ರಾಜ್ಯದ 5 ಡೀಮ್ಡ್ ವಿವಿಗಳ 'ಯೂನಿವರ್ಸಿಟಿ' ಟ್ಯಾಗ್ ಇನ್ನಿಲ್ಲ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 30:ತಮ್ಮ ಸಂಸ್ಥೆಗಳ ಹೆಸರಿನಿಂದ ಯುನಿವರ್ಸಿಟಿ (ವಿಶ್ವವಿದ್ಯಾಲಯ) ಪದ ಕೈ ಬಿಡುವಂತೆ ಕರ್ನಾಟಕದ 14 ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದ ಯುಜಿಸಿ ಈಗ ರಾಜ್ಯದ ಐದು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ 'ಯೂನಿವರ್ಸಿಟಿ' ಟ್ಯಾಗ್ ಕಳಚುವಂತೆ ಅಂತಿಮ ಆದೇಶ ನೀಡಿದೆ.

'ಯುನಿವರ್ಸಿಟಿ' ಹೆಸರು ಕೈ ಬಿಡುವಂತೆ ರಾಜ್ಯದ 14 ಸಂಸ್ಥೆಗಳಿಗೆ ನೋಟಿಸ್

ಗುರುವಾರ ಸಂಜೆ 4ಗಂಟೆಯೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ವಿವಿಗಳ ಆಡಳಿತ ಮಂಡಳಿಗಳಿಗೆ ಕಾಲಾವಕಾಶವಿದೆ. ದೇಶದಾದ್ಯಂತ ಒಟ್ಟು 123 ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಈ ನೋಟಿಸ್ ನೀಡಲಾಗಿದೆ. ಒಂದೊಮ್ಮೆ ವಿಶ್ವವಿದ್ಯಾಲಯ ಪದ ಕೈ ಬಿಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಯುಜಿಸಿ ಎಚ್ಚರಿಸಿತ್ತು.

ಡೀಮ್ಡ್ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ,ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಬ್ಳವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ತೀರ್ಪು ನೀಡಿತ್ತು. ಈ ಆದೇಶವನ್ನು ತಿಂಗಳೊಳಗೆ ಜಾರಿಗೊಳಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಯಾವ ಯಾವ ಡೀಮ್ಡ್ ವಿವಿಗಳಿಗೆ ಕುತ್ತು

ಯಾವ ಯಾವ ಡೀಮ್ಡ್ ವಿವಿಗಳಿಗೆ ಕುತ್ತು

ಕರ್ನಾಟಕದ ಕ್ರೈಸ್ಟ್ ವಿಶ್ವವಿದ್ಯಾಲಯ, ಜೈನ್ ವಿಶ್ವವಿದ್ಯಾಲಯ, ಯೆನೆಪೋಯ ವಿಶ್ವವಿದ್ಯಾಲಯಗಳಿಗೆ ನವೆಂಬರ್ 30 ಗುರುವಾರದ ಸಂಜೆ 4ರೊಳಗೆ ಬದಲಿ ಹೆಸರು ಸೂಚಿಸುವಂತೆ ಯುಜಿಸಿ ಆದೇಶಿಸಿದೆ. ಈ ಆದೇಶ ಪಾಲನೆ ಮಾಡದಿದ್ದರೆ ಯೂನಿವರ್ಸಿಟಿ ಹೆಸರನ್ನು ಕಳಚಬೇಕಾಗುತ್ತದೆ. 14ಕ್ಕೂ ಅಧಿಕ ವಿವಿಗಳಿಗೆ ಈ ಕುರಿತಂತೆ ಯುಜಿಸಿ ನವೆಂಬರ್ ಎರಡನೇ ವಾರದಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಆದರೆ, ವಿವಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ.

ಯೂನಿವರ್ಸಿಟಿ ಪದ ಬಳಸದಂತೆ ಆದೇಶ

ಯೂನಿವರ್ಸಿಟಿ ಪದ ಬಳಸದಂತೆ ಆದೇಶ

ಈ ಕೆಳಕಂಡ ವಿದ್ಯಾಸಂಸ್ಥೆಗಳು ತಕ್ಷಣದಿಂದ ಯೂನಿವರ್ಸಿಟಿ ಪದ ಬಳಸುವಂತಿಲ್ಲ.
* ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್
* ಜೆಎನ್ ಮೆಡಿಕಲ್ ಕಾಲೇಜ್, ಬೆಳಗಾವಿ
* ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಉಡುಪಿ

ತಮ್ಮ ಸಂಸ್ಥೆಯ ಹೆಸರಿನ ಜತೆಗಿರುವ ಯೂನಿವರ್ಸಿಟಿ ಹೆಸರನ್ನು ಕಳಚಿ, ಈ ಮುಂಚೆ ಇದ್ದ ಹಾಗೆ ಹೆಸರನ್ನು ಬಳಸುವಂತೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರರಿಂದ ಪಡೆದ ಡೀಮ್ಡ್ ವಿವಿ ಸ್ಥಾನಮಾನಕ್ಕೆ ಕುತ್ತುಂಟಾಗಲಿದೆ.

ದೇಶದ ಇತರೆ ಡೀಮ್ಡ್ ವಿವಿಗಳಿಗೆ ಕುತ್ತು

ದೇಶದ ಇತರೆ ಡೀಮ್ಡ್ ವಿವಿಗಳಿಗೆ ಕುತ್ತು

ಯುಜಿಸಿಯ ಇತ್ತೀಚಿನ ಆದೇಶದಂತೆ ಸಿಂಬಿಯೊಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ಹರಿದ್ವಾರದ ಗುರುಕುಲ್ ಕಂಗ್ರಿ ವಿಶ್ವವಿದ್ಯಾಲಯ, ಹರ್ಯಾಣದ ಮಹರ್ಶಿ ಮರ್ಕಂಡೇಶ್ವರ್ ವಿವಿ, ಫರಿದಾಬಾದಿನ ಲಿಂಗಯ ವಿವಿಗಳು ಬದಲಿ ಹೆಸರಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಯುಜಿಸಿ ಅಥವಾ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಗುರುವಾರ ಸಂಜೆ 4ರೊಳಗೆ ಅರ್ಜಿ ಸಲ್ಲಿಸಬೇಕಿದೆ, ಇಲ್ಲದಿದ್ದರೆ ಈ ಸಂಸ್ಥೆಗಳ ಮೇಲೂ ಕ್ರಮ ಜರುಗಿಸಬಹುದಾಗಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆ

ಡೀಮ್ಡ್ ಶಿಕ್ಷಣ ಸಂಸ್ಥೆ

ಡೀಮ್ಡ್ ಸ್ಥಾನಮಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ನಿಯಂತ್ರಣದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಇರುವಷ್ಟೇ ಹಕ್ಕು ಮತ್ತು ಅಧಿಕಾರಗಳಿರುತ್ತವೆ. ಡೀಮ್ಡ್ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರದ ಯಾವ ನಿಯಂತ್ರಣವೂ ಇರುವುದಿಲ್ಲ. ಅದು ಆಡಳಿತಾತ್ಮಕ ವ್ಯವಹಾರವಿರಬಹುದು, ವ್ಯವಸ್ಥೆ ಇರಬಹುದು, ಸಂಬಳ ನಿರ್ಧಾರ, ನೀಡಿಕೆ ಎಲ್ಲವೂ ಮುಕ್ತ ಹಾಗೂ ಮ್ಯಾನೇಜ್‌ಮೆಂಟ್ ನಿಯಂತ್ರಣದಲ್ಲಿರುತ್ತವೆ. ಅವು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತವೆ, ಅಡ್ಮಿಶನ್ ಮಾಡಿಕೊಳ್ಳುತ್ತವೆ. ತಮಗೆ ಇಷ್ಟ ಬಂದಂತೆ ಪಠ್ಯಕ್ರಮ(ಸಿಲಬಸ್)ವನ್ನೂ ರೂಪಿಸುತ್ತವೆ. ಸ್ವತಂತ್ರವಾಗಿ ಪ್ರಶ್ನೆ ಪತ್ರಿಕೆಗಳನ್ನೂ ಸಿದ್ಧಪಡಿಸುತ್ತವೆ, ಮೌಲ್ಯಮಾಪನ ಮಾಡುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Five deemed universities have been given an ultimatum by the UGC to immediately discontinue the word ‘university’ with their name.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ