಸ್ ಪಿ ಗಣಪತಿ ನಡುವಿನ ಆಡಿಯೋ ಸಂಭಾಷಣೆಯೊಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಈಗಿನ ಗುಪ್ತಚರ ದಳದ ಎಡಿಜಿಪಿ ಎ ಎಂ ಪ್ರಸಾದ್ ನನ್ನ ಬಡ್ತಿ ತಡೆಹಿಡಿದಿರಬಹುದು, ಮೇಲಿನವರಿಗೆ ಹೇಳಿ ಬಡ್ತಿ ಕೊಡಿಸುವಂತೆ ಚಂದ್ರಶೇಖರ್ ಸ್ವಾಮೀಜಿ ಬಳಿ ಗಣಪತಿ ಹೇಳಿಕೊಂಡಿದ್ದಾರೆ. ಸುಮಾರು ಎರಡು ನಿಮಿಷದ ಆಡಿಯೋ ಕ್ಲಿಪ್ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
DySP MK Ganapathi suicide case: CID yet to submit the report of Chief Minister DySP MK Ganapathi suicide case, CM Siddaramaiah said on July 15, 2016.
Please Wait while comments are loading...