Get Updates
Get notified of breaking news, exclusive insights, and must-see stories!

ಚನ್ನಪಟ್ಟಣ ಉಪಚುನಾವಣೆ: ಅಚ್ಚರಿ ಅಭ್ಯರ್ಥಿಗಳನ್ನು ಕಣಕಿಸಲು ಉಭಯ ಪಕ್ಷಗಳ ಪ್ಲ್ಯಾನ್‌: ಮಹಿಳಾ ಅಭ್ಯರ್ಥಿಗಳಿಗೆ ಕಣಕ್ಕೆ?

ಇನ್ನೇನು ಕೆಲವೇ ದಿನಗಳಲ್ಲಿ ಚನ್ನಪಟ್ಟಣ ಉಪಚುನಾವಣೆ ನಡೆಯಲಿದೆ. ಈ ಚುನವಾಣೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿವೆ. ಹೀಗಾಗಿ ಈ ಬಾರಿ ಈ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿರುವ ಡಿಕೆ ಸುರೇಶ್‌ ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಕಾಂಗ್ರೆಸ್‌ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪ್ಲ್ಯಾನ್ ಮಾಡಿಕೊಂಡಿವೆ. ಈ ಕ್ಷೇತ್ರದಲ್ಲಿ ಯೋಗೇಶ್ವರ್‌ ಎನ್‌ಡಿಎ ಮೈತ್ರಿ ಕೂಟದ ಪ್ರಬಲ ಆಕಾಂಕ್ಷಿ ಎಂದು ಕೇಳಿಬಂದಿದೆ. ಈ ಮಧ್ಯ ಲೋಕಸಭಾ ಸಂಸದ ಡಾ.ಸಿಎನ್ ಮಂಜುನಾಥ್‌ ಅವರ ಪತ್ನಿ ಅನಸೂಯಾ ಅವರ ಹೆಸರು ಸಹ ಕೇಳಿ ಬರುತ್ತಿದೆ.

Channapatna By-Election Major Parties Plan to Field Surprise Candidates - Women Candidates

ಅನಸೂಯಾ ಯಾರು?

ಎನ್‌ಡಿಎ ಮೈತ್ರಿ ಕೂಟ ಮಾಡಿಕೊಂಡ ಪ್ಲ್ಯಾನ್‌ಗೆ ಸರಿಯಾದ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಸಹ ಪ್ಲ್ಯಾನ್ ಮಾಡಿಕೊಂಡಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ್ ಅವರ ಪುತ್ರಿ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಹೋದರಿ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ ಎಂಬ ಊಹಾಪೋಗಳು ಜೋರಾದ ಬೆನ್ನಲ್ಲೆ, ಕಾಂಗ್ರೆಸ್‌ ಸಹ ತನ್ನ ಬತ್ತಳಿಕೆಯಿಂದ ಮತ್ತೊಂದು ಅಸ್ತ್ರವನ್ನು ಹೊರ ತೆಗೆಯಲು ಸಿದ್ಧತೆ ನಡೆಸಿದೆ.

ಕಾಂಗ್ರೆಸ್‌ ಕೈ ಹಿಡಿಯುತ್ತಾರಾ ಮತದಾರ?

ಎನ್‌ಡಿಎ ಮೈತ್ರಿ ಕೂಟ ಒಂದು ವೇಳೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇ ಆದಲ್ಲಿ, ಕಾಂಗ್ರೆಸ್‌ ಸಹ ಮಹಿಳಾ ಅಭ್ಯರ್ಥಿಗೆ ಮಣೆ ಹಾಕುವ ಲೆಕ್ಕಾಚಾರವನ್ನು ಮಾಡಿಕೊಂಡಿದೆ. ಅಂದಹಾಗೆ ಬಿಜೆಪಿ, ಜೆಡಿಎಸ್‌ ಅನಸೂಯಾ ಅವರಿಗೆ ಟಿಕೆಟ್‌ ನೀಡಿದ್ದೇ ಆದಲ್ಲಿ, ಎಚ್ ಕುಸುಮಾ ಹನುಮಂತರಾಯಪ್ಪರನ್ನು ಕಣಕ್ಕೆ ಇಳಿಸಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

ಕೆಪಿಸಿಸಿ ಅಧ್ಯಕ್ಷ ಈಗಾಗಲೇ ಹಲವು ಬಾರಿ ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಎದುರಾಳಿ ಯಾವುದೇ ಅಸ್ತ್ರವನ್ನು ಹೂಡಿದರೂ ಅದಕ್ಕೆ ಪ್ರತಿ ಅಸ್ತ್ರ ಸಿದ್ಧ ಎಂಬಂತೆ ಡಿಕೆಶಿ ಮಾಸ್ಟರ್‌ ಸ್ಟ್ರೋಕ್‌ ನೀಡಲು ತಯಾರಿ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಿಂದ ಸೋಲು ಕಂಡಿದ್ದ ಕುಸಮಾ ಈ ಬಾರಿ ಚನ್ನಪಟ್ಟಣದಿಂದ ಕಣಕ್ಕಿಳಿಸಲು ಡಿಕೆ ಬ್ರದರ್ಸ್‌ ಭರ್ಜರಿ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.

Channapatna By-Election Major Parties Plan to Field Surprise Candidates - Women Candidates

ಮಹಿಳೆಯರ ಪ್ರಭಾಲ್ಯ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,573 ಮತದಾರರು ಇದ್ದಾರೆ. ಈ ಪೈಕಿ 1,06,535 ಪುರುಷರು, ಹಾಗೂ 1,11,029 ಮಹಿಳಾ ಮತದಾರರಿದ್ದರೆ. ಒಕ್ಕಲಿಗ ಮತದಾರರನ್ನು ಸೆಳೆಯಲು ಉಭಯ ತಂಡಗಳು ಭರ್ಜರಿ ಯೋಜನೆ ರೂಪಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸಹ ಹೆಚ್ಚಿದ್ದಾರೆ. ದಲಿತರು ಮೂರನೇ ಸ್ಥಾನ ಹೊಂದಿದ್ದಾರೆ. ಅಲ್ಲದೆ ಇವರ ಮತಗಳೂ ಸಹ ನಿರ್ಣಾಯಕ ವಾಗಬಹುದು.

ಉಪಚುನಾವಣೆ ಏಕೆ?

ಚನ್ನಪಟ್ಟಣ ಕ್ಷೇತ್ರದ ಶಾಸಕ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಹೀಗಾಗಿ ಶಾಸಕ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಬೇಕಿದೆ. ಈ ಸ್ಥಾನವನ್ನು ಗೆದ್ದು ಕೊಳ್ಳಲು ಉಭಯ ಪಕ್ಷಗಳು ಭರ್ಜರಿ ರಣ ತಂತ್ರ ರೂಪಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+