• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.5ರಿಂದ ಹೊಚ್ಚ ಹೊಸ ಸುದ್ದಿವಾಹಿನಿ ಪವರ್ ಟಿವಿ ಪ್ರಸಾರ

|

ಬೆಂಗಳೂರು, ನವೆಂಬರ್ 04: ಕನ್ನಡ ಮಾಧ್ಯಮ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಸುದ್ದಿವಾಹಿನಿ ಪವರ್ ಟಿವಿ, ನವೆಂಬರ್ 05, 2018ರಿಂದ ತನ್ನ ಪ್ರಸಾರ ಆರಂಭಿಸಲಿದೆ.

ಪತ್ರಕರ್ತ ಚಂದನ್ ಶರ್ಮ ಸಾರಥ್ಯದ ಪವರ್ ನ್ಯೂಸ್ ಚಾನೆಲ್ ಕನ್ನಡ ನಾಡಿಗೆ ಸಮರ್ಪಣೆಯಾಗಿ ಹದಿನೈದು ದಿನಗಳು ಕಳೆದಿವೆ. ಮೊಟ್ಟಮೊದಲ ಬಾರಿಗೆ ಹುತಾತ್ಮ ಯೋಧರಿಗೆ ಸುದ್ದಿವಾಹಿನಿಯೊಂದನ್ನು ಅರ್ಪಣೆಯಾದ ಚಾನೆಲ್ ಎನಿಸಿಕೊಂಡಿದೆ.

ದೀಪಾವಳಿ ವಿಶೇಷ ಪುರವಣಿ

ಕ್ಯಾಪ್ಟನ್ ನವೀನ್ ನಾಗಪ್ಪ, ಏರ್ ಮಾರ್ಷಲ್ ಮುರಳಿ, ನಿವೃತ್ತ ಕರ್ನಲ್ ಅಚ್ಚಪ್ಪ ಅವರು ಪವರ್ ಟಿವಿಯನ್ನು ಲಾಂಚ್ ಮಾಡಿ ಶುಭಹಾರೈಸಿದರು.

ಕನ್ನಡದ 'ಅರ್ನಬ್' ಚಂದನ್ ಶರ್ಮ ಬ್ಯಾಕ್ ವಿತ್ 'ಪವರ್'

'ನೋ ನಾನ್ಸೆನ್ಸ್ ಓನ್ಲಿ ನ್ಯೂಸ್ ಸೆನ್ಸ್' ಅನ್ನೋ ಟ್ಯಾಗ್ ಲೈನ್ ನೊಂದಿಗೆ ಸದ್ದು ಮಾಡಲು ಬಂದಿದೆ. ಬೆಂಗಳೂರಿನ ಇನ್ ಫೆಂಟ್ರಿ ರೋಡಲ್ಲಿರೋ 'ಎಂಬೆಸಿ ಪಾಯಿಂಟ್ ' ನ ಮೂರನೇ ಮಹಡಿಯಲ್ಲಿ ಚಾನೆಲ್ ನ ಆಫೀಸ್ ಇದೆ. ನ್ಯೂಸ್ ಚಾನಲ್ ಜೊತೆಗೆ ವೆಬ್ ಪೋರ್ಟಲ್ ಕೂಡ ಲಾಂಚ್ ಆಗಿದೆ. ಫೇಸ್ ಬುಕ್, ಯೂಟ್ಯೂಬ್ ನಲ್ಲೂ ನೀವು 'ಪವರ್ ಟಿವಿ' ನೋಡಬಹುದು. ನಾಳೆಯಿಂದ ಮೀಡಿಯಾ ಲೋಕದಲ್ಲಿ ಮಹಾಕ್ರಾಂತಿ ಮಾಡಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಹೊಸ ಚಾನಲ್ ಬಗ್ಗೆ ಚಂದನ್ ಮಾತನಾಡಿ

ಹೊಸ ಚಾನಲ್ ಬಗ್ಗೆ ಚಂದನ್ ಮಾತನಾಡಿ

ಹೊಸ ಚಾನಲ್ ಬಗ್ಗೆ ಚಂದನ್ ಮಾತನಾಡಿ, 'ನಮ್ ಚಾನಲ್ ಯಾವ್ದೇ ಪೊಲಿಟೀಶಿಯನ್ ಗೆ ಸಂಬಂಧ ಪಡಲ್ಲ. ಕ್ರೈಂ ಅನ್ನು ವೈಭವೀಕರಿಸಲ್ಲ.‌ ಕಂಡ್ ಕಂಡವರ ಮನೆ ಬೀದಿ ಜಗಳನಾ ತಂದು ಉಣಬಡಿಸಲ್ಲ. ಸ್ವಸ್ಥ ಸಮಾಜದ ಕಲ್ಪನೆಯೊಂದಿಗೆ ಬರ್ತಿದ್ದೀವಿ. ಜನ ಇಷ್ಟು ದಿನ ಎಂಥಾ ಚಾನಲ್ ಬೇಕು ಅಂತ ನಿರೀಕ್ಷೆ ಮಾಡ್ತಿದ್ರೋ ಅಂಥಾ ಚಾನಲ್ ನಮ್ದಾಗುತ್ತೆ' ಅಂತ ಹೇಳಿದ್ರು.

ಚಂದನ್ ಶರ್ಮಾ ಸಾರಥ್ಯದಲ್ಲಿ ಬರ್ತಿದೆ 'ಪವರ್ ಟಿವಿ'.

ಚಂದನ್ ಶರ್ಮಾ ಸಾರಥ್ಯದಲ್ಲಿ ಬರ್ತಿದೆ 'ಪವರ್ ಟಿವಿ'.

ಕನ್ನಡ ದೃಶ್ಯ ಮಾಧ್ಯಮ ಲೋಕದಲ್ಲಿ ನಿಜಕ್ಕೂ ಒಂದು ಹೊಸ ಚಾನಲ್ ಗೆ ಸ್ಪೇಸ್ ಇದ್ಯಾ..? ಬರೋ ಚಾನಲ್ ಗಳು ತಮ್ಮ ಕ್ರೆಡಿಬಿಲಿಟಿಯನ್ನು ಹಾಗೂ ಮೀಡಿಯಾ ಎಥಿಕ್ ಅನ್ನು ಕಾಪಾಡ್ಕೊಂಡು ಹೋಗುತ್ತಿವೆಯೇ..? ಎಷ್ಟು ದಿನ ಇರುತ್ತವೆ ಅನ್ನುವಂತಹ ಹತ್ತಾರು ಪ್ರಶ್ನೆಗಳು, ಅನುಮಾನಗಳ ನಡುವೆಯೇ ಚಂದದ ಆ್ಯಂಕರ್ ಚಂದನ್ ಶರ್ಮಾ ಸಾರಥ್ಯದಲ್ಲಿ ಬರ್ತಿದೆ 'ಪವರ್ ಟಿವಿ'.

ಈಗಾಗಲೇ ಅಕ್ಟೋಬರ್ 19ರಿಂದ ನಿಮ್ಮ ಮನೆ ತಲುಪಿರುವ 'ಪವರ್ ಟಿವಿ' ನಾಳೆಯಿಂದ ಮೀಡಿಯಾ ಲೋಕದಲ್ಲಿ ಮಹಾಕ್ರಾಂತಿ ಮಾಡಲಿದೆ.

ಯೋಧರಿಗೆ ಸಮರ್ಪಣೆಯಾದ ಹೊಸ ವಾಹಿನಿ ಪವರ್ ಟಿವಿ

ಕನ್ನಡ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಇದೇ ಮೊದಲು

ಕನ್ನಡ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಇದೇ ಮೊದಲು

ಈ ಸಮಿಟ್ ನಲ್ಲಿ ದೇಶದ ಹೆಮ್ಮೆಯ ಯೋಧರು, ಶಿಕ್ಷಣ ತಜ್ಱರು, ಪೊಲೀಸ್ ಅಧಿಕಾರಿಗಳು, ಹಿರಿಯ ಪತ್ರಕರ್ತರು, ರಾಜಕಾರಣಿಗಳು, ಚಿತ್ರರಂಗದವರು, ರಂಗಭೂಮಿಯ ದಿಗ್ಗಜರು, ವೈದ್ಯರು, ಸಮಾಜ ಸೇವಕರು, ರೈತರು ಹೀಗೆ ವಿವಿಧ ಕ್ಷೇತ್ರದವರು ಪಾಲ್ಗೊಳ್ಳುತ್ತಾರೆ. ಎಲ್ಲಾ ಕ್ಷೇತ್ರದ ಪ್ರತಿನಿಧಿಗಳಾಗಿ ಆಗಮಿಸುವ ಗಣ್ಯರು ನಮ್ಮ ಚಾನಲ್ ನಿಂದ ಏನನ್ನು ನಿರೀಕ್ಷಿಸುತ್ತಾರೆ ಅನ್ನೋದನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ.

ಗಣ್ಯರ ಸಲಹೆ, ಅಭಿಪ್ರಾಯಗಳನ್ನ ದಾಖಲಿಸಿಕೊಂಡು ಬಲಿಷ್ಠವಾಗಿ ಮುನ್ನುಗ್ಗುವ ವಿಶ್ವಾಸದಲ್ಲಿದೆ ಪವರ್ ಟಿವಿ. ಹಾಗೆಯೇ ಚಾನಲ್ ತನ್ನ ವಿಶನ್ ಏನೆನ್ನುವುದನ್ನು ಕೂಡ ವೀಕ್ಷಕರಿಗೆ ತಿಳಿಸಲಿದೆ. ಹೀಗೆ ಸುದ್ದಿ ವಾಹಿನಿಯೊಂದು ಎಲ್ಲಾ ಕ್ಷೇತ್ರದ ಪ್ರತಿನಿಧಿಗಳ ನಿರೀಕ್ಷೆ ಏನೆಂಬುದನ್ನು ಅವರಿಂದಲೇ ಕೇಳಿಕೊಂಡು ಅವರ ನಿರೀಕ್ಷೆಯನ್ನು ಸುಳ್ಳಾಗಿಸುವುದಿಲ್ಲ ಅಂತ ಪ್ರಾಮಿಸ್ ಮಾಡಿ ಬರುತ್ತಿರುವುದು ಕನ್ನಡ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಇದೇ ಮೊದಲು.

ಸುದ್ದಿಗಳ ಮೂಲಕ ಎಲ್ಲರ ಧ್ವನಿಯಾಗಲಿ

ನಾಡಿದ್ದಿನಿಂದ ಎಷ್ಟು ವೇಗವಾಗಿ ಪವರ್ ಫುಲ್ ಆಗಿ ಬರಲಿದೆ ಅನ್ನೋ ಸೂಚನೆಯನ್ನ ಈಗಾಗಲೇ ರವಾನೆ ಮಾಡಿದೆ ಪವರ್ ಟೀಮ್. ಎನಿವೇ, ಪವರ್ ಫುಲ್ ಆಗಿ ಎಂಟ್ರಿ ಕೊಡಲಿರೋ ಪವರ್ ಟಿವಿ ಎಲ್ಲರ ನಿರೀಕ್ಷೆಗೂ ಮೀರಿ ಸಮಾಜಮುಖಿಯಾಗಿ, ಜನಪರವಾದ ಸುದ್ದಿಗಳ ಮೂಲಕ ಎಲ್ಲರ ಧ್ವನಿಯಾಗಲಿ ಅನ್ನೋದು ನಮ್ಮ ಆಶಯ ಎಂದು ಹೇಳಿಕೊಂಡಿದ್ದಾರೆ.

English summary
Journalist Chandan Sharma led Power Channel Kannada launched by Ex Servicemen on October 19,2018. The new channel will go on Air from November 05, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X